ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೩೬೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೭೫ ಆಧ್ಯಾ ೧೨] ದ್ವಾದಶ ಸ್ಕಂಧವು. ಗಳೂ ಸಫಲವೆನಿಸುವುವು. ದುಃಖಹೇತುಗಳಾದ ದುರಿತಗಳೆಲ್ಲವನ್ನೂ ನೀಗಿಸ ತಕ್ಕುದೂ ಆ ಶ್ರೀಕೃಷ್ಣನ ಪಾದಾರವಿಂದಧ್ಯಾನವೇ ! ರಜಸ್ತಮೋ ಗುಣಗಳನ್ನ ಡಗಿಸಿ ಸತ್ವಶುದ್ಧಿಯನ್ನುಂಟುಮಾಡುವುದೂ ಆ ಕೃಷ್ಣಸ್ಕರ ಣೆಯೇ ! ಪರಮಾತ್ಮನಲ್ಲಿ ಭಕ್ತಿಯನ್ನೂ, ಜ್ಞಾನವೈರಾಗ್ಯಗಳನ್ನೂ ಉಂಟುಮಾಡತಕ್ಕುದೂ ಅದೇ ! ಆದುದರಿಂದ ಓ ಬ್ರಾಹ್ಮಣೋತ್ತಮರೆ ! ನೀವೆಲ್ಲರೂ ಪರಮಭಾಗ್ಯಶಾಲಿಗಳು ! ಏಕೆಂದರೆ; ನೀವು ಇತರವಿಷಯ ವಾದ ಚಿಂತೆಯನ್ನು ಬಿಟ್ಟು, ನಿರಂತರವೂ ಆ ಭಗವಂತನನ್ನೇ ಧ್ಯಾನಿ ಸುತ್ತಿರುವಿರಿ ! ಸರಾ೦ತರಾತ್ಮ ನಾಗಿಯ, ಸ್ವಯಂಪ್ರಕಾಶನಾಗಿಯೂ, ತನಗೆ ಆರಾಧ್ಯವಾದ ಬೇರೆ ದೈವವಿಲ್ಲದೆ, ತಾನೇ ಸಮಸ್ತ ದೇವತೆಗಳಿಗೂ ದೇವನಾಗಿಯೂ, ಸಧ್ವನಿಯಾಮಕನಾಗಿಯೂ ಇರುವ ಶ್ರೀಮನ್ನಾರಾ ಯಣನು ನಿಮ್ಮ ಹೃದಯದಲ್ಲಿ ನಿತ್ಯಸಿವಾಸಮಾಡುತ್ತಿರುವನು, ನೀವೇ ಮಹಾಧನ್ಯರು. ಇಷ್ಟೇ ಅಲ್ಲದೆ, ನಿಮ್ಮಿಂದ ನಾನೂ ಈಗ ಧ್ಯನಾದೆನು. ಏಕೆಂದರೆ, ಪರೀಕ್ಷಿದ್ರಾಜನು ಗ್ರಾಯೋಪವೇಶದಲ್ಲಿದ್ದು, ಮಹಾತ್ಮರಾದ ಅನೇಕಮಹರ್ಷಿಗಳ ಸದಸ್ಸಿನಲ್ಲಿ ಶುಕಮಹಾಮುನಿಯ ಮುಖದಿಂದ ಕೇಳಿದ ಆತ್ಮ ತತ್ವಪ್ರಕಾಶಕವಾದ ಭಾಗವತಪುರಾಣವನ್ನು, ತಿರುಗಿ ನನ್ನ ಸ್ಮರಣಕ್ಕೆ ತಂದು, ನನ್ನ ಬಾಯಿಂದ ಹೊರಡುವಹಾಗೆ ಮಾಡಿದಿರಲ್ಲವೆ ? ಇದರಿಂದ ನಾನೂ ಕೃತಾರ್ಥನಾದೆನು. ಸಮಸ್ತ ಲೋಕಗಳಿಂದಲೂ ಕಿರ್ತಿಸಲ್ಪಡತಕ್ಕ ಆದ್ಯತಚರಿತ್ರೆಯುಳ್ಳ ಭಗವಂತನಾದ ಆ ವಾಸು ದೇವನ ಮಹಿಮೆಯ ಸಸಿಧವಾದ ಅಶುಭಗಳನ್ನೂ ನೀಗಿಸತಕ್ಕುದು, ಅಂತಹ ಚರಿತ್ರೆಯನ್ನೊಳಕೊಂಡ ಪುರಾಣರತ್ನ ವನ್ನು ನಿಮಗೆ ನಾನು ಪೂರ್ಣವಾಗಿ ವಿವರಿಸಿದುದಾಯಿತು. ಲೋಕದಲ್ಲಿ ಯಾವನು, ಈ ಪುರಾಣ ದಲ್ಲಿರುವ ವಿಷಯವನ್ನು, ಪ್ರತಿದಿನವೂ ಒಂದು ಯಾಮಮಾತ್ರವಾಗಲಿ, ಕೊನೆಗೆ ಕ್ಷಣಮಾತ್ರವಾಗಲಿ ಸಾವಧಾನವಾಗಿ ಕೇಳುವನೋ, ಅಥವಾ ಮತ್ತೊಬ್ಬರಿಗೆ ಹೇಳುವನೋ, ಅವನು ಅನೇಕಜನ್ಮಾರ್ಜಿತಗಳಾದ ಸಮಸ್ತ ಪಾಪಗಳಿಂದಲೂ ಮುಕ್ತನಾಗಿ, ಶುದ್ದಿಯನ್ನು ಹೊಂದುವನು. ಈ ಪುರಾಣ ವನ್ನು ಏಕಾದತೀದ್ವಾದಶೀ ದಿನಗಳಲ್ಲಿ ಕೇಳುವರು ದೀರ್ಘಾಯುಷ್ಯಂತ