ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೪೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೪೪೩ ಅಧ್ಯಾ, ೫.] ಏಕಾದಶಸ್ಕಂಧವು. ಬಿದ್ದ ಮೂಢರು' ಆ ಭಗವಂತನ ಸುದ್ದಿಯನ್ನಾದರೂ ಕಿವಿಯಿಂದ ಕೇಳ ರು. ತಮ್ಮ ತಮ್ಮ ಮನೋರಧಗಳನ್ನೇ ಹೇಳಿಕೊಳ್ಳುತ್ತ ವ್ಯಸ್ಥವಾಗಿ ಕಾಲ ವನ್ನು ಕಳೆದುಬಿಡುವರು.+ ಲೋಕದಲ್ಲಿ ಮನುಷ್ಯರಿಗೆ ಸ್ತ್ರೀಸಂಗ, ಮಾಂ ಸಭೋಜನ, ಮದ್ಯಸೇವನೆ, ಮುಂತಾದ ದುವ್ಯಾಪಾರಗಳೆಲ್ಲವೂ ಹುಟ್ಟು, ವುದು ರಾಗಾದಿದೋಷಗಳಿಂದಲೇ! ಆದರೆ ಶಾಸ್ತ್ರಗಳಲ್ಲಿ ಈ ವಿಚಾರವಾಗಿ ಯೂ ಕೆಲವು ಅವಕಾಶಗಳು ಏರ್ಪಟ್ಟಿರುವುವು. ವಿವಾಹಿತೆಯಾದ ಸ್ತ್ರೀಯೊ ಡನೆಋತುಕಾಲಗಳಲ್ಲಿ ಮಾತ್ರ ಸಂಭೋಗವೂ, ಯಜ್ಞ ಕಾಲದಲ್ಲಿ ಮಾತ್ರವೇ ಮಾಂಸಭೋಜನವೂ, ಸೌತಾಮಣಿಯೆಂಬ ಇಷ್ಟಿಯಲ್ಲಿ ಮಾತ್ರವೇ ಸು ರಾಪಾನವೂ ವಿಹಿತವಾಗಿವೆ. ಮಿಕ್ಕ ಕಾಲಗಳಲ್ಲಿ ಇವುಗಳನ್ನು ತ್ಯಜಿಸಬೇಕು. ಮತ್ತು ಸಂಪಾದಿಸಿದ ಧನಕ್ಕೆ ಭಗವತಿಕರಗ ಳಾದ ಧರಗಳೇ ಫಲವೇಹೊರತು ವಿಷಯೋಪಭೋಗಗಳಲ್ಲ. ಅಂತಹ ಧರಗಳನ್ನು ನಡೆಸುವುದರಿಂದ, ಪ್ರಕೃತಿ ಜೀವ ಪರಮಾತ್ಮನಿವೇಚನಪೂ ಕ್ವಿಕವಾಗಿ, ಆ ಭಗವಂತನ ಯಾಥಾತ್ಮಜ್ಞಾನವುಂಟಾಗುವುದು.ಈ ಜ್ಞಾನ ವು ಹುಟ್ಟಿದಮೇಲೆ, ಹಸಿವು, ಬಾಯಾರಿಕೆ ಮುಂತಾದ ಷಡೂರಿಗಳನ್ನು ಜ ಯಿಸಬಹುದು. ಇದನ್ನು ತಿಳಿಯದೆ ಕೆಲವರು, ವಿಷಯೋಪಭೋಗಕ್ಕಾಗಿಯೇ ಧನವನ್ನು ಉಪಯೋಗಿಸುವರು. ಅಂತವರು ತಮ್ಮ ದೇಹವು ಎಂದಿದ್ದರೂ ಮೃತ್ಯುವಿನ ಪಾಲೆಂಬುದನ್ನು ಯೋಚಿಸದೆ ಅದರ ಪೋಷಣೆಗಾಗಿಯೇ ಶ್ರಮಪಡುವರು. ಇಂತವರು ಕೇವಲನಿಂದ್ಯರು. ಯಜ್ಞ ಕಾಲಗಳಲ್ಲಿ ವಿಹಿತಗಳಾಗಿರುವ ಸುರಾಪಾನ ಮಾಂಸಭಕ್ಷಣಗಳೆರಡೂ, ತನಗೆ ಪ್ರಾಣ ಭೂತನಾದ ಪರಮಾತ್ಮನ ಪ್ರೀತಿಗಾಗಿಯೇ ಹೊರತು ತನ್ನ ತೃಪ್ತಿಗಲ್ಲ ! ಅದರಲ್ಲಿ ಮಾಡಿದ ಪಶುವಧವೂ ಹಿಂಸೆಯೆನಿಸುವುದಿಲ್ಲ ! ಅವುಗಳಿಂದ ಆತ್ಮ * * "ಧರ ಪ್ರಜಾಸಂಪುರ ಸೀಯಮಹೇಶ್, ಋತಾ ಉಪೇಯಾತ್ ಪಶುಮೂಲಭೇತ, ಯಜಮಾನಪಂಚಮಾ ಇಡಾಂ ಭಕ್ಷಯ, ಹುತಶೇಷಮಶೀ ಯಾತ್, ಸೌತ್ರಾಮಣ್ಣಾಸುರಾಗ್ರಹ೯ ಗೃಹ್ವಾತಿ, ಪ್ರತಿಗ್ರಹಾದಿನಾ ಧನಮಾರ್ಜ ಯೇತ್?' ಇತ್ಯಾದಿಶಾಸ್ತ್ರಗಳು ಸ್ತ್ರೀಸಂಗಾದಿಗಳನ್ನು ವಿಧಿಸುತ್ತಿರುವಾಗ ಅವುಗಳ ನ್ನು ನಿಂದಿಸಬಹುದೆ ? ಎಂದರೆ ಅದಕ್ಕೆ ಸಮಾಧಾನವಾಗಿ ಮುಂದಿನ ವಾಕ್ಯವೆಂದು ಗ್ರಹಿಸಬೇಕು