ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೩೫೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೨ ಶ್ರೀಮದ್ಭಾಗವತನ [ಅಧ್ಯಾ, ೮೨, ನವಕನ್ಯಕೆಯರು ಹುಟ್ಟಿದುದೂ, ಕಪಿಲರೂಪಿಯಾದ ಭಗವಂತನ ಅವತಾ ರವೂ, ದೇವಹೂತಿಗೂ ಅವಳ ಗರ್ಭದಲ್ಲಿ ಜನಿಸಿದ ಕಪಿಲನಿಗೂ ನಡೆದ ಸಂ ವಾದವೂ ವರ್ಣಿಸಲ್ಪಟ್ಟಿವೆ. ಆಮೇಲೆ ನಾಲ್ಕನೆಯ ಸ್ಕಂಧದಲ್ಲಿ ನವಬ್ರ ಹ್ಮರ ಉತ್ಪತ್ತಿಯೂ, ದಕ್ಷಯಾಗಧ್ವಂಸವೂ, ಧ್ರುವಚರಿತ್ರವೂ, ಪೃಥು ಪ್ರಾಚೀನಬರ್ಹಿಷರೆಂಬ ರಾಜರ ವೃತ್ತಾಂತವೂ, ನಾರದನ ಸಂವಾದವೂ ವರ್ಣಿಸಲ್ಪಟ್ಟಿವೆ. ಆಮೇಲೆ ಪಂಚಮಸ್ಕಂಧದಲ್ಲಿ ಪ್ರಿಯವ್ರತನ ವೃತ್ತಾಂ ತವೂ, ನಾಭಿಯ ಚರಿತ್ರವೂ, ಋಷಭಪುತ್ರನಾದ ಭರತನ ವೃತ್ತಾಂತವೂ, ಭೂಲೋಕದಲ್ಲಿರುವ ದ್ವೀಪ, ಸಮುದ್ರ, ಪರತ, ನದೀನದಾದಿಗಳ ವರ್ಣ ನವೂ, ಭಾರತಾದಿವರ್ಷಗಳ ವಿವರಣವೂ, ಜ್ಯೋತಿಶ್ವ ಕ್ರದ ಸನ್ನಿವೇಶವೂ, ಪಾತಾಳನರಕಗಳ ಸ್ಥಿತಿಯೂ ವಿವರಿಸಲ್ಪಟ್ಟಿವೆ. ಆಮೇಲೆ ಆರನೆಯ ಸ್ಕಂಧ ದಲ್ಲಿ, ದಕ್ಷನ ಜನ್ಮವೃತ್ತಾಂತವೂ, ದಕ್ಷಕನೈಯರ ವೃತ್ತಾಂತವೂ, ಆ ದಕ್ಷ ಕನೈಯರಿಂದ ದೇವ, ದಾನವ, ಮನುಷ್ಯ, ಮೃಗಪಕ್ಷಿಸರ್ಪಾಡಿಜಾತಿಗಳು ಜನಿ ಸಿದುದೂ, ವೃತ್ರಾಸುರನ ಜನನಮರಣವೃತ್ತಾಂತಗಳೂ ವರ್ಣಿತವಾ ಗಿವೆ. ಆಮೇಲೆ ಏಳನೆಯಸ್ಕಂಧದಲ್ಲಿ ಏತಿಪುತ್ರರಿಬ್ಬರ ವೃತ್ತಾಂತವೂ, ಹಿರ ಣ್ಯಕಶಿಪುವಿನ ಕಥೆಯ, ಮಹಾತ್ಮನಾದ ಪ್ರಹ್ಲಾದನ ಚರಿತ್ರವೂ ವರ್ಣಿತ ವಾಗಿವೆ. ಆಮೇಲೆ ಎಂಟನೆಯಸ್ಕಂಧದಲ್ಲಿ, ಮನ್ವಂತರ:ಭಾಗಗಳೂ, ಗಜೇಂದ್ರಮೋಕ್ಷವೃತ್ತಾಂತವೂ, ಆಯಾಮವ್ವಂತರಗಳಲ್ಲಿ ವಿಷ್ಣುವು ಕೈಕೊಂಡ ಹಯಗ್ರೀವಾದ್ಯವತಾರಭೇದಗಳೂ, ಮತ್ಯ, ಕೂರ, ನಾರ ಸಿಹ್ಮ, ವಾಮನಾವತಾರಚರಿತ್ರಗಳೂ, ದೇವತೆಗಳಿಗೆ ಅಮೃತಲಾಭಕ್ಕಾಗಿ ನಡೆದ ಕ್ಷೀರಸಮುದ್ರಮಥನವೃತ್ತಾಂತವೂ, ಅದರಿಂದಾಚೆಗೆ ನಡೆದ ದೇವಾಸುರಯುದ್ಧವೂ ವರ್ಣಿಸಲ್ಪಟ್ಟಿವೆ. ಆಮೇಲೆ ಒಂಬತ್ತನೆಯ ಸ್ಕಂಧ ದಲ್ಲಿ, ರಾಜವಂಶಾನುಕೀರ್ತನವೂ, ಇಕಾಕುವಿನ ಜನನವೂ, ಈ ಇಕ್ಷಾಕು ವಂಶದಲ್ಲಿ ಮಹಾತ್ಮನಾದ ಸುದ್ಯುಮ್ಮನು ಜನಿಸಿದುದೂ, ಇಲೋಪಾಖ್ಯಾ ನವೂ, ತಾರೋಪಾಖ್ಯಾನವೂ, ಸೂಕ್ಯವಂಶಾನುಕಥನವೂ, ಈ ಸೂರಿ ವಂಶದಲ್ಲಿ ಹುಟ್ಟಿದ ಶಶಾದನೇ ಮೊದಲಾದ ರಾಜರ ವೃತ್ತಾಂತವೂ, ಸುಕನ್ಯಾಚರಿತ್ರವೂ, ಶಲ್ಯಾತಿಯ ಕಥೆಯೂ, ಕಕುತ್ಯ, ಖಟ್ವಾಳ,