ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೭೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೪d ಶ್ರೀಮದ್ಭಾಗವತವು ಅಧ್ಯಾ. 2. ನಿನಗೆ ಹೇಗೆ, ಯಾರಿಂದ ಹುಟ್ಟಿತೆಂಬುದನ್ನು ನಾನು ತಿಳಿಯಬೇಕೆಂದಿರುವ ನು. ಕೃಪೆಯಿಟ್ಟು ತಿಳಿಸಬೇಕು.” ಎಂದನು. ಹೀಗೆ ಬಹಳಮೇಧಾವಿಯೂ, ಬ್ರಾಹ್ಮಣಪ್ರಿಯನೂ ಆದ ಯದುವು ವಿನಯದಿಂದ ಪ್ರಾರ್ಥಿಸಲು, ಮಹಾ ಭಾಗನಾದ ಆ ಬಾಹ್ಮಣನು ಹೀಗೆಂದು ಹೇಳುವನು, “ಓ ರಾಜೇಂದಾ ! ನನಗೆ ಈ ಬುದ್ದಿಯು ಹೇಗೆ ಹುಟ್ಟಿತೆಂದು ಕೇಳಿದೆಯಲ್ಲವೆ? ನನಗೆ ಈ ಲೋ ಕದಲ್ಲಿ ಬುದ್ಧಿಸಂಪನ್ನರಾದ ಅನೇಕ ಮಂದಿ ಗುರುಗಳುಂಟ.. ಅವರಿಂ ದಲೇ ನಾನು ಸುಶಿಕ್ಷಿತವಾದ ಈ ಬಳ್ಳಿಯನ್ನು ಪಡೆದು, ಶಾಪತ್ರಯಸಂ ಬಂಧವಿಲ್ಲದೆ, ನಿಶ್ಚಿಂತನಾಗಿ ತಿರುಗುತ್ತಿರುವೆನು. ಈ ವಿಷಯದಲ್ಲಿ ನನಗೆ ಗುರುಗಳಾರೆಂಬುದನ್ನೂ ತಿಳಿಸುವೆನು ಕೇಳು ! ಭೂಮಿ, ವಾಯು, ಆಕಾಶ, ಜಲ, ಅಗ್ನಿ , ಚಂದ್ರ..ಸೂರ, ಪಾರಿವಾಳ, ಹೆಬ್ಬಾವು,ಸಮುದ್ರ, ಪತಂಗ, ಜೇನುಹುಳು, ಆನೆ, ಬೇಡರು, ಜಿಂಕೆಮೀನು, ಪಿಂಗಳೆಯೆಂಬ ವೇಶ್ಯ, ಕುರರ ಪಕ್ಷಿ, ಸಣ್ಣ ಮಗು, ಒಬ್ಬ ಕನ್ಯ, ಲೋಕಕಾರನು, ಹಾವ, ಜೇಡರಹುಳು, ದುಂಬಿ, ಈ ಇಪ್ಪತ್ತುನಾಲೂ ನನಗೆ ಜ್ಞಾನೋಪದೇಶಕರಾದ ಗುರುಗಳು. ನಾನು ಇವರನ್ನಾಶ್ರಯಿಸಿ, ಇವರಿಂದಲೇ ಶಿಕ್ಷಿತನಾಗಿ, ಈ ಮಾರ್ಗವನ್ನು ಹಿಡಿದಿರುವನು. ಓ ಯಯಾತಿಕಮಾಲಾ ! ಮೇಲೆ ಹೇಳಿದ ಗುರುಗಳಲ್ಲಿ ಯಾರುಯಾರಿಂದ ನಾನು ಯಾವಯಾವ ಶಿಕ್ಷೆಯನ್ನು ಹೊಂ ಎದೆನೋ ಅದನ್ನೂ ಕ್ರಮವಾಗಿ ವಿವರಿಸುವೆನು ಕೇಳು ಇತರಭೂತಗಳು ನಮ್ಮನ್ನು ಕಾಲಿಂದ ಮೆಟ್ಟತುಳಿದು, ನಾನಾ ವಿಧದಿಂದ ಪೀಡಿಸುತ್ತಿದ್ದರೂ, ಮನಸ್ಸು ಕಲಗದೆ, ಆ ಭೂತವ್ಯಾಪಾರಗಳೆಲ್ಲವೂ ದೈವಪ್ರೇರಿತಗಳೆಂದೇ ತಿಳಿದು, ತಾಳ್ಮೆಯನ್ನು ವಹಿಸಿ ನಿಶ್ಚಲವಾಗಿರಬೇಕೆಂಬ ಕ್ಷಮಾಗುಣವನ್ನು ಭೂಮಿಯಿಂದ ಕಲಿತುಕೊಂಡೆನು. ಮತ್ತು ಅದೇ ಭೂಮಿಯಲ್ಲಿರುವ ಪ ರೈತಗಳೂ, ವೃಕ್ಷಗಳೂ, ಪರೋಪಕಾರಕ್ಕಾಗಿಯೇ ಹುಟ್ಟಿರುವುದನ್ನೂ, ಪರೋಪಕಾರಕ್ಕಾಗಿಯೇ ಅವು ಕೆಲಸನಡೆಸುತ್ತಿರುವುದನ್ನೂ ನೋಡಿ, ಆ ವುಗಳಲ್ಲಿ ಶಿಷ್ಯವೃತ್ತಿಯಿಂದ, ನಮ್ಮ ಜನ್ಮ ಕರಗಳೆಲ್ಲವೂ ಪರಾರವಾಗಿ ಯೇ ಇರಬೇಕೆಂಬುದನ್ನು ಕಲಿತುಕೊಂಡನು. ವಾಯುವಿನಲ್ಲಿ ನಮ್ಮ ದೇಹ ಹೊಳಗಿನ ಪ್ರಾಣವಾಯುವಿನಿಂದಲೂ, ಹೊರಗಿನ ವಾಯುಮಂಡಲದಿಂದ