ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪೫೨ ಶ್ರೀಮದ್ಭಾಗವತವು [ಅಧ್ಯಾ. ೬, ಕ್ಯಾಗಿ ವಾಸುದೇವಾದಿವ್ರಹಗಳನ್ನು ಉಪಾಸನೆಮಾಡುವಾಗ, ತ್ರಿಸಂ ಧ್ಯಾಕಾಲಗಳಲ್ಲಿಯೂ ಯಾವುದನ್ನು ಅರ್ಚಿಸುತ್ತಿರುವರೋ, ಆ ನಿನ್ನ ಪಾ. ದಾರವಿಂದವು ನಮಗೆ ಶ್ರೇಯಸ್ಸನ್ನು ಕೈಗೂಡಿಸಲಿ! ಮತ್ತು ವೈದಿಕಕ ರಗಳಲ್ಲಿ ನಿಷ್ಠರಾದವರು, ವೇದೋಕ್ತಗಳಾದ ಚರುಪುರೋಡಾಶಾದಿ ಹವಿಸ್ಸುಗಳನ್ನು ಕೈಯಲ್ಲಿ ಹಿಡಿದು ಹೋಮಮಾಡುವಾಗ, ಯಜ್ಞಾಗ್ನಿ ಗಳಲ್ಲಿಯೇ ಯಾವುದನ್ನು ಧ್ಯಾನಿಸುವರೋ, ಮತ್ತು ನಿನ್ನ ಮಾಯೆ ಯಾದ ಪ್ರಕೃತಿಗೆ ಪ್ರಾಧಾನ್ಯವನ್ನು ನಿರೂಪಿಸತಕ್ಕ ಸಾಂಖ್ಯಯೋಗಿಗಳೂ ಪ್ರಪತ್ತಿನಿಷ್ಠರಾದ ಭಾಗವತೋತ್ತಮರೂ, ಯಾವುದನ್ನು ತಮಗೆ ಮು ಖ್ಯಪ್ರಾಪ್ಯವೆಂದು ಭಾವಿಸುತ್ತಿರುವರೋ, ಆ ನಿನ್ನ ಪಾದಾರವಿಂದವು ನ ಮೃ ಆಶುಭಗಳೆಲ್ಲವನ್ನೂ ನೀಗಿಸಲಿ : ಪೂಜ್ಯಳಾದ ಶ್ರೀದೇವಿಯು ನಿನ್ನ ವಕ್ಷಸ್ಥಳದಲ್ಲಿಯೇ ನಿತ್ಯನಿವಾಸವನ್ನು ಮಾಡತಕ್ಕವಳಾಗಿದ್ದರೂ, ತನ್ನಂತೆ ಯೇ ನಿನ್ನ ಕಂಠಾಲಿಂಗನಸೌಖ್ಯವನ್ನನುಭವಿಸುತ್ತಿರುವ ವನಮಾಲಿಕೆಯು ಮಾತ್ರ ನಿನ್ನ ಪಾಧಾಗ್ರವಮೇಲೆ ತೂಗಾಡುವುದನ್ನು ನೋಡಿ ಸಹಿಸ ಲಾರದೆ, ಸವತಿತನದ ಮಾತ್ಸಲ್ಯದಿಂದ ಅದರೊಡನೆ ಸ್ಪರ್ಧಿಸುವಂತೆ, ತಾನೂ ಬಗೆಬಗೆಯ ಕಾಣಿಕೆಗಳನ್ನು ತಂದಿಟ್ಟು ಯಾವುದನ್ನು ಸೇವಿಸುತ್ತಿ ರುವಳೋ, ಆ ನಿನ್ನ ಪಾದಾರವಿಂದವು ನಮ್ಮ ಆಶುಭಗಳೆಲ್ಲವನ್ನೂ ನೀಗಿಸಲಿ! ದೇವಾ ! ತ್ರಿವಿಕ್ರಮಾವತಾರದಲ್ಲಿ ಬಲಿಚಕ್ರವರ್ತಿಯನ್ನು ಬಂಧಿಸುವಾಗ, ಯಾವಪಾದದಿಂದಲೇ ನೀನು ಮೂರುಲೋಕವನ್ನೂ ಅಳೆದೆಯೋ, ಮೇಲೆ ನೀಡಿದ ಯಾವಪಾದವು, ದೈತ್ಯರಿಗೆ ಭಯವನ್ನೂ, ದೇವತೆಗಳಿಗೆ ಅಭಯ ವನ್ನೂ ತೋರಿಸತಕ್ಕ ವಿಜಯಧ್ವಜದಂತೆಯೂ, ತ್ರೈಲೋಕ್ಯವನ್ನೂ ಪಾ ವನಮಾಡುವುದಕ್ಕಾಗಿ ಅದರಿಂದ ಹೊರಟ ಗಂಗಾಪ್ರವಾಹವು ಆಧ್ವಜದ ಪತಾಕೆಯಂತೆಯೂ ಶೋಭಿಸುತ್ತಿತ್ತೋ, ಆ ನಿನ್ನ ಪಾದಾರವಿಂದವು ಸಜ್ಜನ ರಿಗೆ ಸುಖವನ್ನೂ, ದುರ್ಜನರಿಗೆ ದುಃಖವನ್ನೂ ಉಂಟುಮಾಡತಕ್ಕ ಆ ನಿನ್ನ ಪಾದವು- ನಿನ್ನ ಭಕ್ತರಾದ ನಮ್ಮ ಪಾಪಗಳನ್ನು ನೀಗಿಸಿ ನಮ್ಮನ್ನು ಪವಿತ್ರ ಮಾಡಲಿ ! ದೇವಾ ! ತಮ್ಮ ತಮ್ಮ ಅಧಿಕಾರವೇ ಮೇಲೆಂದು ಅನ್ನೋನ್ಯ ಸ್ಪರ್ಧೆಯಿಂದ ಹೋರಾಡುತ್ತಿರುವ ಬ್ರಹ್ಮ ರುದ್ರರೇ ಮೊದಲಾದ ದೇಹಿಗೆ