ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೩೫೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೭೫೩ ಅಧ್ಯಾ. ೧೨.] ದ್ವಾದಶಸ್ಕಂಧವು ಮಾಂಧಾತೃ, ಸೌಭರಿ, ಸಗರರ ಚರಿತ್ರಗಳೂ, ಪರಮಪಾವನವಾದ ಶ್ರೀ ರಘುರಾಮನ ವೃತ್ತಾಂತವೂ, ನಿಮಿಯು ದೇಹತ್ಯಾಗಮಾಡಿದುದೂ, ಜನಕಕುಲದವರ ಜನ್ಮ ವೃತ್ತಾಂತವೂ, ಭಾರ್ಗವೋತ್ತಮನಾದ ಪರಶು ರಾಮನು ಭೂಮಿಯಲ್ಲಿ ಕ್ಷತ್ರಿಯಕುಲವನ್ನು ನಾಶಮಾಡಿದ ವೃತ್ತಾಂತವೂ, ಚಂದ್ರವಂಶದಲ್ಲಿ ಐಲನ ಚರಿತ್ರವೂ, ನಹುಷಪುತ್ರನಾದ ಯಯಾತಿಯ ಚರಿತ್ರವೂ, ದುಷ್ಯಂತಪುತ್ರನಾದ ಭರತನ ವೃತ್ತಾಂತವೂ, ಶಂತನುವಿನ ಮತ್ತು ಅವನ ಪುತ್ರನ ಚರಿತ್ರಗಳೂ, ಯಯಾತಿಗೆ ಜೈಷ್ಣಪತ್ರ ನಾದ ಯದುವಿನ ಚರಿತ್ರವೂ, ಆ ಯದುವಂಶಾನುಕ್ರಮವೂ ವರ್ಣಿತ ವಾಗಿವೆ. ಆಮೇಲೆ ದಶಮಸ್ಕಂಧದಲ್ಲಿ, ಲೋಕೇಶ್ವರನಾದ ಭಗವಂತನು ಯಾದವಕುಲದಲ್ಲಿ ವಸುದೇವನ ಗೃಹದಲ್ಲಿ, ಕೃಷ್ಣರೂಪದಿಂದ ಅವತರಿಸಿ ದುದೂ, ಆಮೇಲೆ ಅವನು ನಂದಗೋಕುಲದಲ್ಲಿ ಬೆಳೆಯುತ್ತಿದ್ದುದೂ, ಈ ಶ್ರೀಕೃಷ್ಣನು ಬಾಲ್ಯದಿಂದಲೂ ನಡೆಸಿದ ಅದ್ಭುತಚರಿತ್ರಗಳೂ ವಿವರ ವಾಗಿ ಕೀರ್ತಿಸಲ್ಪಟ್ಟಿವೆ. ಮೊದಲು ಆ ಶ್ರೀಕೃಷ್ಣನು ಏಳುದಿನದ ಕೊಸಾ ಗಿರುವಾಗಲೇ ಸ್ತನ್ಯಪಾನಮಾಡುವ ನೆವದಿಂದ ಪೂತನೆಯ ಪ್ರಾಣಿಗಳನ್ನು ಹೀರಿದುದು, ಶಕಟಾಸುರನನ್ನು ಕಾಲಿಂದೊದೆದು ಮುರಿದುದು, ತೃಣಾ ವರ್ತವನ್ನು ತಿಕ್ಕಿ ಕೊಂದುದು, ಹೀಗೆಯೇ ಬಕಾಸುರ, ವಾಸುರ, ಆಫ ಸುರರನ್ನು ಕೊಂದುದು, ಬ್ರಹ್ಮನಿಗೆ ತನ್ನ ಮಾಯೆಯನ್ನು ತೋರಿಸಿದುದು, ಥೇನುಕಲಂಬಾಸುರರನ್ನು ಕೊಂದುದು, ಕಾಡುಗಿನಿಂದ ಗೋಪಾಲಕ ರನ್ನು ರಕ್ಷಿಸಿದುದು, ಕಾಳಿಯಮರ್ದನ, ಹಾವಿನ ಬಾಯಿಗೆ ಸಿಕ್ಕಿಬಿರ್ ನಂದನನ್ನು ಬಿಡಿಸಿದುದು, ಗೋಪಕನೈಯರ ವ್ರತಚರೈ, ಯಜ್ಞಪತ್ತಿ ಯ ರನ್ನು ಅನುಗ್ರಹಿಸಿದುದು, ಅವರ ಪತಿಗಳಾದ ಬ್ರಾಹ್ಮಣರು ತನ್ನಲ್ಲಿ ಮಾಡಿದ ಅಪರಾಧಕ್ಕಾಗಿ ಪರಿತಪಿಸಿದುದು, ಇಂದ್ರನ ಹೆಮ್ಮೆಯನ್ನು ಮುರಿಯುವುದಕ್ಕಾಗಿ ಗೋವರ್ಧನವನ್ನೆ ತಿದುದು, ದೇವತೆಗಳು ಇಂದ್ರ ನೊಡನೆ ಬಂದು ಆ ಕೃಷ್ಣನನ್ನು ಪೂಜಿಸಿ, ಅವನಿಗೆ ಪಟ್ಟಾಭಿಷೇಕವನ್ನು ನಡೆಸಿದುದು, ಕೃಷ್ಣನು ಶರತ್ಕಾಲದ ರಾತ್ರಿಗಳಲ್ಲಿ ಗೋಪಿಯರೊಡನೆ ವಿಹರಿಸಿದುದು, ಶಂಖಚೂಡವ), ಅರಿಸ್ಮಸಂಹಾರ, ಕೇತಿನಿಥನ,