ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪೩೪ ಶ್ರೀಮದ್ಭಾಗವತವು [ಅಧ್ಯಾ. ೭. ಆದಕ್ಕಾ ಶ್ರೀಕೃಷ್ಣನು (ಉದ್ದವಾ! ಕೇಳು, ಪುರುಷನಿಗೆ, ಮುಖ್ಯ ವಾಗಿ)ಮನುಷ್ಯ ಜನ್ಮದಲ್ಲಿ, ಸುಶಿಕ್ಷಿತವಾದ ಅವನವನ ಮನಸ್ಸೇ ಗುರುವೆಂ ದು ತಿಳಿ ! ಲೋಕದಲ್ಲಿ ಆಯಾ ವಸ್ತುಗಳ ತತ್ವವನ್ನು ತಿಳಿಯಬಲ್ಲವರು, ತ ಮಗೆ ತಾವೇ ತಮ್ಮ ಬುದ್ಧಿಯನ್ನು ಸುಶಿಕ್ಷಿತವಾಗಿ ಮಾಡಿಕೊಂಡು, ಆ ಶಿಕ್ಷಾಬಲದಿಂದಲೇ ವಿಷಯವಾಸನೆಯನ್ನು ಸಂಪೂರ್ಣವಾಗಿ ಪರಿತ್ಯಜಿ ಸಿ ಉತ್ತೀರ್ಣರಾಗಬಹುದು. ಆಯಾ ಮನುಷ್ಯನಿಗೆ ತನ್ನ ಮನಸ್ಸೇ ಹಿತ ಪ್ರವರ್ತಕವಾಗುವುದು. ಏಕೆಂದರೆ ಮನುಷ್ಯ ಜನ್ಮವನ್ನು ಹೊಂದಿದಾಗಲೇ ಶಾಸ್ತ್ರಾಧಿಕಾರವಿರುವುದರಿಂದ, ಶ್ರುತಿಸ್ಮ ತಿಗಳಮೂಲವಾಗಿ ಅನೇಕವಿ ಷಯಗಳನ್ನು ಕೇಳಿಯೂ, ಪ್ರತ್ಯಕ್ಷದಿಂದ ಕಂಡೂ, ಆನುಮಾನದಿಂದ ಆ ಲೋಚಿಸಿಯೂ, ತನ್ನ ಶ್ರೇಯಸ್ಸಿಗೆ ಮಾರ್ಗವನ್ನು ತಿಳಿದುಕೊಳ್ಳಬಹು ದು, ಮನುಷ್ಯಜನ್ಮವನ್ನೆ ತಿದಾಗಲೇ ಜೀವನು, ಚಿದಚಿಟೀಶ್ವರರೆಂಬ ತತ್ವ ತ್ರಯಜ್ಞಾನವನ್ನು ಪಡೆದು, ಪರಮಾತ್ಯೋಪಾಸನವೆಂಬ ಯೋಗವನ್ನು ಸಾಧಿಸಿ, ಜಿತೇಂದ್ರಿಯನಾಗಿದ್ದು, ಸದ್ವತ್ಯಾದಿ ಸಮಸ್ತಶಕ್ತಿಗಳಿಂದ ಕೂಡಿದ ನನ್ನ ಸ್ವರೂಪವನ್ನು ಸ್ಪಷ್ಟವಾಗಿ ಕಾಣಬಹುದು. ಈ ಪ್ರ ಪಂಚದಲ್ಲಿ ಬಂದು ಕಾಲುಳ್ಳವು, ಎರಡು ಕಾಲುಳ್ಳವು, ಮೂರು ಕಾಲುಗಳು ಇವ್ರು, ನಾಲ್ಕು ಕಾಲುಳ್ಳವು, ಅದಕ್ಕಿಂತಲೂ ಹೆಚ್ಚಾಗಿ ಇನ್ನೂ ಅನೇಕ ಪಾದಗಳುಳ್ಳವು, ಕಾಲೇ ಇಲ್ಲದವುಗಳು, ಹೀಗೆ ನಾನಾಬಗೆಯ ಶರೀರಗಳು ಜೀವನಿಗೆ ನಿವಾಸಸ್ಥಾನವಾಗಿರುವುವು. ಈ ಪ್ರಾಣಿಭೇದಗಳಲ್ಲಿ ಮನುಷ್ಯ ಜನ್ಮವೇ ನನಗೆ ವಿಶೇಷಪ್ರೇಮಾತ್ರವೆನಿಸಿರುವುದು. (ಹಾಗಿದ್ದರೆ ಮನು #ಜನ್ಮದಲ್ಲಿ ಹುಟ್ಟಿದವರೆಲ್ಲರೂ ನಿನ್ನನ್ನು ಸಾಕ್ಷಾತ್ಕರಿಸಿ, ಮೋಕ್ಷವನ್ನು ಹೊಂದಬೇಕಲ್ಲವೆ ? (ಎಂದರೆ, ಹಾಗಲ್ಲ ! ಮನುಷ್ಯ ಜನ್ಮವನ್ನೆತ್ತಿದವರೆಲ್ಲ ರೂ ನನ್ನನ್ನು ಸಾಕ್ಷಾತ್ಕರಿಸಲಾರರು. ಏಕೆಂದರೆ, ಪ್ರತ್ಯಕ್ಷಾನುಮಾ ನಾದಿ ಪ್ರಮಾಣಗಳಿಂದ ನನ್ನನ್ನು ತಿಳಿಯುವುದು ಸಾಧ್ಯವಲ್ಲ. ಆದುದರಿಂ ದ ಅಸಾಧಾರಣಜ್ಞಾನಬಲವುಳ್ಳ ಕೆಲವು ಮಹಾತ್ಮರುಮಾತ್ರ ನನ್ನನ್ನು ತಮ್ಮ ಧ್ಯಾನಯೋಗದಿಂದ ಕಂಡುಕೊಳ್ಳಬಲ್ಲರು. ಉದ್ದವಾ! ಇದೇ ವಿಚಾರವಾಗಿ ಹಿಂದೆ ಅವಧೂತನಿಗೂ ಯದುವಿಗೂ ನಡೆದ ಸಂವಾದ