ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೩೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩೪೫ ಅವನ ಆಸ್ಪ ತಕ್ಕ ಯಾವ ಬದ ಆ* ಹಿಡಿದಿ ಅಯ್ಯಾ, ೧೧.] ದ್ವಾದಶಸ್ಕಂಧನು. ಶಾರ್ಙ್ಗವೆಂಬ ಅವನ ಧನುಸ್ಸು !ಕರಗಳೇ ಅವನ ಬತ್ತಳಿಕೆ!ಇಂದ್ರಿಯಗಳೇ ಬಾಣಗಳು! (ಅಥವಾ ರಥಾಶ್ವಗಳು). ಮನಸ್ಸು ಅಥವಾ ದೇಹಾತ್ಮಾಭಿ ಮಾನವು ಇವನ ರಥವು! ಅರ್ಚಾವತಾರಗಳಲ್ಲಿ ಆವಾಹಿತವಾದ ಅವನ ಅಂಶವೇ ತನ್ಮಾತ್ರಗಳು! ಇಂದ್ರಿಯವ್ಯಾಪಾರಗಳೇ ಆತನ ಕ್ರಿಯೆಗಳು! ಅವನ ಆಸನದಲ್ಲಿರುವ ಪದ್ಮಾ ಕಾರವಾದ ಮಂಡಲವೇ ಯಜ್ಞಭೂಮಿ! ಯ ಜಮಾನನಿಗೆ ನಡೆಸತಕ್ಕ ಯಜ್ಞದೀಕ್ಷಾಸಂಸ್ಕಾರವೇ ಸರೂ ಪಾಪನಿವಾರಕವೆನಿ ಸಿದ ಆತನ ಪರಿಚರೈಗಳು. ಭಗವಚ್ಛಬ್ಬದ ಅವಯವಾರ್ಥವೆನಿಸಿಕೊಂಡ ಜ್ಞಾನಾದಿಷಾಡುವೇ ಅವನು ಲೀಲಾರ್ಥವಾಗಿ ಹಿಡಿದಿರುವ ಕಮ ಲವು. ಧಮ್ಮ, ಮತ್ತು ಯಶಸ್ಸು, ಇವೆರಡೂ ಕ್ರಮವಾಗಿ ಅವನ ಚಾಮರ ಮತ್ತು ಬೀಸಣಿಗೆಗಳು' ನಿರ್ಭಯವಾದ ವೈಕುಂಠವೇ ಅವನ ಛತ್ರವು. ಋಗ್ಯಜುಸ್ಕಾನಾತ್ಮಕವಾದ ವೇದವೇ ಆ ಪರಮಪುರುಷನ ವಾಹನವಾದ ಗರುಡನು. ಶ್ರೀದೇವಿಯೇ ಅವನನ್ನು ಎಡೆಬಿಡದೆ ಅನುಸರಿಸಿರತಕ್ಕೆ ಶಕ್ತಿ, ಮತ್ತು ಆ ಶ್ರೀದೇವಿಯೇ ಪರಮಾತ್ಮನಿಗೆ ಧಕ್ಕಭೂತವಾದ ಪ್ರಭೆ!ಸೇನಾ ಪತಿಯಾದ ವಿಪ್ರನನು ಆ ಪರಮಾತ್ಮನ ಮೂರ್ತಿ ವಿಶೇಷವೆನಿಸುವನು. ನಂದಸುನಂದರೇ ಮೊದಲಾದ ಎಂಟುಮಂದಿ ದ್ವಾರಪಾಲಕರೂ ಆತನ ಅಣಿಮಾದ್ಯಷ್ಟಗುಣಗಳು. ವಾಸುದೇವ, ಸಂಕರ್ಷಣ, ಪ್ರದ್ಯುಮ್ಮ , ಅನಿರುದ್ಯರೆಂಬ ಈ ನಾಲ್ಕು ಮೂರ್ತಿಗಳೂ ಸಾಕ್ಷಾತ್ತಾಗಿ ಆ ಪರಮಪುರುಷನ ಸ್ವರೂಪವೆಂದೇ ಹೇಳಲ್ಪಡುವುವು. ಮತ್ತು ಮೇಲೆ ಹೇಳಿದ ಚತುರೂರ್ತಿಗಳಿಂದಲೇ ಭಗವಂತನು, ಜಾಗರ, ಸ್ವಪ್ನ, ಸುಷುಪಿ, ಮುಕ್ತಿಯೆಂಬ ಅವಸ್ನಾಭೇದಗಳಲ್ಲಿ ಕ್ರಮವಾಗಿ, ವಿಶ್ವ, ತೈಜಸ, ಪ್ರಾಜ್ಞ, ತುರೀಯಗಳೆಂದು ವ್ಯವಹರಿಸಲ್ಪಡುವ ಜೀವನ ಆಯಾ ಅವಸ್ಥೆಗಳಿಗೆ ಅಜ್ಜಿ ಮಾನಿದೇವತೆಯೆನಿಸಿರುವನು. ಮತ್ತು ಅಂಗಗಳಿಂದಲೂ, ಉಪಾಂಗಗಳಿಂದ ಲೂ, ಆಯುಧಗಳಿಂದಲೂ, ಭೂಷಣಗಳಿಂದಲೂ ಕೂಡಿ,ಮೇಲೆ ಹೇಳಿದಂತೆ ವಾಸುದೇವಾದಿಚತುರೂರ್ತಿಗಳನ್ನು ಧರಿಸಿರುವ ಆ ಪರಮಪುರುಷನೇ, ಆ ನಾಲ್ಕು ಮೂರ್ತಿಗಳಿಂದ ಸೃಷ್ಟಿ ಸ್ಥಿತಿ ಸಂಹಾರ ಮೋಕ್ಷಗಳೆಂಬ ನಾಲ್ಕು ವ್ಯಾಪಾರಗಳನ್ನೂ ನಿರಹಿಸುತ್ತಿರುವನು. ಓ ಬ್ರಾಹ್ಮಣೋತ್ತಮಾ ! **