ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾ, ೩.] ಏಕಾದಶಸ್ಕಂಧವು. ೨೪೩೧ ಗಳನ್ನನುಭವಿಸುತ್ತಿರುವವನೇ ಜೀವಾತ್ಮನು ! ಈಮೇಲೆ ಹೇಳಿದ ಚೇತ ನಾಚೇತನಗಳೆರಡೂ ಅಚಿಂತ್ಯಶಕ್ತಿಯಾದ ಆ ಬ್ರಹ್ಮನ ಶರೀರ ವೇ ಎಂದು ಪ್ರಮಾಣಗಳಿಂದ ತಿಳಿದುಬರುವುದು. ಆ ಪರಬ್ರಹ್ಮವೆಂ ಬುದು ಮೇಲೆ ಹೇಳಿದ ಚೇತನಾಚೇತನಗಳಿಗಿಂತಲೂ ವಿಲಕ್ಷಣವೆನಿಸಿರುವುದು. ಮೇಲೆ ಹೇಳಿದ ಚೇತನಾಚೇತನಗಳಲ್ಲಿ ಜೀವನಿಗೆ ಹುಟ್ಟಿಲ್ಲ ! ಬೆಳೆವಳಿಕೆಯಿ ! ಕ್ಷಯವಿಲ್ಲ ! ಆದುದರಿಂದ ಮರಣವೂ ಇಲ್ಲ ! ಈ ವಿಕಾರಗಳೆಲ್ಲವೂ ದೇ ಹಕ್ಕೆ ಮಾತ್ರವೇ ! ಆತ್ಮನು ದೇಹಕ್ಕೆ ಮೊದಲ, ದೇಹವಿರುವಾಗಲೂ, ಆದೇಹವು ಹೋದಮೇಲೆಯೂ ಇರತಕ್ಕವನಾದುದರಿಂದ ನಿತ್ಯನು. ಆ ಚೇತನಸಿಗೆ ಜ್ಞಾನವೊಂದೇ ಸ್ವರೂಪವಾದುದರಿಂದ, ಆ ಸ್ವರೂಪಕ್ಕೆ ಎಲ್ಲಿ ಯೂ ಯಾವಾಗಲೂ ವಿಕಲ್ಪವಿಲ್ಲ. ಆದರೆ, ಕಣ್ಣು, ಕಿವಿ, ಮುಂತಾದುವು ಗಳಿಗೆ ಸಂಬಂಧಿಸಿದ ಜ್ಞಾನಕ್ಕೆ ಪರಸ್ಪರಭೇದ ವುಂಟಲ್ಲವೆ?” ಎಂದರೆ ಪ್ರಾ ಣವೆಂಬುದೊಂದೇ, ವ್ಯಾಪಾರಭೇದದಿಂದ ಅಪಾನಾದಿಭೇದಗಳಾಗಿ ವಿಕಲ್ಪಿ ತವಾಗಿರುವಂತೆ, ಕಣ್ಣು ಮೊದಲಾದ ಇಂದ್ರಿಯಗಳ ಜ್ಞಾನವೂ, ಅವುಗಳ ವ್ಯಾಪಾರಭೇದದಿಂದ ಬೇರ್ಪಡುವುವು. ಜೀವನ ಸ್ವರೂಪಭೂತವಾದ ಜ್ಞಾನಕ್ಕೆ ಈ ವಿಕಲ್ಪಗಳಿಲ್ಲ. ಆ ಜೀವನ ಸಿರಿ ಕಾರವಾದ ಒಂದೇಸ್ವರೂ ಹದಿಂದ, ಜರಾಯುಜ, ಸೈದಜ, ಅಂಡಜ, ಉದ್ದಿಜಗಳೆಂಬ ನಾನಾವಿಧ ಶರೀರಗಳಲ್ಲಿಯೂ ಪ್ರವೇತಿಸಿ, ಪ್ರಾಣಗಳಮೂಲಕವಾಗಿ ಅವುಗಳಿಗೆ ಧಾರ ಕನಾಗಿರುವನು.ಆ ಆತ್ಮಸ್ವರೂಪವು ಮಾತ್ರ ಎಲ್ಲರಿಗೂ ಸ್ಪುಟವಾಗಿ ಕಾಣಿಸ ಲಾರದು. ಇಂದ್ರಿಯಸಮೂಹಗಳನ್ನೂ, ಅಹಂಕಾರಮಮಕಾರಾದಿ ಮನೋವ್ಯಾಪಾರಗಳನ್ನೂ ಅಡಗಿಸಿದಮೇಲೆ, ನಮಗೆ ನಮ್ಮ (ಆತ್ಮನ) ಯಥಾವಸ್ಥಿತಸ್ವರೂಪವು ವ್ಯಕ್ತವಾಗುವುದು. ಹಾಗಿದ್ದರೆ ಆ ಅಹಂ ಕಾರಾದಿಮನೋವ್ಯಾಪಾರಗಳನ್ನು ಅಡಗಿಸುವುದು ಹೇಗೆ?” ಎಂದು ಕೇಳು ವೆಯಾ? ಹೆಂಡಿರು, ಮಕ್ಕಳು, ಹಣ, ಮುಂತಾದುವುಗಳಲ್ಲಿ ಆಸೆಯೆಂಬ ಈ ಷಣತ್ರಯವನ್ನೂ ಪರಿತ್ಯಜಿಸಿ, ಭಗವಂತನ ಪಾದಾರವಿಂದಗಳಲ್ಲಿಯೇ ಆಸಕ್ತನಾಗಿ, ಆದರಿಂದುಂಟಾದ ಭಕ್ತಿಪರಿಪಾಕದಿಂದ, ಸತ್ಯಾವಿಗುಣ ಮೂಲಕಗಳಾದ ಪುಣ್ಯಾಪುಣ್ಯಕಗಳ ದೆಸೆಯಿಂದುಂಟಾಗುವ ರಾಗದ್ವೇ ಛ