ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೩೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೫೧ ಅಣ್ಯಾ ೧೨ || ದ್ವಾದಶಸ್ಕಂಧವು. ತನಾಗಿರುವನು. ಅವನ ಚರಿತ್ರವೇ ಈ ಗ್ರಂಥದಲ್ಲಿ ಮುಖ್ಯಪ್ರತಿಪಾದ್ಯವಾ ದ ವಿಷಯವು. ಇದಲ್ಲದೆ ಇದರಲ್ಲಿ ಸಾಧೂತ್ತಮರಾದ ನೀವು ಭಾಗವತಪುರಾಣ ವನ್ನು ಹೇಳಬೇಕೆಂದು ನನ್ನನ್ನು ಪ್ರಶ್ನೆ ಮಾಡಿದ ಉಪಾಖ್ಯಾನದಿಂದ ಹಿಡಿ ದು, ಅನೇಕ ವಿಷಯಗಳು ನಿರೂಪಿಸಲ್ಪಟ್ಟಿವೆ. ಪ್ರಥಮಸ್ಕಂಧದಲ್ಲಿ ಆತ್ಮಪ ರಮಾತ್ಮನಿವೇಚನೆಗಳೆಂಬ ಜ್ಞಾನ ವಿಜ್ಞಾನಗಳೂ, ಭಕ್ತಿಯೋಗವೂ, ಅದ ಕ್ಕೆ ಅಂಗಭೂತವಾದ ವೈರಾಗ್ಯವೂ, ಪರೀಕ್ಷಿತಿನ ಮತ್ತು ನಾರದನ ವೃತ್ತಾಂ ತಗಳೂ, ರಾಜರ್ಷಿಯಾದ ಪರೀಕ್ಷಿತ್ತು ಬ್ರಾಹ್ಮಣಶಾಪದಿಂದ ಪ್ರಾಯೋಪ ವೇಶವನ್ನು ಹಿಡಿದುದೂ, ವರ್ಣಿಸಲ್ಪಟ್ಟಿವೆ. ದ್ವಿತೀಯಸ್ಕಂಧದಲ್ಲಿ ಶುಕನಿಗೂ ಪರೀಕ್ಷೆಗೂ ನಡೆದ ಸಂವಾದಗಳೂ, ಪರೀಕ್ಷಿತ್ತು ಯೋಗಧಾರಣೆಯಿಂದ ತನ್ನ ಪ್ರಾಣವನ್ನು ನೀಗಿದುದೂ, ಬ್ರಹ್ಮ ನಾರದಸಂವಾದವೂ, ಅವತಾರ ಗಳ ವರ್ಣನವೂ, ಸೃಷ್ಟಿಗೆ ಮೊದಲು ಪ್ರಾಕೃತವೆನಿಸಿದ ಮಹದಾದಿತತ್ವಗ ಳ ಉತ್ಪತ್ತಿಯೂ ವರ್ಣಿತವಾಗಿವೆ. ಆಮೇಲೆ ತೃತೀಯಸ್ಕಂಧದಲ್ಲಿ ವಿದುರೋ “ವಸಂವಾದಗಳೂ, ಮತ್ತು ವಿದುರಮೈತ್ರೀಯ ಸಂವಾದಗಳೂ, ಈ ಭಾಗವತಪುರಾಣಸಂಹಿತೆಯ ವಿಷಯವಾದ ಪ್ರಶವೂ, ಭಗವಂತನು ಪ್ರಳಯ ಕಾಲದಲ್ಲಿರುವ ರೀತಿಯೂ, ಪ್ರಕೃತಿಗುಣಗಳ ಕ್ಷೇಭರೂಪವಾದ ಪ್ರಾಕೃತಪ್ರಳಯವೂ, ಆಮೇಲೆ ಪ್ರಕೃತಿವಿಕಾರಗಳೆನಿಸಿಕೊಂಡ ಮಹತ್ತು, ಅಹಂಕಾರ, ಪಂಚಮಹಾಭೂತಗಳೆಂಬ ಏಳುತತ್ವಗಳ ಸೃಷ್ಟಿಕ್ರಮವೂ, ಅವುಗಳಿಂದ ಬ್ರಹ್ಮಾಂಡೋತ್ಪತ್ತಿಯೂ, ಅ ಬ್ರಹ್ಮಾಂಡದಿಂದ ಚತು ರುಶೋತ್ಪತಿಯೂ,ಪರಮಾಣು ಮೊದಲಾಗಿ ಸಂವತ್ಸರದವರೆಗೆ ಸ್ಕೂಲ ಸೂಕ್ಷವಿಭಾಗವುಳ್ಳ ಕಾಲದ ಗತಿಯೂ, ವ್ಯಷಿಭೂತಗಳ ಉತ್ಪತ್ತಿಯೂ, ವರಾಹಮೂರ್ತಿಯು ಸಮುದ್ರದಿಂದ ಭೂಮಿಯನ್ನು ದರಿಸಿದುದೂ, ಹಿರ ಣ್ಯಾಕ್ಷವಧವೂ, ದೇವರಗDಲೋಕಗಳ ಸೃಷ್ಟಿಯೂ, ಸ್ತ್ರೀಪುರುಷ ರೂಪಗಳ ಆರ್ಧಾರ್ಧಭಾಗಗಳಿಂದ ಕೂಡಿದ ವಿಶಿಷಸೃಷ್ಟಿಯೂ, ಆದ ರಿಂದ ಸ್ವಾಯಂಭುವಮನುವಿನ, ಮತ್ತು ಆತನಿಗೆ ಪುಯೆನಿಸಿ ಸ್ತ್ರೀಸೃಷ್ಟಿ ಯಲ್ಲಿ ಮೊದಲನೆಯವಳೆನಿಸಿಕೊಂಡ ಶತರೂಪೆಯೆಂಬವಳಜನನವೂ ಅಮೇ ಕರ್ದಮಪ್ರಜಾಪತಿಗೆ ಅವನ ಧಮ್ಮ ಪತ್ನಿಯಾದ ದೇವಹೂತಿಯಲ್ಲಿ