ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೩೩೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


981 ಅಭ್ಯಾ: F| ದ್ವಾದಶಸ್ಕಂಧನ. ಸುತ್ತ ಬಂದುವು. ಆ ಮಹರ್ಷಿಯೂ ಅವುಗಳಲ್ಲಿ ಸಿಕ್ಕಿಬಿದ್ದು, ಹಿಂದು ಮುಂದುತೋರದೆ, ಭಯದಿಂದ ತಪ್ಪಳಿಸುತ್ತಿದ್ದನು. ಆ ಮಹರ್ಷಿಯು ನೋ ರುತ್ತಿರುವಾಗಲೇ ಪ್ರಚಂಡವಾಯುಪ್ರೇರಿತಗಳಾದ ಸಮುದ್ರತರಂಗಗಳಿಂ ದೆಲೂ, ಮಹಾವೃಷ್ಟಿಯಿಂದಲ, ಭೂಮಂಡಲವೆಲ್ಲವೂ ಸಮಸ್ತಪರತ ದ್ವೀಪಗಳೊಡನೆ ಮುಳುಗಿಹೋಯಿತು. ಕ್ರಮಕ್ರಮವಾಗಿ ಭೂಮ್ಯಂತರಿ ಕ್ಷಗಳೂ, ದೇವಲೋಕ ನಕ್ಷತ್ರಮಂಡಲಗಳೂ, ದಿಕ್ಕುಗಳೂ ಸೇರಿ, ಕೈ ಲೋಕ್ಯವೂ ನೀರಿನಲ್ಲಿ ಮುಳುಗಿಹೋಗಿದ್ದಿತು. ಮಾರ್ಕಂಡೇಯನೊಬ್ಬ ನುಮಾತ್ರ ಆ ಜಲಮಧ್ಯದಲ್ಲಿ, ಕೆದರಿದ ಜಡೆಗಳೊಡನೆ, ಮಂಕಿನಂತೆಯೂ, ಕುರುಡನಂತೆಯೂ, ಏನೊಂದೂ ತೋರದೆ ಕಳವಳಿಸುತ್ತಿದ್ದನು. ಕ್ರಮಕ್ರಮ ವಾಗಿ ಅವನಿಗೆ ಹಸಿವಬಾಯಾರಿಕೆಗಳು ಹೆಚ್ಚು ತಬಂದುವು. ಮೊಸಳೆ ಗಲೂ, ತಿಮಿಂಗಿಲಗಳೂ, ಅವನ ದೇಹವನ್ನು ಕಿತ್ತು ತಿನ್ನುವುದಕ್ಕೆ ತೊಡಗಿ ದುನ, ಬಿರುಗಾಳಿಯೂ, ಸಮುದ್ರದ ಅಲೆಗಳೂ ಅವನನ್ನು ನಾನಾಕರ ಯಿಂದ ಅಪ್ಪಳಿಸುತ್ತಿದ್ದುವು. ಗಾಢಾಂಧಕಾರವು ಕವಿದುಕೊಂಡಿತು. ಹೀಗೆ ನಾನಾವಿಧವಾದ ಉಪದ್ರವಗಳಿಂದ ಶಕ್ತಿಗುಂದಿದ್ದ ಆ ಮಹರ್ಷಿಗೆ, ಭೂಮ್ಯಾಕಾಶಗಳಾಗಲಿ, ದಿಕ್ಕುಗಳಾಗಲಿ ಯಾವುದೂ ತೋರದಂತಾ ಯಿತು. ಆಗ ಆತನ ಅವಸ್ಥೆಯನ್ನು ಕೇಳಬೇಕೆ ? ಒಂದುಕಡೆಯಲ್ಲಿ ಪ್ರವಾ ಹದ ಸುಳಿಗಳು ಅವನನ್ನು ಒಳಕ್ಕಳೆಯುವುವು. ಮತ್ತೊಂದು ಕಡೆಯಲ್ಲಿ ಅಲೆಗಳು ಮೇಲೆ ಬಿದ್ದು ಅಪ್ಪಳಿಸುವುವು. ಮತ್ತೊಂದು ಕಡೆಯಲ್ಲಿ ಚಲಚರ ಗಳು ತಮ್ಮೊಳಗೆ ಜಗಳವಾಡುತ್ತ ಬಂದು, ಆ ಕೋಪದಿಂದ ಇವನಮೇಲೆ ಬಿದ್ದು ಕಿತ್ತು ತಿನ್ನುವುವು ಈ ಉಪದ್ರವಗಳಲ್ಲಿ ಅವಂಗೆ ಏನೂ ತೋರಿ ದಂತಾಗಿ, ಮೋಹವೊಂದು ಕಡೆ, ಭಯವೊಂದುಕರೆ, ದುಃಖವೊಂದುಕಡೆ, ಸಂಕಟವೊಂದುಕಡೆ, ಶೀತೋಷ್ಣಾದಿ ಪ್ರಾಬಲ್ಯರಿಂದ ದೇಹದಲ್ಲಿ ತಲೆದೋ ರಿದ ವ್ಯಾಧಿಯೊಂದುಕd, ಹೀಗೆ ನಾನಾಬಗೆಯ ಉಪದ್ರವಗಳಿಗೆ ಸಿಕ್ಕಿ ಮೃತ್ಯುಗ್ರಸ್ತನಾದಂತೆ ತಿಳಿಸುತ್ತಿದ್ದನು. ಆಗ ಆ ಮಹರ್ಷಿಯು, ವಿಷ್ಣು ಮಾಯೆಯಿಂದ ಮರೆಸಲ್ಪಟ್ಟ ಅತ್ಮಸ್ವರೂಪವುಳ್ಳವನಾಗಿ, ಲಕ್ಷಕ ವರ್ಷಗಳವರೆಗೆ ಹಾಗೆಯೇ ಮಹಾಸಮುದ್ರಮಧ್ಯದಲ್ಲಿ ಸಿಕ್ಕಿ ಭ್ರಪಿ