ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೩೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨t೪ ಶ್ರೀಮದ್ಭಾಗವತರ [ಅಧ್ಯಾ, ೧೧. ನಕಾ!ಆ ಶ್ರೀಹರಿಯೇ,ಬ್ರಹ್ಮ ರುದ್ರಾದಿಸಂಜ್ಞೆಗಳನ್ನು ಹೊಂದಿ,ತನ್ನ ಮಾ ಯೆಯಿಂದ ಸೃಷ್ಟಿಸಂಹಾರಗಳನ್ನು ನಡೆಸತಕ್ಕವನು.ಸ್ವರೂಪಸ್ವಭಾವಗಳಲ್ಲಿ ನಿರತಿಶಯವಾದ ಮೇಲೆಯನ್ನು ಪಡೆದಿರುವುದರಿಂದ ಬ್ರಹ್ಮನೆನಿಸುವನು. ಆತನೇ ಸರಕಾರಣಭೂತನು. ಆತನೇ ಸರಸಾಕ್ಷಿ : ತನ್ನ ಮಹಿಮೆಯಿಂದ ಎಲ್ಲೆಲ್ಲಿಯೂ ಪೂರ್ಣನಾಗಿರುವನು? ಅನಾಹಸಮಸ್ತಕಾಮನು! ಜ್ಞಾನ ಸಂಕೋಚವಿಲ್ಲದವನು! ಹೀಗೆ ಸತ್ವವ್ಯಾಪಿಯಾಗಿ, ಸತ್ವಲೋಕಪ್ರಸಿದ್ಧನಾ ಗಿದ್ದರೂ, ಶಾಸ್ತ್ರಗಳು ಅವನನ್ನು ಗೂಢವೆಂದೇ ಹೇಳುತ್ತಿರುವುವು. ಆದರೆ, ಅವನು ತನ್ನನ್ನು ಉಪಾಸಿಸತಕ್ಕವರ ಯೋಗಪರಿಶುದ್ಧವಾದ ಮನಸ್ಸಿಗೆ ಸುಲಭವಾಗಿ ಗೋಚರಿಸುವನು.” ಎಂದು ಹೇಳಿ ಸೂತಪೌರಾಣಿಕನು, ಆ ಪರಮಾತ್ಮಧ್ಯಾನದಿಂದ ಆನಂದಪರವಶನಾಗಿ ಹೀಗೆಂದು ಸ್ತುತಿಸುವನು. * ««ಓ ಶ್ರೀಕೃಷ್ಣಾ ! ಅರ್ಜುನಸಖಾ ! ಯದುಪುಂಗವಾ ! ಲೋಕಕಂಟಕ ರಾದ ದುಷ್ಕತಿಯರ ವಂಶಕ್ಕೆ ದಾವಾಗ್ನಿ ಪ್ರಾಯನಾದವನೇ ! ಅಪಾರ ವೀರವುಳ್ಳವನೇ ! ಗೋವಿಂದಾ ! ಗೋಬ್ರಾಹ್ಮಣದೇವತೆಗಳ ದುಃಖವನ್ನು ನಿವಾರಿಸವುದಕ್ಕಾಗಿ ಅವತರಿಸಿದವನೇ ! ಪುಣ್ಯಶ್ಲೋಕಾ ! ಶ್ರವಣಮಂ ಗಳಾ! ನಿನ್ನ ಭತ್ಯರಾದ ನಮ್ಮನ್ನು ರಕ್ಷಿಸು” ಎಂದು ಪ್ರಾರ್ಥಿಸಿ, ತಿರುಗಿ ಶನಕಾಯಿಗಳನ್ನು ಕುರಿತು “ಓ ಬ್ರಾಹ್ಮಣೋತ್ತಮರೆ! ಯಾವನು ಪ್ರಾತಃ ಕಾಲದಲ್ಲಿ ನಿದ್ರೆಯಿಂದೆದ್ದೊಡನೆ, ಆ ಭಗವಂತನಲ್ಲಿಯೇ ನಟ್ಟ ಮನಸ್ಸುಳ್ಳ ವನಾಗಿ, ಇಂದ್ರಿಯಗಳನ್ನಡಗಿಸಿ ಮಹಾಪುರುಷಲಕ್ಷಣವನ್ನು ನಿರೂ ಪಿಸುವ ಈ ಪ್ರಕರಣವನ್ನು ಭಕ್ತಿಯಿಂದ ಜಪಿಸುವನೋ, ಅವನು ತನ್ನ ಹೃದಯಗುಹೆಯಲ್ಲಿರುವ ಆ ಪರಬ್ರಹ್ಮಸ್ವರೂಪವನ್ನು ಯಥಾಸ್ಥಿತವಾಗಿ ಕಂಡುಕೊಳ್ಳುವನು” ಎಂದನು. ತಿರುಗಿ ಶೌನಕನು ಪ್ರಶ್ನೆ ಮಾಡುವನು. (ಓ ಮಹಾತ್ಮಾ ! ಸೂತಾ! ಸೂರಾನುವರ್ತಿಗಳಾದ ಏಳುಗಂಗಳು, ಒಂದೊಂದು ತಿಂಗಳಿಗೂ ಬೇರೆ ಬೇರೆ ಹೆಸರಿನಿಂದ, ಬೇರೆಬೇರೆ ವ್ಯಾಪಾರಗಳನ್ನು ನಡೆಸುತ್ತ, ಸೂಸ್ಯಾತ್ಮಕ . * ಇಲ್ಲಿ ಹೇಳಿರುವ ವಿಶೇಷಣಗಳಿಂದ ಕ್ರಮವಾಗಿ, ಭಗವಂತನಲ್ಲಿರುವ ಸ ಕ್ಯಾನಂದಕರತ್ವ, ಸೌಶೀಲ್ಯ, ಸೌಲಭ್ಯಾಂಗುನಗಳು ವ್ಯಕ್ತವಾಗುವುವು.