ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೩೫೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೭so ಶ್ರೀಮದ್ಭಾಗವತವು [ಅಧ್ಯಾ, ೧೨, ಪ್ರಕಾಶಗೊಳಿಸತಕ್ಕ ವಾಕ್ಯಗಳಿಂದಲೂ ಸ್ತುತಿಸುತ್ತಬರುವರು. ಗಂಧದ್ಯರು ಅವನ ಗುಣಗಳನ್ನು ಮಧುರಗಾನದಿಂದ ಹಾಡುವರು. ಅಪ್ಪರಸಿಯರು ಅವನ ಮುಂದೆ ನರ್ತಿಸುತ್ತಬರುವರು, ನಾಗರು ಅವನ ರಥವನ್ನು ದೃಢ ವಾಗಿ ಬಿಗಿದುಕಟ್ಟುವರು. ಯಕ್ಷರು ರಥವನ್ನು ಮುಂದೆ ಎಳೆಯುವರು. ಬಲಾಡ್ಯರಾದ ರಾಕ್ಷಸರು ಆ ರಥದ ಹಿಂದೆಯೂ , ಉಭಯಪಾರ್ಶ್ವಗ ಇಲ್ಲಿಯೂ ಇದ್ದು ತಳ್ಳುವರು. ಇದಲ್ಲದೆ ವಾಲಖಿಲ್ಯರೆಂಬ ಅರುವತ್ತು ಸಾ ವಿರ ಮಂದಿ ಬ್ರಹ್ಮರ್ಷಿಗಳು, ಆ ಆದಿತ್ಯನ ಮುಂದೆ ಅವನಿಗಿದಿರಾಗಿ ನಿಂತು, ನಾನಾವಿಧಗಳಾದ ಸ್ತುತಿಗಳಿಂದ ಆ ವಿಭುವನ್ನು ಸ್ತುತಿಸುತ್ತ ಹೋಗು ವರು. ಹೀಗೆ ಭಗವಂತನಾದ ಶ್ರೀಹರಿಯು, ಪ್ರತಿಕಲ್ಪದಲ್ಲಿಯೂ ಚಿದಚಿಮ್ಮ ರೀಕನಾದ ತನ್ನನ್ನು , ಹನ್ನೆರಡು ಗಣಗಳ ವ್ಯೂಹರೂಪವಾಗಿ ವಿಭಾಗಿಸಿ ಕೊಂಡು, ಸಮಸ್ತಲೋಕಗಳನ್ನೂ ತಮ್ಮ ತಮ್ಮ ಕಠ್ಯಗಳಲ್ಲಿ ಪ್ರವರ್ತಿ ಸುವಹಾಗೆ ಮಾಡುವನು” ಎಂದನು. ಇದು ಹನ್ನೊಂದನೆಯ ಅಧ್ಯಾಯವು. ( ಈ ಭಾಗವತಪುರಾಣದೊಳಗಿನ ವಿಷಯಾನುಕ್ರಮ 1 ಣಿಕ,ಮತ್ತು ಗ್ರಂಥಮಾಹಾತ್ಮಾದಿಗಳು. ಓ ಶೌನಕಾದಿಗಳೆ ! ಥರಸ್ವರೂಪನಾದ ಶ್ರೀಕೃಷ್ಣನಿಗೂ, ಧರ ಪ್ರವರ್ತಕರಾದ ವೇದವ್ಯಾಸಮಹರ್ಷಿಗೂ, ಚತುರುಖಬ್ರಹ್ಮನಿಗೂ, ನಾ ರದ ಶುಕಾದಿ ಬ್ರಾಹ್ಮಣರಿಗೂ ನಮಸ್ಕರಿಸಿ, ಅವರ ಉಪದೇಶಪರಂಪರೆ ಯಿಂದ ಪ್ರಾಪ್ತವಾದ ಅನೇಕ ಧರಗಳಲ್ಲಿ, ಈ ಗ್ರಂಥದಲ್ಲಿ ಪ್ರತಿಪಾದಿಸ ಲ್ಪಟ್ಟ ಮುಖ್ಯಧಗಳನ್ನು ಮಾತ್ರ ಸಂಗ್ರಹಿಸಿ ಹೇಳುವೆನು ಕೇಳಿರಿ! ನೀವು ನನ್ನನ್ನು ಪ್ರಶ್ನೆ ಮಾಡಿದುದರಿಂದ, ಮನುಷ್ಯರಿಗೆ ಜನ್ಮ ಸಾಫಲ್ಯವನ್ನುಂಟು ಮಾರತ ಅದ್ಭುತವಾದ ಈ ವಿಷ್ಣು ಚರಿತ್ರವನ್ನು ನಿಮಗೆ ಹೇಳಿದೆನು. ಮು ಖ್ಯವಾಗಿ ಈ ಗ್ರಂಥದಲ್ಲಿ, ಸತ್ವಪಾಪನಿವಾರಕನಾಗಿಯೂ, ಸತ್ಯೇಂದ್ರಿಯ ಗಳಿಗೂ ಅಧಿಪತಿಯಾಗಿಯೂ,ಭಕ್ಪಾಲಕನಾಗಿಯೂ ಇರುವ ಸಾಕ್ಷಾತ್ಕಾ ರಾಯಣನೇ ಕೀರ್ತಿಸಲ್ಪಡುವನು. ಸಮಸ್ತ ವೇದಾಂತಗಳ ರಹಸ್ಯವೂ,ಸಮ ಈ ಜಗತ್ತಿನ ಸೃಷ್ಟಿಸಿತಿ ಸಂಹಾರಕಾರಣವು ಎನಿಸಿದ ಪರಬ್ರಹ್ಮವೇ ಆ