ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೩೪೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


#ZLg ಶ್ರೀಮದ್ಭಾಗವತರ [ಅಧ್ಯಾ. ೧೦. ಮೂರು ಕಣ್ಣುಗಳು ! ಹತ್ತು ತೋಳುಗಳು ! ಉನ್ನತವಾದ ಮೈ ! ಆಗಲೇ ಉದಿಸುತ್ತಿರುವ ಸೂಯ್ಯನಂತೆ ತೇಜಸ್ಸು ! ಬೆನ್ನ ಮೇಲೆ ಹುಲಿದೊಗಲು ! ದಶಭುಜಗಳಲ್ಲಿಯೂ ಶೂಲ, ಧನುಸ್ಸು, ಬಾಣ, ಕತ್ತಿ, ಗುರಾಣಿ, ಆಕ್ಷ ಮಾಲೆ, ಡಮರು, ಕಪಾಲ, ಗಂಡುಗೊಡಲಿ, ಮುಂತಾದ ಉಪಕರಣಗಳು! ಇಂತಹ ದಿವ್ಯರೂಪದಿಂದೊಪ್ಪವ ಪರಮಶಿವನನ್ನು ಕಂಡು ಆ ಮಹ ರ್ಷಿಯು ತನ್ನ ಮನಸ್ಸಿನಲ್ಲಿ ಇದೇನು? ಎಲ್ಲಿಂದ ಬಂದಿತು” ಎಂದು ವಿಸ್ಮಿತ ನಾಗಿ, ತನ್ನ ಸಮಾಧಿಯನ್ನು ನಿಲ್ಲಿಸಿ ಕಣ್ಣು ತೆರೆದು ನೋಡಿದಾಗ, ತನ್ನ ಮುಂದೆ ಪಾಶ್ವತೀಸಮೇತನಾದ ರುದ್ರನು ಪ್ರಮಥಗಣಗಳೊಡನೆ ನಿಂತಿದ್ದುದನ್ನು ಕಂಡನು.ಲೋಕ್ಯಗುರುವಾದ ಆ ರುದ್ರನನ್ನು ಕಂಡ ಡನೆ, ತಲೆಬಗ್ಗಿ ನಮಸ್ಕರಿಸಿ, ಆ ಪಾಶ್ವತೀಪರಮೇಶ್ವರರಿಗೂ, ಪ್ರಮಥಗಣ ಗಳಿಗೂ, ಸ್ವಾಗತಪೂಕವಾಗಿ, ಆಸನ, ಅರ್ಥ್ಯ, ಪಾದ್ಯ, ಆಚಮನೀಯ, ಗಂಧ, ಪುಷ್ಪ, ಧೂಪ, ದೀಪಾದಿ ಸಮಸ್ತೋಪಚಾರಗಳನ್ನೂ ಸಮರ್ಪಿಸಿ ಯಥಾವಿಧಿಯಾಗಿ ಪೂಜಿಸಿದನು. ಆಮೇಲೆ ಆ ರುದ್ರನ ಮುಂದೆ ಕೈಮುಗಿದು ನಿಂತು ಹೀಗೆಂದು ವಿಜ್ಞಾಪಿಸುವನು ಓ ವಿಭೂ! ಈಶ್ವರಾ ! ಆತ್ಮಾನಂದ ದಿಂದಲೇ ಪೂರ್ಣಕಾಮನಾದ ನಿನ್ನನ್ನು ನಾನು ಯಾವವಿಧದಿಂದ ಸಂತೋ ತಪಡಿಸಬಲ್ಲೆವು? ಈ ಸಮಸ್ಯಜಗತ್ತೂ ನಿನ್ನಿಂದಲೇ ಸಂತೋಷವನ್ನು ಪಡೆಯಬೇಕಾಗಿರುವಾಗ, ಅಂತಹ ನಿನಗೆ ನಾನು ಯಾವವಿಧದಿಂದ ಸತೋಷಗೊಳಿಸಲಿ ! ಆದುದರಿಂದ ಈ ನನ್ನ ಅಂಜಲಿಯೊಂದರಿಂದಲೇ ನೀನು ಸಂತೋಷಪಡಬೇಕು. ಸಮಸ್ತಲೋಕಕೂ ಮಂಗಳಕರನಾಗಿ, ಹಸಿವು, ಬಾಯಾರಿಕೆ, ಮೊದಲಾದ ಜರೂರಿಗಳನ್ನು ಜಯಿಸಿ ಶಾಂತನಾ ಗಿ, ಆಶ್ರಿತರಿಗೆ ಉತ್ತಮ ಸುಖಪ್ರದನಾಗಿ, ಶುದ್ಧಸತ್ವಮೂರ್ತಿ ಯಾದ ಮಹಾವಿಷ್ಣು ಸ್ವರೂಪದಿಂದಲೂ, ರಜಸ್ತಮೋಗುಣಪ್ರಧಾನರಾದ ಬ್ರಹ್ಮ ರುದ್ರರೂಪದಿಂದಲೂ ತೋರತಕ್ಕವನಾಗಿರುವ ನಿನಗೆ ನಮ ಸ್ಕಾರವು” ಎಂದನು, ಈ ಸ್ತುತಿವಾಕ್ಯಗಳಿಗೆ ರುದ್ರನು ಸಂತೋಷಗೊಂಡು, ಪ್ರಸನ್ನನಾಗಿ, ಮಂದಹಾಸದೊಡನೆ ಆ ಮಹರ್ಷಿಯನ್ನು ಕುರಿತು ಹೀ ಗೆಂದು ಹೇಳುವನು ««ಓ ಮಹಷಿ! ನಾವು ಮೂವರೂ (ಕ್ರಿಮೂ