ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೫೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೪೫೩ ಅಧ್ಯಾ. ೬.] ಏಕಾದಶಸ್ಕಂಧವು. ಳೆಲ್ಲರೂ, ಪ್ರಕೃತಿಪುರುಷರಿಗಿಂತಲೂ ಪರನಾಗಿಯೂ, ಕಾಲಸ್ವರೂಪನಾ ಗಿಯೂ ಇರುವ ನಿನಗೆ ಆಧೀನರಾಗಿ, ಮೂಗುದಾರವನ್ನು ಬೀರಿದ ಎತ್ತುಗ ಳಂತೆ ನಿನ್ನ ನಿಯಮಕ್ಕೊಳಪಟ್ಟಿರುವರು. ಇಂತಹ ಸತ್ವನಿಯಾಮಕನಾದ ನಿನ್ನ ಪಾದವು ನಮಗೆ ಶ್ರೇಯಸ್ಸನ್ನು ಕೈಗೂಡಿಸಲಿ ! ದೇವಾ ! ಚರಾಚರ ರೂಪವಾದ ಈ ಸ್ಕೂಲಪ್ರಪಂಚದ ಉತ್ಪತ್ತಿ ಸ್ಥಿತಿ ಲಯಗಳೆಲ್ಲಕ್ಕೂ ನೀನೇ ಕಾರಣಭೂತನು. ಆ ಪ್ರಪಂಚದೊಳಗೆ ಅಂತರಾಮಿಯಾಗಿದ್ದು ಅದನ್ನು ಭರಿಸತಕ್ಕವನೂ ನೀನೇ ! ಮತ್ತು ನೀನು ಅವ್ಯಕ್ತವೆನಿಸಿದ ಪ್ರಕೃತಿಗಿಂ ತಲೂ, ಆ ಪ್ರಕೃತಿಸಂಬಂಧವುಳ್ಳ ಬದ್ಧಜೀವನಿಗಿಂತಲೂ, ನಿತ್ಯಮುಕ್ತ ಜೀವರಿಗಿಂತಲೂ, ಆ ಪ್ರಕೃತಿಯ ಕಾರಭೂತಗಳೆನಿಸಿಕೊಂಡ ಮಹತ್ತು ಮೊದಲಾದ ಎಲ್ಲಾ ಪ್ರಪಂಚಕ್ಕಿಂತಲೂ ಉತ್ತಮನೆನಿಸಿರುವೆ. ಸಂವತ್ಸ ರಾತ್ಮಕವೆನಿಸಿ ಸಕಲಜಗತ್ತನ್ನೂ ಲಯಹೊಂದಿಸುವುದಕ್ಕಾಗಿ ಪ್ರವರ್ತಿ ಸುವ ಗಂಭೀರವೇಗವುಳ್ಳ ಕಾಲವೆಂಬುದೂ ನಿನ್ನ ಶರೀರವೇ ಆದುದರಿಂದ, ಆ ಕಾಲರೂಪದಿಂದ ಸಮಸ್ತ ಜಗತನ್ನ ಉಪಸಂಹಾರಮಾಡತಕ್ಕವನೂ ನೀನೇ ! ಮತ್ತು ಈ ಜಗತ್ತಿನ ಸೃಷ್ಟಿಕಾರಕ್ಕಾಗಿ ಅಧಿಕಾರವನ್ನು ಹೊಂ ದಿದ (ಅನಿರುದ್ಧನೆಂಬ) ಪುರುಷನೂಕೂಡ, ಸಮಸ್ತಕ್ಕೂ ಮೂಲಭೂತ ನಾಡ' ನಿನ್ನ ಅಂಶದಿಂದಲೇ ಆವಿರ್ಭವಿಸಿ, ಆ ಸೃಷ್ಟಿಕಾರಕ್ಕೆ ಬೇಕಾದ ವಿಚಿತ್ರಶಕ್ತಿಯುಳ್ಳವನಾಗಿ, ಪುರುಷನು ಸ್ತ್ರೀಯಲ್ಲಿ ಗರ್ಭೋತ್ಪತ್ತಿಯನ್ನು ಮಾಡುವಂತೆ, ಪ್ರಕೃತಿಯಲ್ಲಿ ಪರಿಣಾಮಸಾಮರ್ಥವೆಂಬ ತನ್ನ ವೀಲ್ಯ (ಶಕ್ತಿ) ವನ್ನಿಟ್ಟು, ಅದರಿಂದ ಮಹತ್ತೆಂಬ ತತ್ವವನ್ನು ಹುಟ್ಟಿಸಿದನು. ಆ ಮಹ ತತ್ವವು ತನಗೆ ಕಾರಣಭೂತವಾದ ಪ್ರಕೃತಿಯಂತೆಯೇ ಸತ್ವರಜಸ್ತ್ರ ಮಸ್ಸುಗಳೆಂಬ ಮೂರುಗುಣಗಳೊಡಗೂಡಿ, ಜಲವೇ ಮೊದಲಾದ ಏಳು ಆವರಣಗಳುಳ್ಳ ಸುವರ್ಣಮಯವಾದ ಒಂದು ಅಂಡಕೋಶವನ್ನು ತನ್ನಿಂದ ಸೃಜಿಸಿತು. ಆದುದರಿಂದ ಸ್ಥಾವರಜಂಗಮಾತ್ಮಕವಾದ ಸಮಸ್ತ ಜಗ ತಿಥ್ಯ ನೀನೇ ಮೂಲಸೃಷ್ಟಿಕರ್ತನು. ಅವೆಲ್ಲಕ್ಕೂ ಅಂತರಾಮಿಯಾಗಿ ನಿಯಮಿಸತಕ್ಕವನೂ ನೀನೇ ! ಬೇರೆಬೇರೆ ಅವತಾರಗಳಿಂದ ಅದನ್ನು ಪಾಲಿಸುತ್ತ, ಅದಕ್ಕೆ ಸ್ಥಿತಿಯನ್ನು ಕಲ್ಪಿಸತಕ್ಕವನೂ ನೀನೇ ! ಹೀಗೆ ನೀನು