ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪೫೦ ಶ್ರೀಮದ್ಭಾಗವತವು [ಅಧ್ಯಾ. ೬. ಬ್ರಹ್ಮಾ ದೇವರಿಗೆ ಹ್ಮಾದಿದೇವತೆಗಳು ದ್ವಾರಕೆಗೆ ಬಂದು ಶ್ರೀಕೃಷ್ಣ " ನನ್ನು ಸ್ತುತಿಸಿದುದು, "S* ಓ ಪರೀಕ್ಷಿದ್ರಾಜಾ ! ಕೃಷ್ಣನು ಯಾದವಕುಲಸಂಹಾರಕ್ಕಾಗಿ ಬ್ರಾಹ್ಮಣಶಾಪವನ್ನೇ ವ್ಯಾಜವಾಗಿ ಸಂಕಲ್ಪಿಸಿದನಷ್ಟೆ ? ಆ ಸಂಕಲ್ಪವು ಹುಟ್ಟಿದಮೇಲೆ, ಒಮ್ಮೆ ಬ್ರಹ್ಮನು ಮರೀಚಿ ಮೊದಲಾದ ಪ್ರ ಜಾಧಿಪತಿಗಳೊಡನೆಯೂ, ತನ್ನ ಪುತ್ರರಾದ ಸನಕಾದಿಗಳೊಡನೆಯೂ, ರುದ್ರನು ಸಮಸ್ತಭೂತಗಣಗಳೊಡನೆಯೂ, ದೇವೇಂದ್ರನು, ದೇವಗಣ ಗಳೊಡನೆಯೂ, ದ್ವಾದಶಾದಿತ್ಯರು, ಅಷ್ಟವಸುಗಳು, ಅಶ್ವಿನೀದೇವತೆ ಗಳು, ಋಷಿಗಳು, ಆಂಗಿರಸರು, ಏಕಾದಶರುದ್ರರು, ವಿಶ್ವೇದೇವತೆಗಳು, ಸಿದ್ದರು, ಸಾಧ್ಯರು, ನಾಗರು, ಗುಹ್ಯಕರು, ಚಾರಣರು, ಪಿತೃಗಳು, ವಿ ದ್ಯಾಧರರು, ಕಿನ್ನರರು, ಮುಂತಾದ ಇತರದೇವತೆಗಳೂ ಒಟ್ಟಾಗಿ ಸೇರಿ, ಶ್ರೀಕೃಷ್ಣನ ದರ್ಶನಾರ್ಥವಾಗಿ ವ್ಯಾರಕೆಗೆ ಬಂದರು. ಭಗವಂತನು ಸ ಮಸ್ತಲೋಕಕ್ಕೂ ಮೋಹಕವಾದ ಯಾವ ಶರೀರದಿಂದ ಲೋಕಪಾವನ ವಾದ ತನ್ನ ಕೀರ್ತಿಯನ್ನು ವಿಸ್ತರಿಸಿದನೋ, ಆ ಮೂರ್ತಿಯನ್ನು ತಾವೂ ಕಣ್ಣಾರೆ ಕಂಡು ಆನಂದಿಸಬೇಕೆಂಬ ಉತ್ಸಾಹದಿಂದ, ಆ ದೇವತೆಗಳೆಲ್ಲರೂ ಭಾಗ್ಯಸಮೃದ್ಧವಾದ ದ್ವಾರಕೆಗೆ ಬಂದು, ಅಲ್ಲಿ ಅದ್ಭುತದರ್ಶನವುಳ್ಳ ಆಿ ಕೃಷ್ಣನ ದೇಹಸೌಂದಯ್ಯವನ್ನು ಎಷ್ಟೆಷ್ಟು ನೋಡಿದರೂ ತೃಪ್ತಿಯಿಲ್ಲ ದಂತೆ, ಆತನ ದರ್ಶನಾನಂದವನ್ನನುಭವಿಸುತಿದ್ದರು, ಆಮೇಲೆ ಅವರು ಆ ಕೃಷ್ಣನಮೇಲೆ ನಂದನವನದಿಂದ ತಂದ ಪುಷ್ಟಗಳನ್ನು ವರ್ಷಿಸುತ್ತ, ಶಬ್ದಾರವಿಚಿತ್ರಗಳಾದ ಸ್ತುತಿವಾಕ್ಯಗಳಿಂದ ಹೀಗೆಂದು ಸ್ತುತಿ ಸುವರು. “ನಾಥಾ ! ನಾವು ನಮ್ಮ ಮನೋವಾಕ್ಕಾಯಗಳೆಂಬ ಕರಣ ತ್ರಯದಿಂದಲೂ ನಿನ್ನ ಪಾದಾರವಿಂದವನ್ನು ವಂದಿಸುವೆವು. ಕರೈ ಪಾಶ ದಿಂದ ಬಿಡುಗಡೆಹೊಂದಬೇಕೆಂದು ಬಯಸುವ ಯೋಗೀಶ್ವರರೂಕೂಡ ಯಾವುದನ್ನು ಕೇವಲಮನಸ್ಸಿನಿಂದಮಾತ್ರ ಹುಡುಕುತ್ತಿರುವರೋ, ಆ ನಿನ್ನ ಪಾದಾರವಿಂದವನ್ನು ಈಗ ನಾವು ಪ್ರತ್ಯಕ್ಷವಾಗಿ ಕಣ್ಣಿಂದ ನೋಡಿ ನಮಸ್ಕರಿಸುತ್ತಿರುವೆವಲ್ಲವೆ ? ಇಂತಹ ದುರ್ಲಭವಾದ ಭಾಗ್ಯಕ್ಕೆ ನಾವು