ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೩೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೭೫೯ ಅಧ್ಯಾ. ೧೨] ದ್ವಾದಶಸ್ಮ ಧಂವು. ದುತ್ತಿರುವ, ಕಾಲ, ಪ್ರಕೃತಿ, ಮುತ್ತು, ಅಹಂಕಾರ, ಪಂಚಭೂತಗಳೆಂಬ ತನ್ನ ಒಂಬತ್ತು ಬಗೆಯ ಶಕ್ತಿಗಳಿಂದ, ಚರಾಚರಾತ್ಮಕವಾದ ಸಮಸ್ಯಪ್ರಸಂ ಚವನ್ನೂ ತನ್ನಲ್ಲಿಯೇ ಕಲ್ಪಿಸಿಕೊಂಡು, ಅವೆಲ್ಲಕ್ಕೂ ತಾನೇ ಆಥಾರಭೂತ ನಾಗಿ, ಕೇವಲಜ್ಞಾನರೂಪವಾದ ತೇಜಸ್ಸೇ ಸ್ವರೂಪವಾಗಿ ಉಳ್ಳ ದೇವಶ್ರೇಷ್ಠನಾದ ಆ ಭಗವಂತನನ್ನು ವಂದಿಸುವೆನು. ಬ್ರಹ್ಮಂದ್ರವ ರುಣರುದ್ರರೇ ಮೊದಲಾಗಿ ಸಮಸ್ತ ದೇವತೆಗಳೂ, ದಿವ್ಯವಾಕ್ಯಗಳಿಂದ ಯಾವನನ್ನು ಸ್ತುತಿಸುತ್ತಿರುವರೋ, ಸಾಮಗಾನಮಾಡತಕ್ಕವರು ಷಡಂಗಗಳೊಡನೆಯೂ, ಪದಕ್ರಮಗಳೊಡನೆಯೂ, ಉಪನಿಷತ್ತುಗಳೊಡ ನೆಯೂ ಕೂಡಿದ ವೇದವಾಕ್ಕುಗಳಿಂದ ಯಾವನನ್ನು ಗಾನಮಾಡುವರೋ, ಯೋಗಿಗಳು ಯೋಗಪರಿಶುದ್ಧವಾದ ಮನಸ್ಸಿನಲ್ಲಿ ಯಾವನನ್ನು ದೃಢ ಧ್ಯಾನದಿಂದ ಭಾವಿಸಿ,ಹೃದಯದಲ್ಲಿ ಸಾಕ್ಷಾತ್ಕರಿಸುವರೋ, ದೇವಾಸುರರೂ, ಯಾವನ ಗುಣಗಳನ್ನು ಇಷ್ಟೊಂದು ಗಣಿಸಲಾರರೋ, ಅಂತಹ ದೇವದೇವ ನಾದ ಶ್ರೀಹರಿಗೆ ನಮಸ್ಕಾರವು. ಮಹತ್ತಾದ ಮಂದರಪರತವು ಬೆನ್ನ ಮೇಲೆ ಗಿರಗಿರನೆ ಸುತ್ತುತ್ತಿರುವಾಗಲೂ, ಯಾವನಿಗೆ ಹೆಕ್ಕತಿನ ನವೆಯ ನ್ಯಾರಿಸುತ್ತ, ಸುಖನಿದ್ರೆಯನ್ನುಂಟುಮಾಡುವಂತಾಯಿತೋ, ಯಾವನ ಉಸಿರಾಟದಿಂದ ಆಗ ಉಲ್ಲೋಲಕಲ್ಲೋಲವಾದ ಸಮುದ್ರವು, ಈಗಲೂ ಆ ಸಂಸ್ಕಾರವನ್ನು ಬಿಡದಂತೆ ಅಲೆಗಳೆಂಬ ನೆವದಿಂದ ಹಿಂದುಮುಂದಕ್ಕೆ ತೂಗಾಡುತ್ತ ನೆಮ್ಮದಿಯಿಲ್ಲದಿರುವುದೋ, ಅಂತಹ ಕೂರರೂಪಿಯಾದ ಭಗವಂತನ ಶ್ವಾಸಾನಿಲವು ನಿಮ್ಮನ್ನು ರಕ್ಷಿಸಲಿ” ಎಂದು ನಮಸ್ಕರಿಸಿ, ಸೂತ ಪೌರಾಣಿಕನು ತಿರುಗಿ ಆ ಶೌನಕಾದಿಗಳನ್ನು ಕುರಿತು. “ಓ ಮಹರ್ಷಿಗಳೆ ! ಇನ್ನು ಅಷ್ಟಾದಶಪುರಾಣಗಳ ಬೇರೆಬೇರೆ ಗ್ರಂಥಸಂಖ್ಯೆಯನ್ನೂ, ಅವೆಲ್ಲವು ಗಳ ಒಟ್ಟು ಸಂಖ್ಯೆಯನ್ನೂ , ಈ ಭಾಗವತಪುರಾಣದಲ್ಲಿ ಪ್ರಧಾನವಾದ ವಾ ಚ್ಯಾರ್ಥವೇನೆಂಬುದನ್ನೂ , ಅದರ ಪ್ರಯೋಜನವನ್ನೂ, ಈ ಪುರಾಣದ ದಾನಪಠನಾದಿಗಳ ಮಹಿಮೆಯನ್ನೂ ತಿಳಿಸುವೆನು ಕೇಳಿರಿ! ಬ್ರಾಹ್ಮಪುರಾಣ ವು ಹತ್ತು ಸಾವಿರ ಗ್ರಂಥಗಳುಳ್ಳುದು. ಪಾದ್ಮವು ಐವತ್ತೈದು ಸಾವಿರ ಗ್ರಂಥಗಳುಳ್ಳುದು. ವೈಷ್ಣವವು ಇಪ್ಪತ್ತು ಮೂರು ಸಾವಿರಗ್ರಂಥಗಳ 174 B