ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೩೩೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಅಕ್ಕಾ??) ದ್ವಾದಶಕ್ಕಂಧನ. ಹೀಗೆ ಅಪ್ರಮೇಯಸ್ವರೂಪಸ್ವಭಾವವುಳ್ಳವನಾಗಿ, ಎಂತಹ ವಾದಗಳಿಂದ ಊ ನಿರ್ಣಯಿಸಲಾರದವನಾಗಿ, ಅಪರಿಚ್ಛೇದ್ಯಜ್ಞಾನಸ್ವರೂಪನಾದ ಮಹಾಪುರುಷನಿಗೆ ನಮಸ್ಕಾರವು"ಎಂದನು.ಇದು ಎಂಟನೆಯ ಅಧ್ಯಾಯವು. ಮಾರ್ಕಂಡೇಯನಿಗೆ ಶ್ರೀಹರಿಯು ತನ್ನ ವ + 1 ಪ್ರಭಾವವನ್ನು ತೋರಿಸಿದುದು. ಮಾರ್ಕಂಡೇಯನು ಹೀಗೆ ಸ್ತುತಿಸಲು, ನರಸಖನಾದ ನಾರಾಯ ಣನು, ಅವನನ್ನು ಪ್ರಸನ್ನ ದೃಷ್ಟಿಯಿಂದ ನೋಡಿ 'ಓ ಮಷಿತಿಲಕ'ಎಡ ಬಿಡದ ಚಿತ್ತಸಮಾಧಿಯಿಂದಲೂ, ನನ್ನಲ್ಲಿ ಭಕ್ತಿಯಿಂದಲೂ, ತಪಸ್ಸು, ವೇದಾಧ್ಯಯನ, ಒ೦ದ್ರಿಯನಿಗ್ರಹ, ಮೊದಲಾದ ನಿಯಮಗಳಿಂದಲೂ ನೀನು ಸಿದನೆನಿಸಿದೆ! ಬ್ರಹ್ಮರ್ಷಿಗಳಲ್ಲಿ ನೀನೇ ಮೇಲೆನಿಸಿಕೊಂಡಿರುವೆ! ನಿನ್ನ ನೈಷ್ಠಿಕಬ್ರಹ್ಮಚಯ್ಯಗೆ ನಾವು ಬಹಸ ಸಂತುಷ್ಟರಾದೆವು. ನಿನಗೆ ಶುಭವಾ ಗತಿ ! ನಾನು ನಿನಗೆ ವರಪ್ರದನಾಗಿ ಬಂದಿರುವೆನು ! ಬೇಕಾದ ವರವನ್ನು ಕಳು” ಎಂದನು. ಅದಕ್ಕಾ ಋಷಿಯು « ಓ ದೇವದೇವೇಶಾ ! ಆಿತದಖನಿವಾ ರಕಾ! ಅಚ್ಯುತಾ ! ನಿನಗೆ ಜಯವಾಗಲಿ ! ಈಗ ನೀನು ನನಗೆ ದರ್ಶನವ ನ ಕಟ್ಟೆಯಲ್ಲವೆ? ಇದೇ ನನಗೆ ಸಾಕು ! ಇದೇ ನನಗೆ ದೊಡ್ಡವರವು. ಬ್ರಹ್ಮಾದಿಗಳಕರ ಯೋಗಪರಿಶುದ್ಧವಾದ ಮನಸ್ಸಿನಿಂದ ನಿನ್ನ ಪಾದಾರವಿಂದಗಳ ದರ್ಶನವನ್ನು ಅಭಿಲಷಿಸುತ್ತಿದ್ದರೂ, ಪ್ರತ್ಯಕ್ಷವಾಗಿ ನೋಡಲಾರದಿರುವರು! ಅಂತಹ ನಿನ್ನ ದರ್ಶನವು ನನ್ನ ಕಣ್ಣುಗಳಿಗೆ ಪ್ರ ತ್ಯಕ್ಷವಾಗಿ ಲಭಿಸಿದಮೇಲೆ, ನಾನು ಇದಕ್ಕಿಂತಲೂ ಹೆಚ್ಚಾಗಿ ಬಯಸತಕ್ಕ ವರವೇನಿದೆ ? ಓ ಪುಂಡರೀಕಾಕ್ಷ! ಪುಣ್ಯಕಶಿಖಾಮಣಿ : ನಿನ್ನ ದ ರ್ಶನವೊಂದೇ ನನಗೆ ಉತ್ತಮೋತ್ತಮವಾದ ಲಾಭವೆನಿಸಿದ್ದರೂ,ನಿನ್ನ ಮಾ ಯಾಪ್ರಭಾವವನ್ನೂ ನಾನು ಒಮ್ಮೆ ಪ್ರತ್ಯಕ್ಷವಾಗಿ ನೋಡಬೇಕೆಂದು ಬ ಯಸುವನು. ಬ್ರಹ್ಮನಿಂದ ಹಿಡಿದು ಕೀಟಶರಂಗವಾಗಿ ಸಮಸ್ತಲೋಕವು ಧರಣಿಗೆ ಮರುಳಾಗಿ,ಸಬ್ಬವಾಚ್ಯವಾದ ಸ್ವರೂಪವನ್ನು