ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೩೪೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೫೩೪ ಶ್ರೀಮದ್ಭಾಗವತರ [ಅಧ್ಯಾ.. ಸುತ್ತಿದ್ದನು. ಹೀಗೆ ಸಮುದ್ರದಲ್ಲಿ ತೇಲಿ ಬರುತ್ತಿರುವಾಗ ಆ ಮಹರ್ಷಿಗೆ ಒಂದಾನೊಂದು ಕಡೆಯಲ್ಲಿ ಸಣ್ಣದ್ವೀಪದಂತೆ ತಿಟ್ಟಾದ ನೆಲವುಸಿಕ್ಕಿತು. ಅದರಲ್ಲಿ ಪಪ್ಪಫಲಸಮೃದ್ಧವಾದ ಆಲದ ಸಸಿಯೊಂದು ಕಾಣಿಸಿತು. ಈಶಾನ್ಯ ದಿಕ್ಕಿಗೆ ಅಭಿಮುಖವಾಗಿ ನೀಡಿದ ಆದರ ಒಂದಾನೊಂದು ಕೊಂಬೆ ಯಲ್ಲಿ, ದೊನ್ನೆ ಯಂತೆ ಸುರುಟಿಕೊಂಡ ಒಂದಾನೊಂದು ಎಲೆಯಮೇಲೆ ಸಣ್ಣ ಮಗುವೊಂದು ಮಲಗಿದ್ದುದನ್ನು ಕಂಡನು ಆ ಮಗುವು ತನ್ನ ದೇಹ ಕಾಂತಿಯಿಂದ ಆಗಿನ ಗಾಢಾಂಧಕಾರವೆಲ್ಲವನ್ನೂ ಕಬಳಿಸುವಂತೆ ಪ್ರಕಾ ಶಿಸುತ್ತಿದ್ದಿತು. ಅದಕ್ಕೆ ಮರಕತದಂತೆ ಶ್ಯಾಮಲವಾದ ಮೈ ! ಕಮಲದಂತೆ ಮನೋಹರವಾದ ಮುಖದ ಸೊಗಸು ! ಶಂಖದಂತೆ ಕೊಲ್ಲು ! ವಿಶಾಲ ವಾದ ಎದೆ! ಎಸಳಾದ ಮೂಗು! ಅಂದವಾದ ಹುಬ್ಬುಗಳು! ಉಸಿರಾಟದಿಂದ ಆಲುಗಾಡುತ್ತಿರುವ ಮುಂಗುರುಳುಗಳ ಸೊಗಸು ! ಬಲಮುರಿಶಂಖದಂತೆ ಸುಳಿಯಿಂದ ಕೂಡಿದ ಕಿವಿಗಳಮೇಲೆ, ದಾಳಿಂಬಿಯ ಹೂವಿನಂತಿರುವ ಕರ್ಣಾವತಂಸಗಳು ! ಹವಳದಂತಿರುವ ತುಟಿಗಳ ಕoತಿಯಿಂದ ಸ್ವಲ್ಪ ಕಂಪೇರಿದ ಮುಗುಳ್ಳಗೆ ! ಕಮಲಪ್ರಟದಂತೆ ಕೆಂಪಾದ ಕಡೆಗಣ್ಣುಗಳಲ್ಲಿ, ಮಂದಹಾಸಮನೋಹರವಾದ ದೃಷ್ಟಿ ! ಶಾಸೋಛಾಸಗಳಿಂದ ಆಗಾ ಗ ಕದಲುತ್ತಿರುವ ತ್ರಿವಳಿಗಳಿಂದಲೂ, ಆಳವಾದ ನಾಭಿಯಿಂದಲೂ, ಶೋಭಿತವಾಗಿ, ಅಂಗೈಯಷ್ಟು ಅಗಲವಾದ ಉದರಪ್ರದೇಶದ ಸೊಗಸು! ಇಂತಹ ದಿವ್ಯಸೌಂದಯ್ಯದಿಂದೊಪ್ಪತಿದ - ಶಿಶುವು, ಎಸಳಾದ ಬೆರಳುಗ ಕುಳ್ಳ ತನ್ನ ಎರಡುಕ್ಕಗಳಿಂದಲೂ ಕಮಲದಂತಿರುವ ತನ್ನ ಕಾಲನ್ನು ಹಿಡಿದ ,ಅದರ ಹೆಬ್ಬೆರಳನ್ನು ಬಾಯಲ್ಲಿಟ್ಟು ಚಪ್ಪರಿಸುತ್ತಿದ್ದಿತು. ಆ ಮಹಾಸಮು ದ್ರಮಧ್ಯದಲ್ಲಿ ಆಲದೆಲೆಯಮೇಲೆ ಸಂತೋಷದಿಂದ ನಲಿದಾಡುತ್ತಿದ್ದ ಆಶಿಶು ವನ್ನು ಕಂಡಾಗ, ಅ ಮಹರ್ಷಿಗುಂಟಾದ ಅಶ್ ಕ್ಯವನ್ನು ಕೇಳಬೇಕ? ಅದನ್ನು ಕಂಡು ಪರಮಾತ್ಮರಭರಿತನಾಗಿದ್ದನು. ಆ ಮಗುವನ್ನು ನೋಡಿದುದರಿಂ ದುಂತಾದ ಸಂತೋಷದಿಂದ, ಅವರ ಶ್ರಮವೆಲ್ಲವೂ ಕ್ಷಣಮಾತ್ರದಲ್ಲಿ ಪರಿ ಹೃತವಾಯಿತು. ಅವನ ಹೃದಯಕಮಲವೂ, ನೇತ್ರಾಬ್ಬಗಳೂ ತಟ್ಟನೆ ವಿಕಾಸಹೊಂದಿದುವು. ಮೈಯಲ್ಲಿ ರೋಮಾಂಚವುಂಟಾಯಿತು. ಅಂತಹ