ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೩೩೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೭೮ ಶ್ರೀಮದ್ಭಗವತರ [ಅಧ್ಯಾ, ಆ ರೋಮಾಂಚವು ಹುಟ್ಟಿತು. ಕಣ್ಣುಗಳಲ್ಲಿ ಆನಂದಬಾಷ್ಪವು ತುಂಬಿಕೊಂ ಡುದರಿಂದ, ಅವರನ್ನು ಚೆನ್ನಾಗಿ ನೋಡುವುದಕ್ಕೂ ಅಶಕ್ಯವಾಯಿತು. ಆಮೇಲೆ ಆ ಮಹರ್ಷಿಯು, ಮೆಲ್ಲಗೆ ಮೇಲೆದ್ದು, ನಮ್ರತೆಯಿಂದ ಕೈಜೋ ಡಿಸಿಸಿತು, ಅವರನ್ನು ತನ್ನ ಕೈಗಳಿಂದ ಅಪ್ಪಿಕೊಳ್ಳುವಂತೆ ಆತುರದಿಂದ ಮುಂದೆ ಬಂದುಗದ ದಸ್ವರದೊಡನೆ ನಮೋ ನಮಃ” ಎಂಬ ನಾಲ್ಕಕ್ಷರ ಗಳನ್ನು ಮಾತ್ರ ಹೇಳಿದನು. ಆಮೇಲೆ ಅವರಿಗೆ ಆಸನವನ್ನು ಕೊಟ್ಟು, ಪಾದಗಳನ್ನು ತೊಳೆದು, ಪುಷ್ಪ, ಧೂಪ, ಗಂಧಾನುಲೇಪನಗಳಿಂದ ಪೂಜಿ ಸಿದನು. ಅವರಿಬ್ಬರೂ, ಆಸನದಲ್ಲಿ ಕುಳಿತು ಪ್ರಸನ್ನ ದೃಷ್ಟಿಯಿಂದ ತನ್ನನ್ನು ನೋಡುತ್ತಿರುವಾಗ, ತಿರುಗಿ ಆ ಮಾರ್ಕoಡೇಯನು ಅವರ ಪಾದಗಳಿಗೆ ನಮಸ್ಕರಿಸಿ ಹೀಗಂದು ಹೇಳುವನು. ಕೇ ! ವಿಭೂ ! ನಾರಾಯಣಾ ! ನಿನ್ನ ಮಹಿಮೆಯನ್ನು ಹೇಗೆಂದು ವರ್ಣಿಸಲಿ ! ಹೇಗೆಂದು ಸ್ತುತಿಸಲಿ ! ನನಗಾಗಲಿ, ಇತರ ಪ್ರಾಣಿಗಳಿಗಾಗಲಿ, ಕೊನೆಗೆ ಬ್ರಹ್ಮ ರುದ್ರರಿಗಾಗಲಿ, ನಡೆಯತಕ್ಕ ಪ್ರಾಣವ್ಯಾಪಾರವೆಲ್ಲವೂ ನಿನ್ನ ಪ್ರೇರಣೆಯಿಂದಲೇ ಹೊರತು ಬೇರೆಯಲ್ಲ. ನಿನ್ನಿಂದ ಪೈಗಿತವಾದ ಆ ಪ್ರಾಣಿಗಳನ್ನನುಸರಿಸಿಯೇ ಸಮಸ್ಯೆ ಪ್ರಾಣಿಗಳ ಮನಸ್ಕೂ, ವಾಕ್ಯ, ಇಂದ್ರಿಯಗಳೂ, ತಮ್ಮ ತಮ್ಮ ಕಾರ್ ಗಳನ್ನು ನಡೆಸುವುವು. ಹಾಗೆ ನನ್ನ ಪ್ರೇರಣೆಯಿಂದಲೇ ಸಮಸ್ಯೆ ಬಂತು ಗಳೂ, ಆಯಾ ಶಾಲ್ಯಗಳನ್ನು ನಡೆಸುವುದಾದರೆ, ನಿನ್ನಂತೆಯೇ ಎಲ್ಲರೂ ಏಕೆ ನನ್ನನ್ನು ಉಪಾಸಿಸಬಾರದು” ಎಂದರೆ, ನಿನ್ನನ್ನು ಒಂದಾವರ್ತಿಯಾ ದರೂ ಭಜಿಸಿ, ಸ್ವಲ್ಪವಾದರೂ ಅನುಕೂಲ್ಯವುಳ್ಳವರಿಗಮಾತ್ರವೇ ನೀನು ಆ ವಿಧವಾದ ಭಾವವನ್ನು ಸ್ಥಿರಪಡಿಸುವೆ! ಓ ಭಗವಂತಾ ! ಈಗ ನೀನು ಕೃಕೊಂಡಿರತಕ್ಕ ಈ ದಿವ್ಯಮೂರ್ತಿಗಳೆರಡೂ, ಮೃತ್ಯುವನ್ನು ಜಯಿಸಿ, ಸಂಸಾರಕಾಶವನ್ನರಗಿಸಿ, ಮರುಲೋಕಗಳಿಗೂ ಕ್ಷೇಮವನ್ನುಂಟು ಮಾರುವುದಕ್ಕಾಗಿಯೇ ಹೊರತು ಬೇರೆಯಲ್ಲ. ಹೀಗೆಯೇ ನೀನು ಕೃಕೊಂ ಇರತಕ್ಕ ಬೇರೆ ಅವತಾರಗಳೆಲ್ಲವೂ ಲೋಕರಕ್ಷಣಕ್ಕಾಗಿಯೇ ! ಈ ರಕ್ಷಣವ್ಯಾಪಾರವು ಹೇಗೋ ಹಾಗೆಯೇ ಸೃಷ್ಟಿಸಂಹಾರಕಾರಗಳೂ ನಿನ್ನ ವ್ಯಾಪಾರಗಳೇ ! ಬೇಡರ ಹುಳುವು ಶರೀರದಿಂದ ನೂಲೆಗೆ