ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪೫೩ ಶ್ರೀಮದ್ಭಾಗವತವು [ಅಧ್ಯಾ. ೬, ವೀರಶೈತ್ಯಾದಿಗಳಿಂದಲೂ,ಭಾಗ್ಯದಿಂದಲೂ ಕೊಬ್ಬಿ, ಲೋಕವನ್ನೇ ಕಬಳಿ ಸುವ ಪ್ರಯತ್ನ ದಲ್ಲಿರುವುದು. ಸಮುದ್ರಪ್ರವಾಹವನ್ನು ಅದರ ದಡವು ಹೇಗೋ ಹಾಗೆ, ನಾನು ನನ್ನ ಸಂಕಲ್ಪದಿಂದ ಅದನ್ನು ತಡೆದಿಟ್ಟಿರುವೆನು. ಹೀಗೆ ಗಾಂಧರಾದ ಆ ಯಾದವರ ದೊಡ್ಡ ಕುಲವನ್ನು ನಾನು ಸಂಹ ರಿಸದೆ ಬಿಟ್ಟು, ಹಾಗೆಯೇ ನನ್ನ ನಿಜಸ್ಥಾನಕ್ಕೆ ಹೋದಪಕ್ಷದಲ್ಲಿ, ಅದು ಹ ದ್ದು ಮೀರಿ ಬಂದಾಗ, ಲೋಕವೆಲ್ಲವೂ ನಾಶಹೊಂದುವುದರಲ್ಲಿ ಸಂದೇಹ ವಿಲ್ಲ. ಆದರೆ ಆ ಕಾಠ್ಯವು ತೀರುವುದಕ್ಕೆ ಇನ್ನೂ ಬಹಳ ದಿನಗಳಾಗಬಹು ದೆಂದು ಶಂಕಿಸಬೇಡ ! ಈಗಾಗಲೇ ಬ್ರಾಹ್ಮಣಶಾಪಕ್ಕನುಸಾರವಾಗಿ ಯಾದವಕುಲನಾಶಕ್ಕೆ ಆರಂಭವಾಯಿತು. ಇದು ಮುಗಿದ ಕೂಡಲೇ ನಾನು ನನ್ನ ಸ್ನಾನಕ್ಕೆ ಹಿಂತಿರುಗಿಬರುವೆನು.” ಎಂದನು. ಓ ಪರೀಕ್ಷಿದ್ರಾಜಾ! ಈ ಮಾತನ್ನು ಕೇಳಿದೊಡನೆ ಬ್ರಹ್ಮನು, ಸಮಸ್ತದೇವತೆಗಳೊಡನೆ ಆ ಕೃಷ್ಣನಿಗೆ ನಮಸ್ಕರಿಸಿ ತನ್ನ ಲೋಕಕ್ಕೆ ಹಿಂತಿರುಗಿದನು. ಒಡನೆಯೇ ಇತ್ತಲಾಗಿ ದ್ವಾರಕೆಯಲ್ಲಿ ಅತಿಭಯಂಕರಗಳಾದ ಮಹೋತ್ಸಾತಗಳು ತ ಲೆದೋರಿದುವು. ಅವುಗಳನ್ನು ನೋಡಿ ಕೃಷ್ಣನು ತನ್ನ ಸುತ್ತುಮುತ್ತ ಲೂ ನೆರೆದಿದ್ದ ಯದುವೃದ್ಯರನ್ನು ಕುರಿತು. (ಎಲೈ ಯಾದವಶ್ರೇಷ್ಠರೆ ! ಇದೋ ! ಈಗ ನಾನಾಕಡೆಗಳಲ್ಲಿಯೂ ಮಹೋತ್ಸಾತಗಳು ತಲೆದೋ ರುತ್ತಿರುವುವು. ಇದಕ್ಕೆ ಮೊದಲೇ ನಮ್ಮ ಯಾದವಕುಲಕ್ಕೆ ಬ್ರಾಹ್ಮಣ ಶಾಪದಿಂದ ದುಸ್ತರವಾದ ಭಯವು ಹುಟ್ಟಿರುವುದನ್ನು ನೀವೂ ಬಲ್ಲಿರಷ್ಟೆ? ಬದುಕಬೇಕೆಂಬ ಆಸೆಯಿದ್ದರೆ, ಇನ್ನು ಮೇಲೆ ನಾವೂ ಇಲ್ಲಿ ನಿಲ್ಲಬಾ ರದು. ಈಗಲೇ ಪ್ರಭಾಸತೀರಕ್ಕೆ ಹೋಗುವೆವು. ಈ ವಿಷಯದಲ್ಲಿ ಈಗ ಕಾಲವಿಳಂಬವನ್ನು ಮಾಡಬಾರದು. ಹಿಂದೆ ಚಂದ್ರನು ದಕ್ಷ ಶಾಪದಿಂದ ಕ್ಷಯರೋಗವನ್ನು ಹೊಂದಿದಾಗ, ಆ ಪ್ರಭಾಸತೀರದಲ್ಲಿ ಸ್ನಾನಮಾಡಿದಮಾತ್ರಕ್ಕೆ, ಅವನಿಗೆ ಆ ದೋಷವು ನಿವೃತ್ತವಾಗಿ, ಮೊದಲಿ ನಂತೆ ತನ್ನ ಕಳೆಗಳನ್ನು ಹೊಂದಿದನು. ಹಾಗೆಯೇ ನಾವೂ ಅಲ್ಲಿ ಸ್ನಾನ ಮಾಡಿ, ಪಿತೃಗಳಿಗೂ, ದೇವತೆಗಳಿಗೂ ತಕ್ಷಣವನ್ನು ಬಿಟ್ಟು, ಬ್ರಾಹ್ಮಣ ರಿಗೂ ಸಂತರ್ಪಣವನ್ನು ಮಾಡಿ, ಸತ್ಪಾತ್ರಗಳಲ್ಲಿ ದಾನಧರಗಳನ್ನು ನಡೆಸಿ 3