ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೩೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾ, ೧೧.೨ ದ್ವಾದಶಸ್ಕಂಧವು. ೨೩೪ ನಾದ ಆ ಭಗವಂತನನ್ನು ಆರಾಧಿಸುವುವೆಂದು, * (ಹಿಂದೆ ಐದನೆಯ ಸ್ಕಂಥ ದಲ್ಲಿ) ಶುಕಮುನಿಯು ಪರೀಕ್ಷಿದ್ರಾಜನಿಗೆ ಹೇಳಿದುದಾಗಿ ನೀನು ಹೇಳಿದ್ದೆಯಲ್ಲವೆ? ಆಯಾ ಗಣಗಳ ಹೆಸರುಗಳನ್ನೂ , ಆಯಾತಿಂಗಳಲ್ಲಿ ಆಗ ಣಗಳು ತಮಗೆ ಪತಿಯಾದ ಸೂರನ ನಿಯಮಕ್ಕೊಳಪಟ್ಟು ನಡೆಸುವ ಬೇರೆಬೇರೆ ಕಾವ್ಯಗಳನ್ನೂ, ನಾವು ವಿವರವಾಗಿ ಕೇಳಿ ತಿಳಿಯಬೇ ಕೆಂದಿರುವೆವು. ಕೃಪೆಯಿಟ್ಟು ತಿಳಿಸಬೇಕು” ಎಂದನು. ಅದಕ್ಕಾ ಸೂತನು <<ಓ ಬ್ರಾಹ್ಮಣೋತ್ತಮಾ ! ಕೇಳು ! ಸಮಸ್ತ ಪ್ರಾಣಿಗಳಿಗೂ ಆತ್ಮಭೂತ ನಾದ ವಿಷ್ಣುವು, ಲೋಕಯಾತ್ರೆಯನ್ನು ನಿಗ್ಟಹಿಸುವುದಕ್ಕಾಗಿ ತನ್ನ ಮಾಯೆಯಿಂದ ದೂರಶರೀರವನ್ನು ಸಿಕ್ಕಿಸಿದನು. ಅದರಿಂದಲೇ ಸೂಯ್ಯನು ಕ್ಷಣಮಾತ್ರವೂ ವಿರಾಮವಿಲ್ಲದೆ ಲೋಕಗಳನ್ನು ಸುತ್ತುತ್ತಿರುವನು. ಆದರೆ, ಸಮಸ್ತಜಗತ್ತಿಗೂ ಆದಿಕರ್ತನಾಗಿಯೂ, ಅದ್ವಿತೀಯನಾಗಿಯೂ, ಇರುವ ಆ ಶ್ರೀಹರಿಯು, ತಾನೇ ಸೂತ್ಯಶರೀರಕನಾಗಿ ಆ ಕಾಠ್ಯಗಳನ್ನು ನಡೆಸುತ್ತಿರು ವನೆಂದು ತಿಳಿ!ಸಮಸ್ತವೈದಿಕಕ್ರಿಯೆಗಳಿಗೂ ಆತನೇ ಮೂಲವು. ಯಜ್ಞ ಮೂರ್ತಿಯಾದ ಆ ವಿಷ್ಣುವೊಬ್ಬನೇ ಯಜ್ಞಗಳಿಗೆ ವಿಹಿತಗಳಾದ ಕಾಲ, ದೇಶ, ಕ್ರಿಯೆ, ಕರ್ತ,ಕರಣ, ಕಾರ,ಆಗಮ, ದ್ರವ್ಯ, ಫಲವೆಂಬ ಒಂಬತ್ತು ವಿಧಗಳಿಂದ ಕರೆಯಲ್ಪಡುವಂತೆ, ಸತ್ಯಶರೀರಕನಾದ ಆ ಪರಮಪುರುಷ ನು ಒಬ್ಬನೇ ಆಗಿದ್ದರೂ, ಪರಾಶರಾದಿಮಹರ್ಷಿಗಳು, ಅವನನ್ನು ಹನ್ನೆರಡು ನಾಮಗಳಿಂದ ಬೇರೆಬೇರೆಯಾಗಿ ಕರೆಯುವರು. ಆ ಭಗವಂತನು ಚೈತ್ರಾ ದಿಮಾಸಗಳಲ್ಲಿ, ಒಂದೊಂದು ತಿಂಗಳಿಗೆ ಒಂದೊಂದು ಗಣದಂತೆ ಬೇರೆ ಬೇರೆ ಹನ್ನೆರಡುಗಣಗಳೊಡಗೂಡಿ, ಕಾಲವಿತ್ರಿಯನ್ನು ತೋರಿಸತಕ್ಕ ಸೂರರೂಪದಿಂದ, ಲೋಕಯಾತ್ರೆಯನ್ನು ನಿಧ್ವಹಿಸುವುದಕ್ಕಾಗಿ ಸಂಚರಿ ಸುತ್ತಿರುವನು.ಈ ಒಂದೊಂದುತಿಂಗಳಲ್ಲಿಯೂ ಸೂಯ್ಯನಾಮಗಳು,ಅಪ್ಪರಸಿ

  • “ತಥಾಕ ಋಷಿಯೋ ಗಂಧರಾ ಅಪ್ಪರಸ ನಾಗ ಗ್ರಾಮ ಯಾತುಧಾನಾ ದೇವಾ ಇಕಳಶೋ ಗಣಾಗೃಹ ಚತುರ್ದಶ ಮಾಸಿ ಭಗವಂತಂ ಸರಮಾತ್ಮಾನಂ ನಾಗಾನಾಮನಂ ಪ್ರಥಮನಃ ಪೃಥಕ್ಕರಭಿದFಂದ ಈ ಹಸ” ಎಂದು ಅಲ್ಲಿನ ವಾಕ್ಕರ,