ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೬೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೪೪ ಶ್ರೀಮದ್ಭಾಗವತವು [ಅಧ್ಯಾ, ೬, ಸಮಸ್ತ ಜೀವಗಳಲ್ಲಿಯೂ ಆಂತಯ್ಯಾಮಿಯಾಗಿದ್ದು, ಆಯಾಜೀವಗಳಿಗೆ ಅವರವರ ಕಮ್ಮಾನುಸಾರವಾಗಿಯೇ ನಿನ್ನ ಮಾಯೆಯಿಂದ ಇಂದ್ರಿಯ ವ್ಯಾಪಾರಗಳನ್ನು ಉದ್ಯೋಧಿಸಿ, ಅವರನ್ನು ಶಬ್ದಾದಿವಿಷಯಗಳಲ್ಲಿ ತೊಳ ಲುವಂತೆ ಮಾಡುವೆ ? ಆ ಜೀವನಮೂಲಕವಾಗಿ ನೀನೂ ಆ ಶಬ್ದಾದಿವಿಷ ಯಗಳನ್ನು ಅನುಭವಿಸುತ್ತಿರುವವನಾದರೂ, ನೀನು ಕರ ವಶ್ಯನಲ್ಲದುದ ರಿಂಬ, ಅದರಿಂದುಂಟಾಗುವ ಪುಣ್ಯಪಾಪಕಮ್ಮಗಳು ನಿನ್ನ ಇಂಟಲಾರವು. ಮತ್ತು ಇಂದ್ರಿಯಗಳಿಗೆ ನೀನೇ ಪತಿಯಾದುದರಿಂದ, ಸೀನು ಅವುಗಳಿಗೆ ಸಿಯಾಮಕನೇಹೊರತು, ಅವುಗಳಿಗೆ ವಶನಾಗಿ ಕರೆಗಳನ್ನು ನಡೆಸತಕ್ಕವ ವಲ್ಲ. ನೀನೊಬ್ಬನುಹೊರತು ಇತರಜೀವವರ್ಗಗಳಾಗಲಿ, ಕೊನೆಗೆ ಯೋಗಿಗ ಳಾಗಲಿ, ಪ್ರಯತ್ನ ಪೂರಕವಾಗಿ ವಿಷಯಾಸಕ್ತಿಯನ್ನು ಬಿಟ್ಟಿದ್ದರೂ, ಅದರ ವಾಸನಾಮಾತ್ರಕ್ಕೆ ಬದ್ಧರಾಗಿಯೇ ಇರುವುದರಿಂದ ಅದರ ಭಯವು ಯಾರಿ ತಪ್ಪಿದುದಲ್ಲ. ನೀನು ಇಂದ್ರಿಯಗಳಿಗೆ ಅಧಿಪತಿಯೆಂಬುದನ್ನು ಈ ಅವ ತಾರದಲ್ಲಿಯೇ ಕಂಡುಕೊಳ್ಳಬಹುದು. ಹೇಗೆಂದರೆ, ನಿನಗೆ ಈ ಅವತಾರದಲ್ಲಿ ಹದಿನಾರುಸಾವಿರಮಂದಿ ಪತ್ನಿ ಯರಿದ್ದರೂ, ಅವರಲ್ಲಿ ಒಬ್ಬೊಬ್ಬರೂ, ನಿನ್ನ ನ್ನು , ಮನ್ಮಥಬಾಣಗಳಂತಿರುವ ಮಂದಹಾಸವಿಶಿಷ್ಟವಾದ ತಮ್ಮ ಕಟಾಕ್ಷವೀಕ್ಷಣದಿಂದಲೂ, ತಮ್ಮ ಹಾವಭಾವವಿಲಾಸಗಳಿಂದಲೂ, ತಮ್ಮ ಹುಬ್ಬಿನಾಟಗಳಿಂದಲೂ, ಅನುರಾಗಸೂಚಕಗಳಾದ ಸಲ್ಲಾಪಗಳಿಂದಲೂ, ನಿನ್ನನ್ನು ಮೋಹಗೊಳಿಸುವುದಕ್ಕೆ ಪ್ರಯತ್ನಿಸಿದರೂ, ನಿನ್ನ ಇಂದ್ರಿಯಗ ಳನ್ನು ಕಲಗಿಸಲಾರದೆ ಹೋದರಲ್ಲವೆ ! ಕೃಷ್ಣಾ ! ಮುಖ್ಯವಾಗಿ ಅಮೃತಪ್ರಾಯವಾದ ನಿನ್ನ ಕಥೆಗಳೆಂಬ ತೀರಗಳು, ನಿನ್ನ ಪಾದತೀರ ವೆನಿಸಿಕೊಂಡ ಗಂಗಾನದಿಗಳು, ಇವೆರಡೇ ಮೂರುಲೋಕವನ್ನೂ ಪಾವನಮಾಡತಕ್ಕವುಗಳು. ಆದುದರಿಂದ ಆತ್ಮಶುದ್ಧಿಯನ್ನ ಪೇಕ್ಷಿಸತಕ್ಕವ ರೋಬ್ಬೊಬ್ಬರೂ, ನಿನ್ನ ಕೀರ್ತಿಯೆಂಬ ತೀರವನ್ನು ಕಿವಿಗಳಿಂದಲೂ, ನಿನ್ನ ಪಾದತೀರವಾದ ಗಂಗಾನದಿಯನ್ನು ಸ್ನಾನಾದಿಗಳಿಂದಲೂ ಸೇವಿಸಿ ಕೃತಾರರಾಗುವರು” ಎಂದು ಸ್ತುತಿಸಿದರು.