ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೫೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೪೪೩ ಶ್ರೀಮದ್ಭಾಗವತವು [ಅಧ್ಯಾ. ೫ಯೂ, ಪಾಂಚರಾತ್ರಗಳಲ್ಲಿಯೂ ವಿಧಿಸಲ್ಪಟ್ಟ ಪೂಜಾವಿಧಾನಗಳಿಂದ ಪರಮಪುರುಷನನ್ನು ಪೂಜಿಸುವರು. ಆಗ ಜನರು ಓ ಭಗವಂತಾ ! ವಾಸು ದೇವ ಸಂಕರ್ಷಣ ಪ್ರದ್ಯುಮ್ಮ ಅನಿರುದ್ಧರೆಂಬ ನಾಲ್ಕು ವ್ಯೂಹ ರೂಪ ಗಳಿಂದವತರಿಸಿದ ಸಿನಗೆ ನಮಸ್ಕಾರವು. ನಾರಾಯಣಋಷಿಯೂ ಮ ಹಾಪುರುಷನೂ ವಿಶ್ವೇಶ್ವರನೂ ವಿಶ್ವಾತ್ಮಕನೂ,ಸತ್ವಭೂತಾಂತರಾತ್ಮನೂ ಆದ ನಿನಗೆ ನಮಸ್ಕಾರವು.” ಎಂದು ಸ್ತುತಿಸುವರು. ಇನ್ನು ಕಲಿಯುಗ ದಲ್ಲಿ ಆ ಭಗವಂತನ ಸ್ಥಿತಿಯನ್ನೂ , ಅವನನ್ನು ಜನರು ಹೇಗೆ ಉಪಾಸನೆ ಮಾಡುವರೆಂಬುದನ್ನೂ ತಿಳಿಸುವೆನು ಕೇಳು ! ಆಗ ಭಗವಂತನು ಕಾಂತಿ ಯಲ್ಲಿ ಇಂದ್ರನೀಲಮಣಿಯನ್ನು ಹೋಲುತ್ತ, ಕೃಷ್ಣನಾಮದಿಂದಲೇ ಕರೆಯಲ್ಪಡುವನು. ಆ ಶ್ರೀಕೃಷ್ಣನನ್ನೂ , ಅವನ ಹೃದಯಾದ್ಯಂಗಗಳ ನ್ಯೂ , ಕೌಸ್ತುಭವೇ ಮೊದಲಾದ ಅವನ ಉಪಾಂಗಗಳನ್ನೂ, ಶಂಖಚಕ್ರಾ ದ್ಯಾ ಯುಧಗಳನ್ನು, ಸುನಂದ, ನಂದರೇ ಮೊದಲಾದ ಅವನ ಪಾರ್ಷದರ ನ್ಯೂ , ಏವೇಕಿಗಳಾದ ಜನರು, ಕಲಿಯುಗದಲ್ಲಿ ಕೇವಲ ಸಂಕೀರ್ತನರೂಪ ವಾದ ಪೂಜೆಗಳಿಂದಲೇ ಆರಾಧಿಸುವರು. ಆಗ ಅವರು ಭಗವಂತನನ್ನು ಕುರಿತು. - ಓ ಆಶ್ರಿತರಕ್ಷಣಾ ! ಮಹಾಪುರುಷಾ ! ನಿನ್ನ ಚರಣಾರವಿಂ ದಗಳನ್ನು ವಂದಿಸುವೆವು, ಆ ನಿನ್ನ ಪಾದಪದ್ಮವೊಂದೇ ಈಗ ನಮಗೆ ಧ್ಯಾನಯೋಗ್ಯವಾದುದು. ನಮಗೆ ಕುಟುಂಬಮೋಹವನ್ನೂ , ಇಂದ್ರಿಯ ಚಾಪಲ್ಯವನ್ನೂ ನೀಗಿಸಿ, ನಮ್ಮ ಇಷ್ಕಾರಗಳನ್ನು ಕೈಗೂಡಿಸುವುದಕ್ಕೂ ನಿನ್ನ ಪಾದಸೇವೆಯೇ ಮುಖ್ಯೋಪಾಯವು, ಗಂಗಾದಿ ಪುಣ್ಯತೀರಗಳಿ ಗೂ ಆಶ್ರಯವೆನಿಸಿಕೊಂಡು, ಬ್ರಹ್ಮ ರುದ್ರಾದಿದೇವತೆಗಳಿಗೂ ಸೇವ್ಯ ವಾಗಿ, ಸಮಸ್ತ ಪ್ರಾಣಿಗಳಿಗೂ ಮುಖ್ಯಗತಿಯಾಗಿ, ಭಕ್ತರ ಅನಿಷ್ಟಗಳೆಲ್ಲ ವನ್ನೂ ನಿವಾರಿಸತಕ್ಕೆ ನಿನ್ನ ಪಾದವನ್ನು ವಂದಿಸುವೆವು. ಸಂಸಾರಸಮು ದ್ರವನ್ನು ದಾಟಿಸುವುದಕ್ಕೆ ಆ ನಿನ್ನ ಪಾದಗಳೇ ನಾವೆಯಂತಿರುವುವು. ಲೋಕದಲ್ಲಿ ಧರ ಮಯ್ಯಾದೆಯನ್ನು ನಿರೂಪಿಸುವುದಕ್ಕಾಗಿ ರಾಮರೂಪದಿಂ ದವತರಿಸಿದ ಸೀನು, ಪಿತೃವಾಕ್ಯ ಪರಿಪಾಲನಕ್ಕಾಗಿ, ದೇವತೆಗಳೂ ಆಸೆಪಡ ತಕ್ಕ ದುಸ್ಯಜವಾದ ಸಾಮ್ರಾಜ್ಯಲಕ್ಷ್ಮಿಯನ್ನೂ ತೊರೆದು, ಕಾಡಿಗೆ