ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೫೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಅಧ್ಯಾ. ೬.] ಏಕಾದಶಸ್ಕಂಧವು. ೨೪೫೧ ಪಾತ್ರರಾದೆವು. ದೇವಾ ! ಸತ್ವರಜಸ್ತಮಸ್ಸುಗಳೆಂಬ ಗುಣತ್ರಯಾತ್ಮಕ ವಾದ ನಿನ್ನ ಮಾಯೆಯಿಂದ, ನೀನು ಇತರರಿಗೆ ಚಿಂತಿಸುವುದಕ್ಕೂ ಆಸಾ ಧ್ಯವಾದ ಈ ಸ್ಕೂಲಪ್ರಪಂಚದ ಸೃಷ್ಠಿಸ್ಥಿತಿಸಂಹಾರಗಳನ್ನು ನಿರ್ವಹಿಸ ತಕ್ಕವನು, ಆ ಮೂರುಗುಣಗಳಿಗೂ ನೀನು ನಿಯಾಮಕನೇಹೊರತು, ಅವುಗಳಿಗೆ ಅಧೀನನಲ್ಲ ! ಸೃಷ್ಟಿ ಮೊದಲಾದ ಆ ಕಾರಗಳೆಲ್ಲವೂ ನಿನ್ನ ಲೀಲೆಗಳೇಹೊರತು, ಆ ಕರೆಗಳಿಗೆ ನೀನು ಕಟ್ಟುಬಿದ್ದವನಲ್ಲ! ಮತ್ತು ನೀನು, ಅಸಾಧಾರಣವಾಗಿಯೂ,ಅಪರಿಚ್ಛಿನ್ನವಾಗಿಯೂ ಇರುವ ಆತ್ಮಾನಂ ದದಲ್ಲಿ ನೆಲೆಗೊಂಡಿರತಕ್ಕ ವಸೀಹೊರತು, ಪ್ರಾಕೃತಜೀವರಂತೆ ವಿಷಯ ಸುಖಕ್ಕೆ ವಶನಾಗತಕ್ಕವನಲ್ಲ. ಅಂತಹ ವಿಷಯಾಸಕ್ತರಿಗೆ ಕರಸಂಬಂ ಧವೂ, ತನ್ಮೂಲಕವಾದ ಸುಖದುಖಾನುಭವವೂ ಬಂದೊದಗುವುವು. ಹೇಯಗುಣಗಳೆಂಬಿವು ನಿನ್ನ ನ್ನಾಗಲಿ, ಕೊನೆಗೆ ನಿನ್ನ ಭಕ್ತರನ್ನಾಗಲಿ ಮು ಟೈಲಾರವು. ಸತ್ಪಾತ್ಮಕರಾದ ಸಜ್ಜನರಿಗೆ ಪ್ರಭುವೆನಿಸಿಕೊಂಡ ಓ ಕೈ ಪ್ಲಾ! ವಿಷಯಾಸಕ್ತಿಯಿಂದ ದೂಷಿತರಾದ ಜನರಿಗೆ, ನಿನ್ನ ಗುಣಕೀರ್ತನ ದಿಂದ ಶುದ್ಧಿಯುಂಟಾಗುವಂತೆ, ವೇದಾಧ್ಯಯನದಿಂದಾಗಲಿ, ಅದರ ಅರ್ಥ ಶ್ರವಣದಿಂದಾಗಲಿ, ಅದರಿಂದುಂಟಾಗುವ ಉತ್ತಮಜ್ಞಾನದಿಂದಾಗಲಿ, ತಪಸ್ಸು, ದಾನ, ವರ್ಣಾಶ್ರಮಧುಗಳು, ಮುಂತಾದುವುಗಳಿಂದಾಗಲಿ ಉಂಟಾಗಲಾರದು. ಹೀಗೆ ನಿನ್ನ ಪುಣ್ಯಕಥಾಶ್ರವಣದಿಂದಲೇ ಜನ್ಮ ವು ಪಾವನವಾಗುವಾಗ, ಸಾಕ್ಷಾತ್ತಾಗಿ ನಿನ್ನ ಪಾದಸೇವಾಪ್ರಭಾವ ವನ್ನು ಹೇಳತಕ್ಕುದೇನು ? ಸಂಸಾರನಿವೃತ್ತಿಯನ್ನ ಪೇಕ್ಷಿಸುವ ಮಹಾ ಮುನಿಗಳೂ ಕೂಡ, ತಮ್ಮ ಶ್ರೇಯಸ್ಸಿಗಾಗಿ, ಭಕ್ತಿಯುಕ್ತವಾದ ಮನಸ್ಸಿ ನಿಂದ ಯಾವುದನ್ನು ಮನನಮಾಡುತ್ತಿರುವರೋ, ಆ ನಿನ್ನ ಪಾದಾರವಿಂ ದವು ಅಶುಭಕಾರಣಗಳಾದ ನಮ್ಮ ಕರ ವಾಸನೆಗಳಿಗೆಲ್ಲಾ ಧೂಮಕೇ ತುವಿನಂತೆ ನಾಶಹೇತುವಾಗಿ ನಮಗೆ ಶ್ರೇಯಸ್ಸನ್ನು ಕೈಗೂಡಿಸಲಿ ! ಮತ್ತು ಆತ್ಮಪರಯಾತ್ಮತತ್ವವನ್ನು ತಿಳಿದ ಪಾಂಚರಾತ್ರ ಪ್ರವರ್ತಕರು, ಸ್ವರ್ಗಾದಿಲೋಕಗಳನ್ನೂ ಅತಿಕ್ರಮಿಸಿದ ನಿನ್ನ ನಿತ್ಯವಿಭೂತಿಸ್ಥಾನವನ್ನೂ, ಅದರಲ್ಲಿಯೂ ನಿನ್ನೊಡನೆ ಸಮಾನವಾದ ಐಶ್ವರವನ್ನೂ ಪಡೆಯುವುದ