ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೩೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀಮದ್ಭಾಗವತವು [ಅನ್ಯಾ. ೧೨, ತಿರುವ ಕಾಮುಕರು ಅದನ್ನ ಭಿನಂದಿಸುವರೇಹೊರತು, ಹಂಸಗಳಂತಿರುವ ಜ್ಞಾನಿಗಳು ಅದನ್ನು ಮುಟ್ಟಲಾರರು. ಭಗವದ್ವಿಷಯವಾದ ಕಥೆಗಳನ್ನು ಪ್ರತಿಪಾದಿಸತಕ್ಕ ಕಥೆಗಳೇ ನಿರ್ಮಲಮನಸ್ಕರಾದ ಸಾಧುಗಳಿಗೆ ಅಭಿನಂದ್ಯ ವೆನಿಸುವುವು. ಯಾವ ಕಾವ್ಯವು, ಭಗವಂತನ ನಾಮಗಳನ್ನು ವಿಷಯಿಕ ರಿಸುವುದೋ, ಅದರಲ್ಲಿ ಪ್ರತಿಶೆಕವೂ ಅಬದ್ಧವಾಗಿದ್ದರೂ, ಆ ವಚನ ಪ್ರಯೋಗವೇ ಸರಾದರಣೀಯವೆನಿಸುವುದು. ಈ ಕಾರಣದಿಂದಲೇ ಸಾಧುಗಳು, ಎಂತವರ ಬಾಯಿಂದ ಹೊರಟರೂ ಆ ಭಗವನ್ನಾ ಮಗಳನ್ನು ಅತ್ಯಾದರದಿಂದ ಕಿವಿಗೊಟ್ಟು ಕೇಳುವರು. ತಮ್ಮಿಂದ ಕೇಳತಕ್ಕವರಿಗೆ ತಾವೂ ಬೇಸರವಿಲ್ಲದೆ ಹೇಳುವರು. ತಮ್ಮಿಂದ ಕೇಳುವವರಾಗಲಿ, ತಮಗೆ ಹೇಳುವವರಾಗಲಿ ಸಿಕ್ಕದಿದ್ದಾಗ, ತಮಗೆ ತಾವೇ ವಿವಿಕ್ತವಾಗಿ ಕುಳಿತು, ಅವು ಗಳನ್ನು ಹಾಡುತ್ತಿರುವರು. ಕರಬಂಧವನ್ನು ನೀಗಿಸಿ, ಪ್ರಕೃತಿಸಂಬಂಧ ವನ್ನು ಬಿಡಿಸತಕ್ಕ ಶುದ್ಧವಾದ ಜ್ಞಾನಯೋಗವಾದರೂಕೂಡ, ಆ ಭಗವ ದ್ಯಾನರಹಿತವಾಗಿದ್ದಾಗ ಚೆನ್ನಾಗಿ ಶೋಭಿಸಲಾರದು. ಏಕೆಂದರೆ, ಅಂತಹ ಜ್ಞಾನವು ಸ್ಥಿರವಾಗಿ ನಿಲ್ಲದೆ ಚ್ಯುತಿಹೊಂದುವ ಸಂಭವವುಂಟು. ಹೀಗೆ ಜ್ಞಾನಯೋಗವೇ ಶೋಭಿಸಲಾರದೆಂದಮೇಲೆ, ಈಶ್ವರನನ್ನು ವಿಷ ಯಕರಿಸದುದಾಗಿಯೂ, ಸದಾ ಪತನಶಂಕೆಯಿಂದ ಭಯಾಸ್ಪದವಾ ಗಿಯೂ ಇರುವ ಕರಯೋಗವು ಪ್ರಕಾಶಿಸಲಾರದೆಂಬುದನ್ನು ಹೇಳಬೇ ಕಾದುದೇನು ? ಅಷ್ಟೇಕೆ ? ಫಲಾಭಿಸಂಧಿಯಿಲ್ಲದ ಸರೆತ್ತಮವೆನಿಸಿದ ಕರಯೋಗವೂಕೂಡ, ಆ ಭಗವದ್ದು ಣಕೀರ್ತನದಂತೆ ಶೋಭಿಸಲಾರದು. ವರ್ಣಾಶ್ರಮಧುಗಳು, ತಪಸ್ಸು, ಶಾಸ್ತ್ರಾಧ್ಯಯನ, ಮುಂತಾದುವುಗ ಳೆಲ್ಲವೂ ಕೀರ್ತಿಯನ್ನೂ, ಯಶಸ್ಸನ್ನೂ ಕೊಡಿಸತಕ್ಕವುಗಳಾಗಿದ್ದರೂ, ಆ ಕೀರ್ತಿಸಂಪತ್ತುಗಳೂ ನಿತ್ಯವಲ್ಲ ! ಕೆಲವು ಕಾಲವಿದ್ದು ಕ್ಷೀಣಿಸತಕ್ಕವು. ಇದಲ್ಲದೆ ತಪೋನಿಷ್ಠ ಮೊದಲಾದುವುಗಳು, ಕೇವಲದೇಹಶ್ರಮಕಾರಣ ಗಳೇ ಹೊರತು, ಶ್ರಮಕ್ಕೆ ತಕ್ಕಂತೆ ಫಲವನ್ನು ಕೈಗೂಡಿಸಲಾರವು. ಆ ಭಗ ವಂತನ ಗುಣಾನುವಾದಶ್ರವಣಾದಿಗಳಿಂದ ಆತನ ಪಾದಪದ್ಮಗಳನ್ನು ಮರೆಯದೆ ಮನಸ್ಸಿನಲ್ಲಿಟ್ಟು ನಡೆಸಿದಾಗಲೇ, ಆ ವರ್ಣಾಶ್ರಮಾದಿ ನಿತೆ