ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪೬೦ ೨೪೬೦ ಶ್ರೀಮದ್ಭಾಗವತವು [ಅಧ್ಯಾ. ೭. ನಾಗಿ, ಸಮಸ್ತವನ್ನೂ ಬ್ರಹ್ಮಾತ್ಮಕವೆಂದು ತಿಳಿದು ಸಮದೃಷ್ಟಿಯುಳ್ಳವ ನಾಗಿ, ಸಿಂತಲ್ಲಿ ನಿಲ್ಲದೆ ಭೂಸಂಚಾರವನ್ನು ಮಾಡುತ್ತಿರು. ಮನಸ್ಸು, ವಾಕ್ಕು, ಕಣ್ಣು, ಕಿವಿ ಮೊದಲಾದ ಇಂದ್ರಿಯಗಳೂ, ಇವುಗಳಿಂದ ಗ್ರಹಿಸ ಲ್ಪಡತಕ್ಕವುಗಳೂ,ಇವೆಲ್ಲವೂ ನಶ್ವರಗಳೆಂದೂ,ಪ್ರಕೃತಿಗುಣಗಳಿಗೆ ವಶವಾದ ಮನಸ್ಸಿನ ವಿಕಾರಗಳೇ ಈ ಅನುಭವಕ್ಕೆ ಕಾರಣಗಳೆಂದೂ ನೀವು ತಿಳಿಯ ಬೇಕ ನನ್ನನ್ನು ಸರಾಂತರಾತ್ಮನೆಂದು ತಿಳಿಯಲಾಗದ ಮನುಷ್ಯನ ಮನಸ್ಸಿಗೆ, ಲೋಕದ ವಸ್ತುಗಳೆಲ್ಲವೂ ತಮಗೆ ತಾವು ಸ್ವತಂತ್ರಗಳೆಂಬ ಭ್ರ ಮವು ಹುಟ್ಟುವುದು ಸಹಜವೇ : ನನ್ನಲ್ಲಿ ಮನಸ್ಸಿಟ್ಟವನಿಗಾದರೆ ಎಲ್ಲವೂ ಮದಾತ್ಮಕವಾಗಿ, ಏಕರೂಪದಿಂದಲೇ ಇರುವಹಾಗೆ ತೋರುವುದೇ ಹೊರ ತು, ಹಿಂದೆ ಹೇಳಿದ ನಾನಾಭಮವು ತೋರಲಾರದು. ಆ ಭ್ರಮವೇ ಸವಿದ :ಟಗಳಿಗೆ ಕಾರಣವು. ಆದರೆ ಆ ಭ್ರಮವು ತಾನಾಗಿ ತನ್ನ ಸ್ವರೂಪದಿಂದಲೇ ಮನುಷ್ಯನಿಗೆ ಸುಖದುಃಖಗಳನ್ನುಂಟುಮಾಡಲಾರದು. ಆ ಭ್ರಮವು ವಿಧಿನಿಷೇಧಾಜಭೇದಗಳನ್ನು ನಿರೂಪಿಸತಕ್ಕೆ ಶಾಸ್ತ್ರಗಳಿಗೆ ಮ ನುಷ್ಯನನ್ನು ಕಟ್ಟುಬಿಳುವಂತೆ ಮಾಡಿ, ಆ ಮೂಲಕವಾಗಿ ಸುಖದುಃಖಗ ಳನ್ನು ತೋರಿಸುವುದು ಹೇಗೆಂದರೆ, ಶಾಸ್ತ್ರದಲ್ಲಿ ಕವಿಭಾಗವನ್ನು ಹೇಳು ವಾಗ, ಮನುಷ್ಯನಿಗೆ ಅವಶ್ಯಕರ್ತವ್ಯಗಳಾದ ನಿತ್ಯನೈಮಿತ್ತಿಕಕರಗ ಆಂದೋ, ನಿಷಿದ್ಧಕಗಳೆಂದೂ, ಫಲಾಪೇಕ್ಷೆಯಿಂದ ನಡೆಸತಕ್ಕ ಕಾವ್ಯ ಕರಗಳಿಂದೂ ಮರುವಿಧವಾದ ವಿಭಾಗವು ತೋರಿಸಲ್ಪಟ್ಟಿರುವುದು. ಈ ಶಾಸ್ತ್ರವಿಧಿಗಳಲ್ಲಿ ನಂಬಿಕೆಯಿಟ್ಟವನಿಗೆ, ವಿಹಿತಕರಗಳನ್ನನುಸರಿಸುವುದ ರಿಂದ ಸುಖವೂ, ಅವುಗಳನ್ನ ತಿಕ್ರಮಿಸುವುದರಿಂದ "ದುಃಖವೂ ತೋರುವುವು. ಆದುದರಿಂದ ಆ ಭ್ರಮವೆಂಬುದು ಮೊದಲು ಶಾಸ್ತ್ರವಿಧಿಗಳಲ್ಲಿ ಕಟ್ಟುಹಾಕಿ, ಆ ಮೂಲಕವಾಗಿ ಸುಖದುಃಖಗಳಿಗೆ ಕಾರಣವಾಗುವುದು. ಹೀಗೆ ಪ್ರಪಂಚ ವನ್ನು ನಾನಾವಿಧವಾಗಿ ತೋರಿಸತಕ್ಕ ಭಮವೇ, ಸುಖದುಃಖಗಳನ್ನೊಳ ಕೊಂಡ ಸಂಸಾರಕ್ಕೆ ಕಾರಣವಾದುದರಿಂದ,ನೀನು ಇಂದ್ರಿಯಗಳನ್ನು ನಿಗ್ರ ಹಿಸಿ, ನನ್ನಲ್ಲಿಯೇ ಮನಸ್ಸನ್ನು ನೆಲೆಗೊಳಿಸಿ,ಅಚೇತನವಾದ ಈ ಜಗತ್ತೆಲ್ಲವೂ ಜೀವನಿಂದಲೂ, ಆ ಜೀವನು ನನ್ನಿಂದಲೂ ಧರಿಸಲ್ಪಟ್ಟಿರುವುದಾಗಿ ತಿಳಿಯ