ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೩೬೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


223 ಶ್ರೀಮದ್ಭಾಗವತವು [ಅಧ್ಯಾ, ೧೨, ರಾಗುವವು. ಇದನ್ನು ಸಾವಧಾನಚಿತ್ತದಿಂದ ಪಠಿಸುವವರು ಮಹಾಪಾತ ಕಗಳಿಂದ ಮುಕ್ತರಾಗುವರು. ಪುಷ್ಕರಕ್ಷೇತ್ರದಲ್ಲಿಯೂ, ಮಧುರೆಯಲ್ಲಿ ಯೂ, ದ್ವಾರಕೆಯಲ್ಲಿಯೂ ಈ ಪುರಾಣಸಂಹಿತೆಯನ್ನು ಉಪವಾಸನಿಯಮ ದಿಂದ ಪಠಿಸುವವರು,ಸಮಸ್ತವಿಧವಾದ ಭಯದಿಂದ ಮುಕ್ತರಾಗುವರು. ಈ ಪುರಾಣದ ಶ್ರವಣಪಠನಾದಿಗಳಿಂದ, ಇದರಲ್ಲಿ ಕೀರ್ತಿಸಲ್ಪಟ್ಟಿರುವ ಎ ಲ್ಲಾ ದೇವತೆಗಳೂ, ಮಹರ್ಷಿಗಳೂ, ಸಿದ್ದರೂ, ಯೋಗಿಗಳೂ, ಪಿತ್ರಗಳೂ, ಮಹಾತ್ಮರಾದ ರಾಜರೂ, ಪ್ರಸನ್ನ ರಾಗಿ, ಅವರವರ ಕೋರಿಕೆಗಳನ್ನು ಕೈ ಗೂಡಿಸುವರು. ಋಗ್ಯಜುಸ್ಸಾಮವೇಗಿಗಳನ್ನು ಅಧ್ಯಯನಮಾಡುವುದರಿಂದ ಯಾವಯಾವ ಫಲಗಳುಂಟೋ, ಜೇನು, ಹಾಲು, ತುಪ್ಪ, ಇವುಗಳ ಪ್ರವಾ ಹದೊಡನೆ ಅನ್ನ ದಾನವನ್ನು ಮಾಡುವುದರಿಂದ ಯಾವ ಯಾವ ಫಲಗ ಳುಂಟೋ, ಅವೆಲ್ಲವೂ ಈ ಪುರಾಣದ ಪಠದಿಂದ ಸಿದ್ದಿಸುವುವು. ಈ ಪುರಾ ಣವನ್ನೋದಿದ ಬ್ರಾಹ್ಮಣನು, ಭಗವಂತನಿಗೆ ನಿವಾಸಭೂತವಾದ ಸಾಕ್ಷಾ ಸ್ಪರಮಪದವನ್ನು ಅನಾಯಾಸವಾಗಿ ಹೊಂದಬಲ್ಲನು. ಇದನ್ನು ಪಠಿಸು ವುದರಿಂದ ಬ್ರಾಹ್ಮಣರು ಜ್ಞಾನಿಗಳಾಗುವರು. ಕ್ಷತ್ರಿಯರು ಸಮುದ್ರಾಂ ತವಾದ ಭೂಮಿಗೆ ಒಡೆಯರಾಗುವರು: ವೈಶ್ಯರು ನಿಥಿಗಳಿಗೆ ಅಧಿಪತಿಗೆ ಳೆನಿಸುವರು. ಶೂದ್ರರು ಪಾಪವಿಮುಕ್ತರಾಗಿ ಶುದ್ಧಿಯನ್ನು ಹೊಂದುವರು. ಕಲಿದೋಷವನ್ನು ನೀಗಿಸತಕ್ಕವನಾಗಿಯೂ, ಅಖಿಲೇಶ್ವರನಾಗಿಯೂ ಇ ರುವ ಶ್ರೀಹರಿಯ ಪ್ರಸಂಗವು, ಬೇರೆ ರಾಜಸತಾಮಸಾದಿಪುರಾಣಗಳಲ್ಲಿ ಅಷ್ಟಾಗಿ ಬರಲಾರದು. ಈ ಪುರಾಣದಲ್ಲಿಯಾದರೂ ಸರಾತ್ಮಕನಾದ ಆ ಭಗವಂತನ ಗುಣಗಳೇ ಪ್ರತಿವಾಕ್ಯಗಳಲ್ಲಿಯೂ, ಪ್ರತಿಪದಗಳಲ್ಲಿಯೂ, ಪ್ರತಿಪಾದಿಸಲ್ಪಡುವುವು. ಓ ಬ್ರಾಹ್ಮಣೋತ್ತಮರೆ ! ಜನ್ಮರಹಿತನಾಗಿ ಯೂ, ಆನಂತನಾಗಿಯೂ, ಪರಮಾತ್ಮ ತತ್ವವೆನಿಸಿಕೊಂಡವನಾಗಿಯೂ, ಪ್ರಪಂಚದ ಸೃಷ್ಟಿ, ಸ್ಥಿತಿಲಯಗಳಿಗೆ ಕಾರಣಗಳೆನಿಸಿದ ರಜಸ್ಸು ಮೊದಲಾ ದ ಶಕ್ತಿತ್ರಯದಿಂದ ಕೂಡಿದವನಾಗಿಯೂ, ಲೋಕೇಶ್ವರರೆನಿಸಿದ ಬ್ರಹ್ಮ ರುದ್ರಾದಿಗಳಿಂದಲೂ ಸ್ತುತಿಸಲ್ಪಡತಕ್ಕವನಾಗಿಯೂ ಇರುವ ಆ ಅಚ್ಚು ತನನ್ನು ನಾನು ಭಕ್ತಿಯಿಂದ ವಂದಿಸುವೆನು. ಮೇಲೆಮೇಲೆ ವಿಕಾರಹೊಂ