ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾ. ೩.] ಏಕಾದಶ ಸ್ಕಂಧವು. ೨೪೨೯ ಕಿವಿಯಿಂದ ಕೇಳುವುದು, ಬಾಯಿಂದ ಕೊಂಡಾಡುವುದು, ಮನಸ್ಸಿನಿಂದ ಧ್ಯಾ ನಿಸುವುದು, ಸಕಲಕಾರಗಳನ್ನೂ ಭಗವದರ್ಪಣರೂಪವಾಗಿಯೇ ನಡೆಸುವು ದು,ತಾನು ಮಾಡತಕ್ಕ ಯಜ್ಞ, ದಾನ, ತಪಸ್ಸು, ಮುಂತಾದ ಸತ್ಯಮ್ಮಗ ಇನ್ನೂ , ಪುತ್ರ ಕಳತ್ರಗೃಹಾದಿಗಳನೂ, ಕೊನೆಗೆ ತನ್ನ ಪ್ರಾಣಗಳನ್ನೂ ಆ ಪರಮಪುರುಷನಲ್ಲಿಯೇ ನಿವೇದಿಸುವುದು. ಆ ಶ್ರೀಹರಿಯನ್ನೇ ತಮಗೆ ಗತಿಯೆಂದು ನಂಬಿದ ಸಾಧುಗಳಲ್ಲಿ ಮೈತ್ರಿ, ಚರಾಚರಗಳಾದ ಸಮಸ್ಯೆ ಭೂತಗಳಲ್ಲಿಯೂ ಗೌರವ.ಬುದ್ಧಿ, ಸಾಧುಗಳೊಡನೆ ಕಲೆತು ಭಗವದ್ದು ಇಗ ಇನ್ನು ಕೊಂಡಾಡುವುದು, ಆ ಭಗವದ್ಗುಣಗಳಲ್ಲಿ ವಿಶೇಷನುರಾಗದಿಂ ದಲೂ, ಆ ಗುಣನುಭವದಿಂದುಂಟಾದ ಮವಸ ಮಿಯಿಂದಲೂ, ಮನಸ್ಸಿ ನಲ್ಲಿ ಹುಟ್ಟಿದ ಆಧ್ಯಾತ್ಮಿಕಾದಿತಾಪಗಳನ್ನು ನೀಗಿಸುವುದು, ಆ ಭಗವಂತ ನಲ್ಲಿ ಹುಟ್ಟಿದ ಕ್ರಮಕ್ರಮವಾದ ಭಕ್ತಿಪರಿಪಾಕದಿಂದ ಮೈ ಯಲ್ಲಿ ರೋಮಾಂಚವನ್ನು ಹೊಂದುವುದು, ಆ ಭಗವಂತನನ್ನು ಮನಸ್ಸಿನಲ್ಲಿ ನೆನೆಸಿಕೊಂಡಾಗ ಮೈಮರೆತು, ಲೋಕವೇ ಕ್ಷಣವಾದ ಚೇಷ್ಟೆಗಳಿಂದ, ಒಮ್ಮೆ ಅಳುವುದು, ಒಮ್ಮೆ ನಗುವುದು, ಒಮ್ಮೆ ಆನಂದಿಸುವುದು, ಬಾಯಿಗೆ ಬಂದ ಹಾಗೆ ಆ ಭಗವಷಯವಾದ ಮಾತುಗಳನ್ನಾಡುವುದು, ಒಮ್ಮೆ ಹಾಡುವುದು, ಕುಣಿಯುವುದು, ಹೀಗೆ ಆ ಭಗವಂತನ ಸ್ವರೂಪಸ್ವಭಾವಾ ದಿಗಳನ್ನು ಮನಸ್ಸಿನಲ್ಲಿ ಮನನಮಾಡುತ್ತ ಆನಂದಪರವಶನಾಗುವುದು ; ಇವೆಲ್ಲವೂ ಭಾಗವತಲಕ್ಷಣಗಳು. ಮೇಲೆ ಹೇಳಿದ 'ಭಾಗವತಧರಗಳನ್ನು ಹಿಡಿದು ಆ ಶ್ರೀಹರಿಯನ್ನಾ ರಾಧಿಸುವುದರಿಂದ, ಅಜ್ಞನಾದವನೂ ಆ ಭಗ ವನ್ಯಾಯೆಯನ್ನು ದಾಟಿ ಮುಕ್ತಿಯನ್ನು ಪಡೆಯಬಹುದು ಎಂದನು. ww ಆತ್ಮ ಪರಮಾತ್ಮ ಸ್ವರೂಪವು, ww ಆಮೇಲೆ ಜನಕನು ತಿರುಗಿ ಆ ಮುನಿಗಳನ್ನು ಕುರಿತು “ಓ ಮಹಾ ತರೆ ! ನೀವು ಬ್ರಹ್ಮವಿದರಲ್ಲಿ ಮೇಲೆನಿಸಿದವರಾದುದರಿಂದ, ನಾರಾಯಣ ಶಬ್ಬ ವಾಚ್ಯನಾದ ಆ ಪರಬ್ರಹ್ಮದ ಸ್ವರೂಪಸಿಶ್ವ ಯವನು ನನಗೆ ತಿಳಿಸಬೇಕು” ಎಂದನು. ಅದಕ್ಕೆ ಒಪ್ಪಲಾಯನನು « ಓ ರಾಜೇಂದ್ರಾ ! ಜಗತ್ತಿನ ಸೃಷ್ಟಿ ಸ್ಥಿತಿಲಯಗಳೆಲ್ಲಕ್ಕೂ ತಾನೇ ಕಾರಣನಾಗಿ, ತನಗೆ ಮ