ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೩೪೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೩ ಆಧ್ಯ. ೧೦.] ದ್ವಾದಶಸ್ಕಂಧನು. ಗಳ) ವರಪ್ರದರಾದ ದೇವತೆಗಳಲ್ಲಿ ಮೇಲೆನಿಸಿರುವೆವು. ನಮ್ಮ ದರ್ಶನವು ವಿಫಲವಾಗತಕ್ಕುದಲ್ಲ. ಈ ನಮ್ಮ ದರ್ಶನದಿಂದ ಮನುಷ್ಯನು ಮುಕ್ತಿ ಯನ ಪಡೆಯಬಹುದು. ನಿಮಗೆ ಬೇಕಾದ ವರವನ್ನು ಕೇಳು!ಕೊಡುವನು. ಓ! ಬ್ರಾಹ್ಮಣೋತ್ತಮಾ! ನಿನ್ನಂತೆ ಸಾಧುಗಳಾಗಿಯೂ ಶಾಂತರಾಗಿಯೂ, ವಿಷಯಾಸಕ್ತಿರಹಿತರಾಗಿಯೂ, ಭೂತದಯೆಯುಳ್ಳವರಾಗಿಯೂ, ಭಗವಂತ ನಾದ ಶ್ರೀಹರಿಗೆ ಏಕಾಂತಭಕ್ತರಾಗಿಯೂ, ತ್ರಿಮೂರ್ತಿಗಳಾದ ನಮ್ಮಲ್ಲಿ ತಾರತಮ್ಯಬುದ್ಧಿಯನ್ನಿಡದೆ ಆ ಭಗವಂತನ ವಿಭೂತಿಯೆಂದೇ ಭಾವಿಸಿ ಭಜಿ ಸತಕ್ಕವರಾಗಿಯೂ, ಸಮಸ್ತಲೋಕವನ್ನೂ ಆ ಭಗವದ್ರೂಪದಿಂದಲೇ ಭಾವಿಸಿ ಸಮದೃಷ್ಟಿಯುಳ್ಳವರಾಗಿಯೂ ಇರುವ ಬ್ರಾಹ್ಮಣರನ್ನು, ಲೋಕ ಪಾಲರೊಡಗೂಡಿದ ಸಮಸ್ಯಲೋಕವೂ ಪೂಜಿಸುವುವು. ಅವರಿವರೆಂಬು ದೇಕ? ತ್ರಿಮೂರ್ತಿಗಳಾದ ನಾವೂಕೂಡ ಅಂತಹ ಬ್ರಾಹ್ಮಣರಿಗೆ ವಂದಿಸಿ, ಅರ್ಚಿಸಿ ಉಪಾಸಿಸುವವು. ಏಕೆಂದರೆ, ಆ ಬ್ರಾಹ್ಮಣರು ತಮ್ಮ ನಾಗಲಿ, ಇತರಭೂತಗಳನ್ನಾಗಲಿ, ಆ ಅಚ್ಯುತನಿಗಿಂತಲೂ ಬೇರೆ ಯಾಗಿ ಭಾವಿಸರು. ಸಮಸ್ತ ಪ್ರಪಂಚವೂ ಆ ಶ್ರೀಹರಿಗೆ ಶರೀರಭೂತವಾಗಿ, ಅವನಿಗೆ ಪರತಂತ್ರ ವಾಗಿಯೇ ಇರುವುದನ್ನು ತಿಳಿದು ಎಲ್ಲವನ್ನೂ ಆ ವಿಷ್ಣು ಸ್ವರೂಪದಿಂದಲೇ ಭಾವಿಸುವರು. ಆದುದರಿಂದ ಇಂತಹ ಮಹಾತ್ಮರನ್ನು ನಾವೂ ಕೂಡ ಎಷ್ಟೋ ಗೌರವಿಸಿ ಪೂಜಿಸುವೆವು. ಜಲಮಯವಾದ ತೀರ್ಥಗಳೂ, ಕಲ್ಲು ಮಣ್ಣಿನ 'ದೇವತಾಪ್ರತಿಮೆಗಳೂ, ಸ್ನಾನಪಾನಾದಿಗಳಿಂದಲೂ, ಘೋರ ಶೋಪಚಾರಪೂಜೆಗಳಿಂದಲೂ ಜನರನ್ನು ಪವಿತ್ರೀಕರಿಸಬಲ್ಲುವೇಹರ ತು, ದರ್ಶನಮಾತ್ರದಿಂದ ಪಾವನಮಾಡಲಾರವು. ನಿಮ್ಮಂಹ ಸಾಧು ಗಳ ದರ್ಶನಮಾತ್ರವೇ ಮನುಷ್ಯರನ್ನು ಪಾವನಮಾಡುವುವು.ಓ'ಮಹರ್ಷಿ! ವೇದಮಯಗಳಾದ ನಮ್ಮ ರೂಪವನ್ನು ಸಮಾಧಿಯಿಂದಲೂ, ತಪಸ್ಸಿನಿಂ ಹಲ, ಸಂಯಮದಿಂದಲೂ, ಯಾರು ಹೃದಯದಲ್ಲಿ ಧರಿಸಿರುವರೋ ಅಂತಹ ಬ್ರಾಹ್ಮಣರಿಗೆ ನಾವೂ ನಮಸ್ಕರಿಸುವೆವು. ಅಂತಹ ಮಹಾತ್ಮರನ್ನು ಕಣ್ಣಿಂದ ನೋಡಿದರೂ, ಅವರ ಚರಿತ್ರೆಯನ್ನು ಕಿವಿಯಿಂದ ಕೇಳಿದರೂ, ಸಿಹಾಪಾತಕಿಗಳಾದ ಶೂದ್ರಾದಿಗಳೂ ಕೂಡ ಶುಕ್ಕಿಹೊಂದುವರು. ಹೀಗಿ