ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪೫ ಅಧ್ಯಾ, 2 ) ಏಕಾದಶಸ್ಕಂಧವು. ಇನ್ನೂ ಸ್ಮರಿಸಿದಮಾತ್ರದಿಂದಲೇ ನಾವು ಅನಾಯಾಸವಾಗಿ ಆ ಸಂಸಾರ ಸಾಗರವನ್ನು ದಾಟಬಲ್ಲವರು.” ಎಂದನು. ಆಗ ಶ್ರೀಕೃಷ್ಣನು ತನಗೆ ಏಕಾಂತಭಕ್ತನಾದ ಉದ್ದವನನ್ನು ಕುರಿತು ಹೀಗೆಂದು ಹೇಳುವನು. ಇದು ಆರನೆಯ ಅಧ್ಯಾಯವು. ಕೃಷ್ಣನು ಉದ್ಯವನಿಗೆ ಪರಮಾರೋಪದೇಶವನ್ನು ಮಾ) **Iಡು, ಅವಧೂತ ಯದುಸಂವಾದವನ್ನು ತಿಳಿಸಿದುದು.) ಆಗ ಕೃಷ್ಣನು ಉದ್ಯವನನ್ನು ಕುರಿತು ಓ ಮಹಾತ್ಮಾ ! ಉದ್ಯವಾ ! ನೀವು ಹೇಳಿದಂತೆ ನಾನು ಈ ಲೋಕವನ್ನು ಬಿಟ್ಟು ಹೊರಡುವುದಾಗಿ ಮೊದಲೇ ಸಂಕಲ್ಪಿಸಿರುವುದೇನೋ ವಾಸ್ತವವೇ ! ಅದಕ್ಕನುಸಾರವಾಗಿ ಈಗ ಬ್ರಹ್ಮ ರುದ್ರರೂ, ಇತರಲೋಕಪಾಲಕರೂ ನನ್ನಲ್ಲಿಗೆ ಬಂದು ನನ್ನ ನ್ನು ತಮ್ಮ ಲೋಕಕ್ಕೆ ಬರಬೇಕೆಂದು ಪ್ರಾರ್ಥಿಸಿ ಹೋದರು. ಮೊದಲು ಆ ಬ್ರಹ್ಮಾದಿಗಳ ಪ್ರಾರನೆಯಿಂದಲೇ ನಾನು ದೇವತೆಗಳ ಕಾಲ್ಕಾರವಾಗಿ ಈ ಅವತಾರವನ್ನೆತಿದೆನು. ನನ್ನ ಅವತಾರಪ್ರಯೋಜನವನ್ನೂ ಬಹಳ ಮಟ್ಟಿಗೆ ಪೂರಯಿಸಿಬಿಟ್ಟನು. ಆದರೆ ಯಾದವಕುಲನಾಶವೊಂದುಮಾತ್ರ ಉಳಿದಿರುವುದು. ಈಗಾಗಲೇ ಆ ಯಾದವಕುಲವು ಬ್ರಾಹ್ಮಣಶಾಪದಿಂದ ದಗ್ನಪ್ರಾಯವಾಗಿರುವುದು. ಮುಂದೆ ಶೀಘ್ರಕಾಲದಲ್ಲಿಯೇ ಅನೋನ್ಯ ಕಲಹದಿಂದ ಆ ಕುಲವು ನಿರ್ಮೂಲವಾಗುವುದು. ಈ ಹೊತ್ತಿಗೆ ಏಳನೆಯ ದಿನದಲ್ಲಿ ಸಮುದ್ರವು ಉಕ್ಕಿ ಬಂದು ಈ ದ್ವಾರಕೆಯನ್ನು ಮುಳುಗಿಸಿಬಿಡು ವುದು. ಇದಲ್ಲದೆ ನಾನು ಯಾವಕ್ಷಣದಲ್ಲಿ ಈ ಲೋಕವನ್ನು ಬಿಟ್ಟು ಹೊರಡುವೆನೋ, ಆದುಮೊದಲೇ ಇದರ ಸೌಭಾಗ್ಯಗಳೆಲ್ಲವೂ ನಶಿಸುವುವು. ಕಲಿಯು ಇದನ್ನು ಆಕ್ರಮಿಸುವನು. ಆದುದರಿಂದ ನಾನು ಈ ಲೋಕವನ್ನು ಬಿಟ್ಟ ಮೇಲೆ, ನೀನು ಕ್ಷಣಮಾತ್ರವೂ ಇಲ್ಲಿ ನಿಲ್ಲುವುದು ಉಚಿತವಲ್ಲ ! ಕಲಿಯುಗದಲ್ಲಿ ಜನರೆಲ್ಲರಿಗೂ ಅಧರದಲ್ಲಿಯೇ ಅಭಿರುಚಿಯು ಹೆಚ್ಚುವುದು. ಆದುದರಿಂದ ನೀನು ಶಬ್ದಾದಿವಿಷಯಗಳಲ್ಲಿ ಆಸೆಯನ್ನೂ, ಸ್ವಜನರಲ್ಲಿಯೂ ಬಂಧುಗಳಲ್ಲಿಯೂ ಮೋಹವನ್ನೂ ತ್ಯಜಿಸಿ, ನನ್ನಲ್ಲಿಯೇ ನಟ್ಟ ಮನಸ್ಸುಳ್ಳವ