ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪೩೦ ಶ್ರೀಮದ್ಭಾಗವತವು [ಅಧ್ಯಾ, ೩. ತೊಂದು ಕಾರಣವಸ್ತುವಿಲ್ಲದೆ, ಜೀವನಿಗೆ ಜಾಗರಸ್ವಪ್ನ ಸುಷುಪ್ತಿ ಯೆಂಬ ಮೂರವಸ್ಥೆಗಳಲ್ಲಿಯೂ, ಮುಕ್ಕದಶೆಯಲ್ಲಿಯೂ ಅಂತರಾಮಿ ಯಾಗಿರತಕ್ಕವವೇ ಪರಬ್ರಹ್ಮನು. ದೇಹ, ಇಂದ್ರಿಯಗಳು, ಪ್ರಾಣಗಳು, ಮನಸ್ಸು, ಇವೆಲ್ಲವೂ,ಯಾವನ ಪ್ರೇರಣೆಯಿಂದಲೇ ತಮ್ಮ ಕೆಲಸಗಳನ್ನು ಮಾಡುವುವೋ, ಆ ವಸ್ತುವೇ ಪರಬ್ರಹ್ಮವೆಂದುತಿಳಿ ! ಅದರ ಸ್ವರೂಪವು ಮನಸ್ಸಿಗೂ, ವಾಕ್ಕಿಗೂ ಅಗೋಚರವಾದುದು. ಕಣ್ಮ, ಬೇರೆ ಇಂದ್ರಿಯ ಗಳೂ, ಪ್ರಾಣಗಳೂ, ಜೀವ, ಅಗ್ನಿಗೆ ಜ್ವಾಲೆಗಳು ಹೇಗೋಹಾಗೆ ಆ ಬ್ರಹ್ಮನಿಗೆ ವಿಶೇಷಣಭತಗಳಾಗಿರುವುದೇ ಹೊರತು, ಅವು ಆಪರಬ್ರಹ್ಮನ ನ್ನು ಪ್ರಕಾಶಗೊಳಿಸಲಾರವು. ಪರಮಾತ್ಮನ ವಿಷಯವನ್ನು ತಿಳಿಸುವುದಕ್ಕೆ ಪ್ರಮಾಣಭೂತಗಳೆನಿಸಿಕೊಂಡ ವೇದಾಂತವಾಕ್ಯಗಳೂ ಕೂಡ ( ನ ಚಕ್ಷು ಷಾ ದೃಶ್ಯತೆ”: ನಾಪಿ ವಾಚಾ"ಎಂದು, ಆ ಬ್ರಹ್ಮನನ್ನು ನಾನಸಾಗೋ ಚರನೆಂದೇ ಬೋಧಿಸುವುವು ಪ್ರಮಾ ಣಭೂತವಾದ ವೇದವಾಕ್ಯವೇ ಹೀಗೆ ಇಂದ್ರಿಯಗಳಿಗೆ ಅಗೋಚರನೆಂದು ನಿಷೇಧಿಸುವಾಗ, ಪರಬ್ರಹ್ಮವೆಂಬ ವಸ್ತುವೊಂದು ಉಂಟೆಂಬುದು ಹೇಗೆ ?” ಎಂದು ಸೀನು ಶಂಕಿಸಬಾರದು. ಒಂದು ವಸ್ತುವಿದ್ದಾಗಲೇ ಅದರ ವಿಷಯವು (ತಿಳಿಯ” ದೆಂಬ ನಿಷೇಧವಾ ಕ್ಯವೂ ಪ್ರವರ್ತಿಸಬಹುದಲ್ಲದೆ, ಇಲ್ಲದ ವಸ್ತುವನ್ನು ಕುರಿತು ನಿಷೇಧವಾಕ್ಯ ವೂ ಪ್ರವರ್ತಿಸಲಾತಿಮೆ. ಆದುದರಿಂದ ಬ್ರಹ್ಮವಿಲ್ಲದಿದ್ದ ಪಕ್ಷದಲ್ಲಿ ಅದರ ವಿಷಯವಾಗಿ ಬೋಧಿಸತಕ್ಕೆ ನಿಷೇಧವಾಕ್ಯವು ಹುಟ್ಟುವುದಕ್ಕೂ ಅವಕಾಶ ವಿಲ್ಲವು ಈ ಕಾರಣಗಳಿಂದ ಪರಬ್ರಹ್ಮವೆಂಬ ವಸ್ತುವೊಂದು ಉಂಟೆಂಬು ದೂ, ಅದರ ಸ್ವರೂಪಸ್ವಭಾವಗಳನ್ನು ತಿಳಿಯುವುದು ಮಾತ್ರ ಅಸಾಧ್ಯವೆಂ ದೂ ಅರಸಿ ನಗುವುದು. ಸತ್ವ, ರಜಸ್ಸು, ತಮಸ್ಸೆಂಬ ಮೂರುಗುಣ ಗಳನೊಳಕೊಂಡ ಪ್ರಧಾನವೆಂಬ ತತ್ವವು, ಪ್ರಾಪಂಚಿಕವಾದ ಸಮಸ್ಯ ಕಾವ್ಯವರ್ಗಗಳಿಗೂ ಆಧಾರಸೂತ್ರದಂತಿರುವುದು. ಆದರ ಕಾರರೂಪಗಳೆ ನಿಸಿಕೊಂಡ, ಮಹದಹಂಕಾರಗಳೂ, ಅವುಗಳಿಂದ ಮುಂದೆ ಹುಟ್ಟತಕ್ಕ ಪೃಥಿವಿ' ಮೊದಲಾದ ಕಾವ್ಯಗಳ, ತತ್ವಗಳೆಂದೇ ನಿರೂಪಿಸಲ್ಪಟ್ಟಿರುವುವು. ವಿಷಯೇಂದ್ರಿಯಗಳ ಸಂಬಂಧದಿಂದ ಜನ್ಮವನ್ನೆತ್ತಿ ಸುಖದುಃಖಾದಿ