ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೩೫೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೪೪ ಶ್ರೀಮದ್ಭಾಗವತವು. [ಅಣ್ಯ. ೧೧. ಲಜ್ಜೆಯು ಮೇಲಿನ ತಟಿ! ಲೋಭವು ಕೆಳಗಿನ ತುಟಿ! ಚಂದ್ರಿಕೆಯೇ ಅವನ ದಂತಗಳು! ಭ್ರಮವೇ ಅವನ ಮಂದಹಾಸವು! ವೃಕ್ಷಗಳೇ ಅವನ ಮೈಯ ಕ್ಲಿರುವ ರೋಮಗಳು! ಮೇಘಗಳೇ ಅವನ ತಲೆಕೂದಲುಗಳು. ವ್ಯಷ್ಟಿಪುರು ಹನು - ಯಾವವಿಧವಾದ ಅವಯವ ಸಂಸ್ಥಾನಗಳಿಂದ, ಎಷ್ಟು ಪ್ರಮಾಣವುಳ್ಳ ವನಾಗಿರುವನೋ, ಹಾಗೆಯೇ ಆ ಮಹಾಪುರುಷನೂಕೂಡ, ಆಯಾಲೋ ಕಾಭಿಮಾನಿದೇವತಾತ್ಮಕಗಳಾದ ಪಾದಾದ್ಯವಯಗಳ ಸಂಸ್ಥಾನಗಳಿಂದ, ಅದಕ್ಕೆ ತಕ್ಕ ಪ್ರಮಾಣವುಳ್ಳವನಾಗಿರುವನು. ಮತ್ತು ಆತನು ಕೌಸ್ತುಭ ರತ್ನ ವೆಂಬ ನೆವದಿಂದ ತನ್ನ ಆತ್ಮಜ್ಯೋತಿಯನ್ನು ಎಂದರೆ, ತನಗೆ ವಿಶೇಷಣ ಭೂತವಾಗಿ, ಜ್ಞಾನಾಕಾರವಾಗಿರುವ ಚಿದಾತ್ಮ ಸ್ವರೂಪವನ್ನು ಧರಿಸಿರುವನು. ಇದರಿಂದ ಆ ಕೌಸ್ತುಭವೇ ಜೀವವರ್ಗಗಳಿಗೆ ಅಭಿಮಾನಿದೇವತೆಯೆನಿಸಿರು ವುದು, ರತ್ನ ಪ್ರಭೆಯಂತೆ ಜೀವನ ಧರಭೂತಾನವು ಎಲ್ಲೆಲ್ಲಿಯೂ ವ್ಯಾಪಿಸಬಲ್ಲುದಾಗಿ ವಿಭುವೆನಿಸಿರುವುದು. ಭಗವಂತನು ಆ ಪ್ರಭೆಯನ್ನು ತನ್ನ ಎದೆಯಲ್ಲಿ ಶ್ರೀವತ್ಸವೆಂಬ ಮಚ್ಚೆಯ ರೂಪದಿಂದ ಧರಿಸಿರುವನು. ಆತನು ಸತ್ಯಾದಿಗುಣಮಯವಾದ ಪ್ರಕೃತಿಯನ್ನೇ ವನಮಾಲೆಯನ್ನಾಗಿ ಧರಿಸಿರುವನು. ಗಾಯತ್ರಿ ಮೊದಲಾದ ಛಂದಸ್ಸುಗಳೇ ಅವನ ವಸ್ತಗಳು. ವರ್ಣತ್ರಯಾತ್ಮಕವಾದ ಪ್ರಣವವೇ ಅವನು ಧರಿಸಿರುವ ಮೂರೆಳೆಯ ಬ್ರಹ್ಮಸೂತ್ರವು, ಸಾಂಖ್ಯಯೋಗಗಳೂ, ವೇದಗಳೂ ಇವೆರಡೂ ಅವನ ಮಕರಕುಂಡಲಗಳು. ಸಮಸ್ತಲೋಕಗಳಿಗೂ ಉತ್ತಮವೆನಿಸಿದ, ಮತ್ತು ಸಮಸ್ಯಚೇತನರಿಗೂ ಅಭಯಪ್ರದವಾದ ಬ್ರಹ್ಮ ಲೋಕವೇ ಆತನ ಕಿರೀ ಟರು. ಅವನು ಶಯನಿಸಿರತಕ್ಕ ಶೇಷಶಯನವೇ ಮೂಲಪ್ರಕೃತಿ! ಥರಜ್ಞಾ ನಾಡಿಗಳಿಂದ ಕೂಡಿದ ಶುದ್ಧಸತ್ವವು ಅವನಿಗೆ ಆಸನವಾದ ಪದ್ಯವೆನಿಸಿರು ವುದು, ಓಜಸ್ಸು, (ಇಂದ್ರಿಯಶಕ್ತಿ) ಸಹಸ್ಸು, (ಮನಶ್ಯ,ಬಲ, (ದೇಹ ಬಲ) ಎಂಬಿವುಗಳಿಂದ ಕೂಡಿದ ಮುಖ್ಯಪ್ರಾಣತತ್ವವೇ ಅವನ ಗದೆ! ಜಲ ತತ್ವವೇ ಅವನ ಪಾಂಚಜನ್ಯವೆಂಬ ಶಂಖವು! ತೇಜಸ್ತತ್ವವೇ ಸುದರ್ಶನವೆಂಬ ಚಕ್ರಾಯುಧವು! ಆಕಾಶದಂತೆ ನೀಲವರ್ಣವುಳ್ಳ ಆ ಪರಮಪುರುಷನಿಗೆ ನಭಸ್ಯತ್ವವೇ ನಂದಕವೆಂಬ ಖಡ್ಗವು! ತಪಸ್ಸೇ ಅವನ ಗುರಾವೆ! ಕಾಲವೇ