ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೩೪೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


w೪೦ ಶ್ರೀಮದ್ಭಾಗವತನ (ಅಧ್ಯಾ. ೧೦. ರುವಾಗ ನಿಮ್ಮಂತವರೊಡನೆ ಪ್ರತ್ಯಕ್ಷ ಸಂಭಾಷಣವು ಲಭಿಸಿದಮೇಲೆ ಹೇಳಬೇಕಾದುದೇನು ? ಎಂದನು ಹೀಗ ರುದ್ರಮ ಸಜ ನಸೇವೆಯೆಂಬ ಧರ್ಮರಹಸ್ಯವನ್ನು ಕುರಿತು ಹೇಳಿದ ಆ ವಾಕ್ಯವು, ಮಾರ್ಕಂಡೇಯನಿಗೆ ಕರ್ಣಾಮೃತಪ್ರಾಯವಾಯಿತು. ಎಷ್ಟೆಷ್ಟು ಕೇಳುತ್ತಿದ್ದರೂ ತೃಪ್ತಿಯಿಲ್ಲ ದಂತಿದ್ದನು. ಆ ಮಹರ್ಷಿಯು ಇದಕ್ಕೆ ಹಿಂದೆ ತಾನು ಪ್ರತ್ಯಕ್ಷವಾಗಿ ನೋಡಿ ಬಂದ ಭಗವಂತನ ಆಶ್ಚ ರಶಕ್ತಿಗೆ ಮೋಹಿತನಾಗಿ ಏನೊಂದೂ ತೋರದೆ ಚಿಂತೆಯಿಂದ ಬಳಲಿ ಕೃಶನಾಗಿದ್ದನು. ರುದ್ರನ ವಾಕ್ಯಾಮೃತ ಗಳು ಕಿವಿಗೆ ಬಿದ್ದೊಡನೆ, ಅವನ ಆಯಾಸವೆಲ್ಲವೂ ಪರಿಕೃತವಾಯಿತು. ಶಾಂತಚಿತ್ತನಾಗಿ ತನ್ನ ಸ್ಥಿತಾನು ಹೀಗೆಂದು ಯೋಚಿಸುವನು. ಆಹಾ ! ಏನಿದು ? ಇವರು ಲೋಕೇಶ್ವರರೆನಿಸಿಕೊಂಡಿದ್ದರೂ, ತಮಗಿಂತಲೂ ಸಿಕೃಷ್ಟವಾಗಿ, ತಮ್ಮ ಸಿಯಮಕ್ಕೊಳಪಟ್ಟ ಭೂತಗಳಿಗೆ ಹೀಗೆ ನಮಸ್ಕ ರಿಸುತ್ತಿರುವರಲ್ಲಾಭಗವಂತನ ಚರಿತ್ರೆಯು ನಮ್ಮಂತಹ ಶರೀರಿಗಳಿಗೆ ಹೀಗೆಂದು ತಿಳಿಯಲು ಎಷ್ಟು ಮಾತ್ರವೂ ಸಾಧ್ಯವಲ್ಲ! ತಮ್ಮ ನಿಯಮಕ್ಕೊಳ ಪಟ್ಟವರಿಗೆ ತಾವು ಸೇವಕರಂತೆ ನಮಸ್ಕರಿಸುವರು. ತಮ್ಮನ್ನು ಸ್ತುತಿಸ ಬೇಕಾದ ಭಕ್ತರನ್ನು ತಾವು ಸ್ತುತಿಸುವರು. ಇವೆಲ್ಲವೂ ಅವರ ಲೀಲಾಕಾರ ಗಳು. ಆದರೆ, ಇದೇನೂ ಅವರಲ್ಲಿ ಒಂದು ವಿಶೇಷವಿಲ್ಲ ! ಲೋಕಕ್ಕೆ ಧಕ್ಕೆ ಮಾರ್ಗವನ್ನು ತಿಳಿಸುವುದಕ್ಕಾಗಿ, ಒಂದೊಂದು ಸಮಯದಲ್ಲಿ ತಾವಾಗಿ ಆ ದನ್ನು ನಡೆಸುವರು. ಮತ್ತೊಮ್ಮೆ ಅನುಮೋದಿಸುವರು. ಇತರರು ಮಾಡಿದ ಧರಕಾರಿಗಳನ್ನು ಶ್ಲಾಘಿಸುವರು. ಹೀಗೆ ಮಾಡಿದಮಾತ್ರಕ್ಕೆ ಅವರ ಪ್ರ ಭಾವಕ್ಕೇನೂ ಕೊರತೆಯಿಲ್ಲ. ಹೇಗೆಂದರೆ, ಪ್ರಸಿದ್ಧನಾದ ಇಂದ್ರಜಾಲಿಕ ನೊಬ್ಬನು, ಕಣ್ಣು ಕಟ್ಟುಮಾಯೆಗಳಿಂದ ಜನರನ್ನು ಮರುಳುಮಾಡಿದರೆ, ಅದರಿಂದ ಅವನ ಸಾಮರ್ಥ್ಯವು ಚೆನ್ನಾಗಿ ಹೊರಪಡುವುದೇಹೊರತು,ಆದು ಅವನಿಗೆ ಮೋಸಗಾರನೆಂಬ ಅಪಪ್ರಥೆಯನ್ನು ತರಲಾರದಷ್ಯ : ಹಾಗೆಯೇ ಭಗವಂತನ ಈ ಮಾಯಾವ್ಯಾಪಾರಗಳಿಂದ ಅವನ ಆಶ್ಚರಶಕ್ತಿಯು ಲೋ ಕಕ್ಕೆ ತೋರ್ಪಡುವುದೇಕೊರತು ಬೇರೆಯಲ್ಲ!ಆ ಭಗವಂತನು ಸಂಕಲ್ಪ ಮಾತ್ರದಿಂದಲೇ ಈ ಜಗತ್ತನ್ನು ಸೃಷ್ಟಿಸಿ, ತಾನೂ ಅವುಗಳಲ್ಲಿ ಆತ