ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೩೬೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಅಧ್ಯಾ, ೧೨.] ದ್ವಾದಶಸ್ಕಂಧವು. ೨೬೫s ನಿತ್ಯ, ನೈಮಿತ್ತಿಕ, ಆತ್ಯಂತಿಕಗಳೆಂಬ ನಾಲ್ಕು ಬಗೆಯ ಪ್ರಳಯಗಳ ಕ್ರಮವೂ, ಪ್ರಾಕೃತಿಕ, ನಿತ್ಯ, ನೈಮಿತ್ತಿಕಗಳೆಂಬ ಮೂರುಬಗೆಯ ಉತ್ಪತ್ತಿ ಕ್ರಮವೂ, ಪರೀಕ್ಷಿತಿನ ದೇಹತ್ಯಾಗವೂ, ವೇದಶಾಖೆಗಳ ವಿಭಾಗಗಳೂ, ಮಾರ್ಕಂಡೇಯಚರಿತ್ರವೂ, ಮಹಾಪುರುಷನ ಅಂಗೋಪಾಂಗವಿನ್ಯಾಸ ಗಳೂ, ಸೂರೈನ ಗಣವಿಭಾಗಗಳೂ ವರ್ಣಿಸಲ್ಪಟ್ಟಿವೆ. ಓಶನಕಾದಿಗಳಿರಾ! ನೀವು ನನ್ನಲ್ಲಿ ಯಾವಯಾವ ವಿಷಯಗಳನ್ನು ಕುರಿತು ಪ್ರಶ್ನೆ ಮಾಡಿದರೆ, ಅವೆಲ್ಲವನ್ನೂ ತಿಳಿಸಿರುವೆನು. ಮುಖ್ಯವಾಗಿ ಈ ಪುರಾಣದಲ್ಲಿ ಆ ಶ್ರೀಹರಿಯು ಲೀಲಾರವಾಗಿ ಕೈಕೊಂಡ ಅವತಾರಚರಿತ್ರೆಗಳೆಲ್ಲವೂ ಸಂಪೂರ್ಣವಾಗಿ ಕೀರ್ತಿಸಲ್ಪಟ್ಟಿವೆ. ಮನುಷ್ಯನು ಅಕಸ್ಮಾತ್ತಾಗಿ ಕೆಳಗೆ ಬಿಳುವಾಗಾಗಲಿ, ಎಡವಿದಾಗಾಗಲಿ, ದುಃಖಿತನಾಗಿರುವಾಗಾಗಲಿ, ಮೈ ಮರೆತಿದ್ದಾಗಲಾಗಲಿ, ಬಾಯಿ ತಪ್ಪಿಯಾದರೂ ಒಮ್ಮೆ (ಹರಯೇ ನಮಃ”ಎಂದು ಗಟ್ಟಿಯಾಗಿ ಕೂ ಗಿದಪಕ್ಷದಲ್ಲಿ ,ಅವನ ಸಮಸ್ತ ಪಾಪಗಳೂ ಬಿಟ್ಟು ಹೋಗುವುವು. ಆ ಭಗ ವಂತನ ನಾಮಗಳನ್ನು ಬಾಯಿಂದುಚ್ಚರಿಸಿದರೂ, ಅಥವಾ ಬೇರೆಯವರು ಉಚ್ಚರಿಸುವಾಗ ಅದನ್ನು ಕಿವಿಯಿಂದ ಕೇಳಿದರೂ, ಸೂರೆನು ಅಂಧಕಾರವ ನ್ಯೂ , ಬಿರುಗಾಳಿ ಯು ಮೇಘವನ್ನೂ ಚದರಿಸುವಂತೆ, ಭಗವಂತನು ಆತನ ಹೃದಯದಲ್ಲಿ ಪ್ರವೇಶಿಸಿ, ಅವನ ವ್ಯಸನಗಳೆಲ್ಲವನ್ನೂ ನೀಗಿಸುವನು. ಆ ಭಗ ವಂತನ ಗುಣಗಳನ್ನು ಬಿಟ್ಟು ಬೇರೆ ಅಸತ್ಕಥೆಗಳನ್ನು ನುಡಿಯುವ ವಾಕ್ಯಗ ಳೆಲ್ಲವೂ ಕೇವಲ ವ್ಯರ್ಥವಾದಗಳು. ಆ ಶ್ರೀಹರಿಯ ಗುಣಗಳನ್ನೊಳಗೊಂಡ ಮಾತುಗಳೆ ಸತ್ಯವು! ಅದೇ ಮಂಗಳವು! ಅದೇ ಪುಣ್ಯಕರವಾದುದು! ಆ ಭಗ ವರ್ತನಗರ್ಭಿತವಾದ ವಚನವೇ ರಮ್ಯವಾದುದು! ಅದೇ ಮನಸ್ಸಿಗೆ ಮೇಲೆಮೇಲೆ ರುಚಿಕರವಾದುದು! ಅದೇ ಮೇಲೆಮೇಲೆ ಆನಂದಕರ ವಾದುದು! ಅದೇ ಮನುಷ್ಯರಿಗೆ ದುಃಖಿಸಮುದ್ರವನ್ನು ಶೋಷಿಸತಕ್ಕುದು! ಲೋಕಪಾವನವಾದ ಆ ಭಗವಂತನ ಕೀರ್ತಿಯನ್ನು ಕೊಂಡಾಡದ ಕಾವ್ಯವು, ಎಷ್ಮೆ ಚಿತ್ರಪದಗಳಿಂದ ಕೂಡಿದ್ದರೂ, ಅದು ಕಾಗೆಗಳು ಮುಳುಗತಕ್ಕ ಕೊಚ್ಚೆಯ ನೀರಿನಂತೆ ಎಣಿಸಲ್ಪಡುವುದೇಕೊರತು, ಹಂಸಗಳಿಂದ 'ಸೇವಿತ ವಾದ ಉತ್ತಮತೀರದಂತೆ ಎಣಿಸಲ್ಪಡಲಾರದು. ಏಕೆಂದರೆ, ಕಾಗೆಗಳ