ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೭೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೪೬೫ 8 A. ಅಧ್ಯಾ. ೬.] | ಏಕಾದಶಸ್ಕಂಧವು. ರೂಪವಾದ ಒಂದು ಇತಿಹಾಸವನ್ನು ಹೇಳುವೆನು ಕೇಳು. ಹಿಂದೆ ಇನ್ನೂ ತರುಣವಯಸ್ಸಿನಲ್ಲಿದ್ದ ಒಬ್ಯಾನೋಬ್ಬ ಬ್ರಾಹ್ಮಣನು, ತನ್ನ ಯೌವನ ಕಾಲದಲ್ಲಿಯೂ ಐಹಿಕ ಸುಖದ ಆಸೆಯೆ ಇಲ್ಲದೆ, ಅಭ್ಯಂಗನವೇ ಮೊದ ಲಾದ ದೇಹಸಂಸ್ಕಾರವೂ ಇಲ್ಲದೆ, ಶೀತೋಷದಿಬಾಧೆಗಳಿಗೂ ಭಯಪಡ ದೆ ಅಲ್ಲಲ್ಲಿ ತಿರುಗುತ್ತಿದ್ದನು. ಆತನಾದರೋ ಮಹಾಜ್ಞಾನಿಯ. ಹೀಗೆ ಭಸಂಚಾರವನ್ನು ಮಾಡುತಿದ್ಮ ಪ್ರಾಣ ತರುಣನನ್ನು ನೋಡಿ, ಧ್ಯ ಜ್ಞನಾದ ಯದುವೆಂಬ ರಾಜನು, ಅವನನ್ನು ಕುರಿತು ಹೀಗೆಂದು ಪ್ರಶ್ನೆ ಮಾಡವನ' - (ಬ್ರಾಹ್ಮಣ ! ನೀನು ಒವ್ರ ದೇಹದ, ಮತ್ತು ಇಂದ್ರಿಯ ಗಳ ಸಾಗಿ ಯಾವ ಕಾರವನ್ನೂ ಮಾಡುವಹಾಗೆ ತೋರಲಿಲ್ಲ ' ಲೋಕಪಿಲಕ್ಷಣವಾದ ಈ ಸಿಪಣಬುದ್ದಿ ಯು ನಿನಗೆ ಹೇಗೆ ಹುಟ್ಟಿತು ? ನೀ ಒಳ್ಳೆ ವಿದ್ವಾಂಸನಾಗಿದ್ದರೆ, ಏನೂ ತಿಳಿಯದ ಅಜ್ಞನಂತೆ ತಿರುಗುತ್ತಿರುವೆಯಲ್ಲಾ' ಲೋಕದಲ್ಲಿ ಸಾಮಾನ್ಯವಾಗಿ ಏವೇಕಿಗಳಾದ ಮಹನೀಯಕೂಡ, ಧಾರ್ಥ ಕಾಮಗಳಲ್ಲಿಯ, ಅವುಗಳ ಸಾಧನೆಗೆ ಳನ್ನು ತಿಳಿಯುವುದರಲ್ಲಿ ಯ, ಆಯಸ್ಸು, ಕೀರ್ತಿ, ಸಂಪತ, ಮುಂತಾ ದ ಐಹಿಕಭೋಗಗಳನ್ನು ಪಡೆಯುವುದರಲ್ಲಿಯೂ ಆಸೆಯಿಂದ ಪ್ರವರ್ತಿ ಸುವರು ನೀನಾದರೋ ಕೈಲಾಗದ ಅಶಕ್ಯನಲ್ಲ! ಲೋಕವ್ಯವಹಾರವನ್ನೂ ಶಾಸವನ್ನೂ ತಿಳಿಯದ ಮಢವ ! ಯಾವ ಕಾರ ಆಗಲಿ ಸಾಮರ್ಥ್ಯ ವಿಲ್ಲದವನಲ್ಲ ! ಕುರೂಪಿಯಲ್ಲ ! ಹೀಗೆ ಸುಖಸಾಧನೆಗೆ ಬೇಕಾದ ಸಮಸ್ಯ ಸೌಕಯ್ಯಗಳೂ ಸಿನಗಿರುವುವು. ಹೀಗಿದ್ದರೂ ಸೀನು ಲೌಕಿಕಸುಖಕ್ಕೆ ಬೇ ಕಾದ ಯಾವ ಕಾರವನ್ನೂ ಮಾಡದೆ, ಜಡನಂತೆಯೂ ಹುಚ್ಚನಂತೆಯೂ, ಭೂತಾವಿಷ್ಟನಂತೆಯೂ ಸುಮ್ಮನೆ ತಿರುಗುತ್ತಿರುವುದೇಕೆ ? ಲೋಕ ದಲ್ಲಿ ಇತರಜನರೆಲ್ಲರೂ ಕಾಮಲೆಭಗಳೆಂಬ ಕಾಡುಗಿಚ್ಚಿನಲ್ಲಿ ಬೇಯು ಆದರೂ, ಸೀನು, ಗಂಗಾಜಲದಲ್ಲಿ ಓಲಾಡುತ್ತಿರುವ ಮದದಾನೆ ಯಂತೆ, ಆ ಕಾಮಲೋಭಾಯಿತಾಪಗಳೆಂದಕ್ಕೂ ಈಡಾಗದೆ ಸುಖವಾಗಿ ರುವೆಯಲ್ಲವೆ? ಹೀಗೆ ನೀನು ಶಬ್ದಾರಿಪಿಷಯಸಂಬಂಧವನ್ನು ಬಿಟ್ಟು, ಸಿಕ್ಕಿಂ ತವಾದ ಆತ್ಮಾನಂದವನ್ನನುಭವಿಸುವುದಕ್ಕೆ ಕಾರಣವೇನು? ಈ ಬುದ್ಧಿಯು 155