ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೫೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಅಧ್ಯಾ, ೫.] ಏಕಾದಶಸ್ಕಂಧವು. ೨೪೪೫

ಲಿಗಳೆಂಬ ನಾಲ್ಕು ಯುಗಗಳಲ್ಲಿಯೂ, ಶ್ರೀಹರಿಯು ನಾನಾವಿಧವರ್ಣಗ ಳಿಂದಲೂ, ನಾಮರೂಪಗಳಿಂದಲೂ ಕೂಡಿದವನಾಗಿ, ಬೇರೆಬೇರೆ ಏಧಿಗ ಳಿಂದ ಪೂಜಿಸಲ್ಪಡುವನು. ಕೃತಯುಗದಲ್ಲಿ ಶುಕ್ತವರ್ಣದಿಂದಲ, ಚತು ರ್ಬಾಹುಗಳಿಂದಲೂ ಕೂಡಿದವನಾಗಿ, ಜಡೆ, ನಾರುಮಡಿ, ಕೃಷ್ಣಾಜಿನ, ಯಜ್ಯೋಪವೀತ, ಅಕ್ಷಮಾಲಿಕೆ, ದಂಡ, ಕಮಂಡಲುಗಳನ್ನು ಧರಿಸಿ, ಬ್ರ ಹ್ಮಚಾರಿವೇಷದಿಂದಿರುವನು. ಆ ಕಾಲದಲ್ಲಿ ಮನುಷ್ಯರೆಲ್ಲರೂ ವೈರಬುದ್ಧಿ ಯಿಲ್ಲದೆ, ಶಾಂತರಾಗಿ, ಸಪ್ಪಭೂತಸುಕೃತ್ತುಗಳೆನಿಸಿಕೊಂಡು, ಸಮದರ್ಶಿ ಗಳಾಗಿ, ಶಮದಮಾದಿಗುಣಗಳಿಂದಲೂ, ಧ್ಯಾನಯೋಗದಿಂದಲೂ ಕೂಡಿ ಭಗವಂತನನ್ನಾ ರಾಧಿಸುವರು. ಆಗ ಭಗವಂತನು, ಹಂಸ, ಸುವರ್ಣ, ವೈ ಕುಂಠ, ನೃತ್ಯ, ಯೋಗೀಶ್ವರ, ಅನಲ, ಈಶ್ವರ, ಪುರುಷ, ಅವ್ಯಕ್ಕೆ, ಪರಮಾತ್ಮನೆಂಬೀ ಹೆಸರುಗಳಿಂದಲೂ, ಆ ಹೆಸರಿಗೆ ತಕ್ಕ ಗುಣಗಳಿಂದ ಲೂ ಕೀರ್ತಿಸಲ್ಪಡುವನು. ತ್ರೇತಾಯುಗದಲ್ಲಿ ಭಗವಂತನು ರಕ್ತವ ರ್ಣದಿಂದಲೂ, ನಾಲ್ಕು ಭುಜಗಳಿಂದಲೂ ಕೂಡಿದವನಾಗಿ, ಯಜ್ಞಾಂಗವೆನಿ ದಸಿ ಮೂರೆಳೆಯ ಮೇಖಲೆಯನ್ನು ಧರಿಸಿರುವನು ಆಗ ಅವನು ಪಿಂಳ ವರ್ಣವಾದ ಕೇಶಗಳೊಡನೆ ಯಜ್ಞಮೂರ್ತಿಯೆನಿಸಿಕೊಂಡು, ಯಜ್ಞಸಿ ರ್ವಾಹಕನಾಗಿ, ಸುಕ್ಕು, ಸುವೆ ಮೊದಲಾದ ಯಜ್ಞ ಚಿಹ್ನೆಗಳನ್ನು ಧರಿಸಿ ರುವನು. ಆ ಕಾಲದಲ್ಲಿ, ಜನರೆಲ್ಲರೂ ಪ್ರಾಯಕವಾಗಿ, ಧರಿಸಿಟ್ಟರೂ, ಬ್ರಹ್ಮವಾದಿಗಳೂ ಆಗಿದ್ದು, ಯಜ್ಞಾದಿಕರಗಳಿಂದ ಆತನನ್ನಾರಾ `ಧಿಸುವರು. ಆಗ ಭಗವಂತನು, ಯಜ್ಞ, ಕೃತಿ ಗರ್ಭ, ಸಸ್ಯ, ದೇವ, ಉರುಕ್ರಮ, ವೃಷಾಕಪಿ, ಜಯಂತ, ಉರುಗಾಯ ನೆಂಬೀಹೆಸರುಗಳಿಂದ ಲೂ, ಅದಕ್ಕೆ ತಕ್ಕಗುಣಗಳಿಂದಲೂ ಕೀರ್ತಿಸಲ್ಪಡುವನು. ದ್ವಾಪರಯುಗದಲ್ಲಿ ಭಗವಂತನು, ಪೀತಾಂಬರವನ್ನು ಧರಿಸಿ, ಶಂಖ ಚಕ್ರಾದ್ಯಾಯುಧಗಳಿಂದಲೂ, ಶ್ರೀವತ್ಯಾದಿ ಸಹಜಚಿಹ್ನಗಳಿಂದಲೂ, ಕೌ ಸ್ತುಭ, ವನಮಾಲಿಕೆ, ಮುಂತಾದ ಅಸಾಧಾರಣಭೂಷಣಗಳಿಂದಲೂ ಒ ಶೃತ್ಯ,ಸಾಲ್ವಭೌಮಲಕ್ಷಣಗಳಾದ ಛತ್ರಚಾಮರಾದಿಗಳಿಂದಲೂ ಕೂಡಿರು ವನು. ಆಗ ಮನುಷ್ಯರು, ತತ್ನತ್ರಯಜ್ಞಾನವನ್ನು ಕೋರಿ, ವೇದಗಳಲ್ಲಿ