ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೪೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೪೩೮ ಶ್ರೀಮದ್ಭಾಗವತವು [ಅಧ್ಯಾ, ೪ ವುದು ದೇವತೆಗಳಿಗೆ ಸಹಜವೇ ಆಗಿರುವುದು. ನಿನ್ನ ಸೇವೆಯಲ್ಲಿ ವಿಮುಖ ರಾದವರಿಗೆ ಆ ವಿಧವಾದ ವಿಷ್ಣು ಗಳೆಂದೂ ಸಂಭವಿಸಲಾರವು. ಏಕೆಂ ದರೆ, ಕೃಷಿಮಾಡುವವರು, ರಾಜನಿಗೆ ತೆರಿಗೆಯನ್ನೊ ಪ್ಪಿಸುವಂತೆ, ಅವರು ಯಜ್ಞಗಳಲ್ಲಿ ದೇವತೆಗಳಿಗೆ ಅವರವರ ಭಾಗಗಳನ್ನು ಒಪ್ಪಿಸಿ ಸಂತೋಷ ಗೊಳಿಸುತ್ತಿರುವರು. ಆದರೆ ಇದರಿಂದ ನಿನ್ನನ್ನು ಪಾಸನೆಮಾಡತಕ್ಕವರಿಗೆ ವಿಷ್ಣು ಗಳು ಬಂದೇ ಬರುವುವೆಂದು ಹೇಳುವುದಕ್ಕಿಲ್ಲ. ಅವರು ನಿನ್ನ ಅನು ಗ್ರಹಕ್ಕೆ ಪಾತ್ರರಾದ ಪಕ್ಷದಲ್ಲಿ, ಇದೆ ವಿಷ್ಣು ಗಳೆಲ್ಲವನ್ನೂ ನೀನೇ ಕಾಲಿಂದ ಮೆಟ್ಟಿ ತುಳಿಯುವೆ ? ಹಸಿವು, ಬಾಯಾರಿಕೆ, ತೀತ, ಉಷ್ಣ, ಮಳೆ, ಗಾಳಿ, ಆಹಾರಸುಖ, ಮೈದುನಸುಖವೆಂಬಿವೆಲ್ಲವೂ ನಮ್ಮ ಪರಿವಾರಗಳು ! ಇವೆ ಲವೂ ಮಹಾಸಮುದ್ರದಂತೆ ಅಪಾರವಾಗಿರುವುವು. ಕೆಲವರು ತಮ್ಮ ಮನೋದಾರ್ಢದಿಂದ ಈ ಮಹಾಸಮುದ್ರವನ್ನು ದಾಟಿ ಹೋಗುವು ದುಂಟು. ಆದರೇನು? ದೊಡ್ಡ ಸಮುದ್ರವನ್ನು ದಾಟಿ ಬಂದವು, ಗೋ ಇದದಲ್ಲಿ (ಹಸುವಿನ ಹಳ್ಳಿಯಿಂದಾದ ಹಳ್ಳದಲ್ಲಿ ಮುಳುಗಿ ಸಾಯುವಂತೆ; ಆಕಸ್ಮಾತ್ತಾಗಿ ಕೋಪವಶರಾಗಿ, ಅದುವರೆಗೆ ಮಾಡಿದ ತಪಸ್ಸನ್ನೆಲ್ಲಾ ವ್ಯರ್ಥವಾಗಿ ಕಳೆದುಕೊಳ್ಳುವರು” ಎಂದರು. ಈ ಮಾತುಗಳನ್ನು ಕೇಳುತ್ತ ನಾರಾಯಣಮುನಿಯು, ಮುಂದೆ ನಿಂತಿದ್ದ ದೇವಾಂಗನೆಯರ ಸಾಂದವ್ಯದ ಕೆಚ್ಚನ್ನು ಮುರಿಯಬೇಕೆಂಬ ಉದ್ದೇಶದಿಂದ, ಅವರೆಲ್ಲರೂ ನೋಡುತ್ತಿ ರುವಹಾಗೆಯೇ ತನ್ನ ಇಛಾಮಾತ್ರದಿಂದ ಕೆಲವು ಸ್ತ್ರೀಯರನ್ನು ಸೃಷ್ಟಿಸಿ ಅವರಿಗೆ ತೋರಿಸಿದನು. ಸಾಲಂಕಾರಭೂಷಿತರಾಗಿ, ಅದ್ಭುತ ರೂಪದಿಂದಿದ್ಧ ಆ ಸ್ತ್ರೀಯರೆಲ್ಲರೂ, ಮಹಾತ್ಮರಾದ ಆ ನರನಾರಾಯಣರ ಪಾದಶುಶೂಷೆಯನ್ನು ಮಾಡತೊಡಗಿದರು. ಮನ್ಮಥಾದಿಗಳೂ,ದೇವಾಂಗ ನೆಯರೂ, ಸಾಕ್ಷಾಛಿದೇವಿಯಂತೆ ರೂಪವತಿಯರಾದ ಆ ಸ್ತ್ರೀಯರನ್ನು ನೋಡಿ, ಅವರಕಡೆಯಿಂದ ಹೊರಟುಬರುವ ಸುಗಂಧಕ್ಕೂ, ಅವರ ರೂ ಹೌದಾಗ್ಯಗಳಿಗೂ ಮರುಳಾಗಿ, ನಾಚಿಕೆಯಿಂದ ಮುಖದಲ್ಲಿ ಕಾಂತಿಗುಂದಿ ತಲೆಬಗ್ಗಿ ನಿಂತಿದ್ದರು. ಆಗ ದೇವದೇವೋತ್ತಮನಾದ ನಾರಾಯಣನು ಅವರನ್ನು ಕುರಿತು ಮಂದಹಾಸಪೂರೈಕವಾಗಿ ” ಎಲೈ ಕಾಮಾದಿಗಳೆ !