ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪೩೨ ಶ್ರೀಮದ್ಭಾಗವತವು [ಅಧ್ಯಾ. ೬. ಪ್ತಿಗೆ ವಿಷ್ಣುವನ್ನು ತರುವುವೆಂಬ ಭಾವದಿಂದ, ಆತ್ಮ ಜ್ಞಾನವುಳ್ಳರು, ಆ ಎರಡುಬಗೆಯ ಕರಗಳನ್ನೂ ಬಿಟ್ಟುಬಿಡುವರು. ಮೇಲೆ ಹೇಳಿದಂತೆ ಆವ ನಿಗೆ ಗುಣದೋಷಗ್ರಹಣಸಾಮವಿದ್ದರೂ, ಏನೂ ತಿಳಿಯದ ಸಣ್ಣ ಮಗುವಿನಂತೆ ತನ್ನ ಮಾಹಾತ್ಮವನ್ನು ಹೊರಕ್ಕೆ ಕಾಣಿಸದಹಾಗೆಯೇ ಕವಿಮುಖನಾಗಿ ಸುಮ್ಮನಿರುವನು. ಮೇಲೆ ಹೇಳಿದಂತೆ ಸತ್ವಭೂತ ಸುಹೃತ್ತಾಗಿ, ವೈರಾಗ್ಯವನ್ನು ವಹಿಸಿ, ಶಾಂತನಾಗಿ, ಪೃಥಿವ್ಯಾರಿಸಮಸ್ತ ತತ್ವಗಳ ಸಾಧ-ವೈಧರ್ಮಗಳನ್ನು ದೃಢನಿಶ್ಚಯದಿಂದ ತಿಳಿದು, ಸಮಸ್ತ ವನ್ನೂ ನನ್ನ ಸ್ವರೂಪದಿಂದ ನೋಡತಕ್ಕವನು ತಿರುಗಿ ಸಂಸಾರದಲ್ಲಿ ಸಿಕ್ಕಿ ಕಷ್ಟಪಡಲಾರನು” ಎಂದನು. ಶ್ರೀಕೃಷ್ಣನು ಹೇಳಿದ ಈ ವಾಕ್ಯವನ್ನು ಕೇಳಿ ಉದ್ದವನು, ಅವ ನಿಂದ ಇನ್ನೂ ವಿಶೇಷವಾಗಿ ತತ್ವಜ್ಞಾನವನ್ನು ಪಡೆಯಬೇಕೆಂಬ ಕೋರಿಕೆ ಯಿಂದ, ತಿರುಗಿ ಬದ್ಧಾಂಜಲಿಯಾಗಿ ಹೀಗೆಂದು ಪ್ರಶ್ನೆ ಮಾಡುವನು. ಇದೇ ವಾ! ನೀನೇ ಅಧ್ಯಾತ್ಮ ಯೋಗಕ್ಕೆ ನಿರ್ವಾಹಕನು! ಅದನ್ನು ಪದೇತಿಸತಕ್ಕ ವನೂ, ಅದಕ್ಕೆ ಫಲಪನೂ ನೀನೇ ! ಆ ಯೋಗಶಾಸ್ತ್ರವನ್ನು ಕಲ್ಪಿಸಿ ದವನೂ ನೀನೇ ! ಪ್ರಭ : ಈಗ ನೀನು ನನಗೆ ಮೋಕ್ಷಪಾಯ ವನ್ನು ತಿಳಿಸುವುದಕ್ಕಾಗಿ, ಪ್ರತಿಫಲಾಪೇಕ್ಷೆಯಿಂದ ಮಾಡುವ ದಾನಾದಿ ಗಳಂತಲ್ಲದೆ, ಸನ್ಯಾಸರೂಪವಾದ ಸರಸಂಗಪರಿತ್ಯಾಗವನ್ನು ಉಪದೇಶಿ ಸಿದೆಯಲ್ಲವೆ ? ವಿಷಯಾಭಿಲಾಷೆಯಲ್ಲಿಯೇ ತೊಳಲುತ್ತಿರುವ ಮನಸ್ಸುಳ್ಳ ನಮ್ಮಂತವರಿಗೆ, ನೀನು ಹೇಳಿದಂತೆ ಸರಸಂಗಪರಿತ್ಯಾಗರೂಪವಾದ ಕಾ ರವು ಬಹಳಮುಷ್ಕರವೆಂದು ತೋರುವುದು. ಅದರಲ್ಲಿಯೂ ಸರಾತ್ಮಕ ನಾದ ನಿನ್ನಲ್ಲಿ ಭಕ್ತಿಯಿಲ್ಲದವರಿಗೆ, ಆ ಕಾರವು ಎಂದಿಗೂ ಸಾಧ್ಯವಲ್ಲ ವೆಂದೇ ನನ್ನ ಅಭಿಪ್ರಾಯವು. ಈಗ ನಾನಾದರೋ ನಿನ್ನ ಮಾಯೆಯಿಂದ ಕಲ್ಪಿತಗಳಾದ ದೇಹದಲ್ಲಿಯೂ, ದೇಹಾನುಬಂಧಿಗಳಲ್ಲಿಯೂ, ನಾನು ನನ್ನ ದೆಂಬ ಅಹಂಕಾರಮಮಕಾರಗಳಿಂದ, ವಿವೇಕಹೀನನಾಗಿ ಅಜ್ಞಾನ ದಲ್ಲಿ ಮುಳುಗಿರತಕ್ಕವನು. ಆದುದರಿಂದ ಈಗ ನೀನು ಹೇಳಿದ ಸತ್ಯಸಂಗ ಪರಿತ್ಯಾಗವನ್ನು ಸುಲಭವಾಗಿ ಸಾಧಿಸುವುದಕ್ಕೆ ಏನುಪಾಯವೆಂಬುದನ್ನೂ