ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೬೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಅಧ್ಯಾ, ೭.] ಏಕಾದಶಸ್ಕಂಧವು. ೨೪೬೩ ನೀನೇ ನನಗೆ ಉಪದೇಶಿಸಬೇಕು. ಇದನ್ನೇ ಬೇರೊಬ್ಬ ಗುರುವಿನಿಂದ ವಿಸ್ತಾರವಾಗಿ ಕೇಳಿ ತಿಳಿಯಬಾರದೆ?” ಎಂದು ನೀನು ಹೇಳಬಹುದು. ಓ ಸತ್ಯೇಶ್ವರಾ ! ನಾನು ಬೇರೆ ಯಾರನ್ನು ಹುಡುಕಲಿ ! ನಿನ್ನಂತೆ ಬೇರೊಬ್ಬ ಉಪದೇಶಕನು ಬ್ರಹ್ಮಾದಿದೇವತೆಗಳಲ್ಲಿಯೂ ಲಭಿಸುವಂತೆ ನನಗೆ ತೋರ ಲಿಲ್ಲ ಏಕೆಂದರೆ, ನೀನಾದರೋ ಯಾವಾಗಲೂ ಆತ್ಮಾನುಭವದಿಂದ ನಿನ್ನ ಸ್ವರೂಪವನ್ನು ಪ್ರತ್ಯಕ್ಷವಾಗಿ ತಿಳಿಯತಕ್ಕವನು. ನಿನ್ನ ಸ್ವರೂಪಸ್ವಭಾವ ಗಳಿಗಾಗಲಿ, ನಿನ್ನ ಜ್ಞಾನಕ್ಕಾಗಲಿ ಎಂದಿಗೂ ಸಂಕೋಚವಿರದು. ಸಮ ಸಜೀವಾತ್ಮಗಳಿಗೂ ನೀನು ಅಂತರಾತ್ಮನು. ಬ್ರಹ್ಮಾದಿದೇವತೆಗಳೆಲ್ಲರೂ ನಿನ್ನ ಮಾಯೆಗೆ ಮರುಳಾಗಿರತಕ್ಕವರು. ಆದುದರಿಂದ, ಅವರೂ ಕರಾ ಧೀನವಾದ ದೇಹವನ್ನು ಹೊಂದಿ, ಆತ್ಮವಲ್ಲದ ದೇಹಾದಿಗಳಲ್ಲಿ ಆಹಂಭಾವ ವನ್ನಿಟ್ಟು ಅಜ್ಞರಾಗಿರುವರು. ನಿನ್ನ ಪಾದವೇನೆಯಲ್ಲಿ ರಸಾನುಭವವನ್ನು ಮಾಡಿದ ಭಕೋತ್ತಮರೊಡನೆ ಸಹವಾಸವಿಲ್ಲದವರಿಗೆ, ಬೇರೆ ಎಷ್ಟೇ ಉಪಾಯಗಳಿಂದಲೂ ನಿನ್ನ ಮಾಯೆಯನ್ನು ತಪ್ಪಿಸಿಕೊಳ್ಳುವುದು ಸಾಧ ವಲ್ಲ! ಹಾಗಿದ್ದರೆ ಅಂತಹ ಸಹವಾಸಕ್ಕಾಗಿಯೇ ನೀನೂ ಪ್ರವರ್ತಿಸ ಬಾರದೆ?” ಎಂದರೆ, ಮೊದಲು ವಿಷಯಾಸಕ್ತಿಯನ್ನು ಬಿಟ್ಟವರಿಗಲ್ಲದೆ ಆ ಸತ್ಸಂಗವೂ ಲಭಿಸಲಾರದು. ಸಪಕನಾಗಿ ಗೃಹಸ್ಥಧರದಲ್ಲಿರುತ್ತಿದ್ದ ರೂ, ತಾಪತ್ರಯದಲ್ಲಿ ಸಿಕ್ಕಿ ನರಳುತ್ತಿದ್ದರೂ, ಮನುಷ್ಯನು ವಿಷಯಾಸ ಕ್ಕಿಯನ್ನು ತ್ಯಜಿಸುತ್ತ ಬಂದ ಪಕ್ಷದಲ್ಲಿ, ಅಂತವನಿಗೆ ಸಹವಾಸವೂ ಸು ಲಭವಾಗಿ ದೊರೆಯುವುದು. ವಿಷಯಾಸಕ್ತನಿಗೆ ಆ ಭಾಗ್ಯವು ಲಭಿಸಲಾರ ದು.ಆದುದರಿಂದ ಓ ದೇವಾ! ಬ್ರಹ್ಮಾದಿಗಳಂತೆ ಮೋಹಾದಿದೋಷಗಳಿಲ್ಲದೆ ಅಪರಿಚ್ಛಿನ್ನ ಸ್ವರೂಪಸ್ವಭಾವಗಳುಳ್ಳವನಾಗಿಯೂ, ಸತ್ವವಸ್ತುಗಳನ್ನೂ ಸಾಕ್ಷಾತ್ಕರಿಸತಕ್ಕವನಾಗಿಯೂ, ಸಧ್ವನಿಯಾಮಕನಾಗಿಯೂ, ಯಾವ ಕಾಲಕ್ಕೂ ಚ್ಯುತಿಯಿಲ್ಲದ ವೈಕುಂಠವೆಂಬ ನಿತ್ಯವಿಭೂತಿಸ್ಥಾನದಲ್ಲಿ ನೆಲೆಗೊಂ ಡವನಾಗಿಯೂ, ಜ್ಞಾನಿಗಳಿಗೆ ಸದ ತಿಯ ಡವನಾಗಿಯೂ, ಜ್ಞಾನಿಗಳಿಗೆ ಸದ್ಧತಿಯಾಗಿಯೂ ಇರುವ ನಿನ್ನಲ್ಲಿಯೇ ನಾನು ಮರೆಹೊಕ್ಕಿರುವೆನು. ಸಂಸಾರತಾಪದಲ್ಲಿ ಸಿಕ್ಕಿ ಬುದ್ದಿ ಮೋಹದಿಂದ ತಳಿಸುತ್ತಿರುವ ನನಗೆ ನೀನೇ ಅಚಾತ್ಯನಾಗಿ ಜ್ಞಾನೋಪದೇಶದಿಂದ ನನ್ನನ್ನು ಉದ್ಧರಿಸಬೇಕು” ಎಂದನು.