ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾ. ೭.] ಏಕಾದಶಸ್ಕಂಧನ, ೨೪೬e ಲೂ ಒಂದೆರಡುವಿಷಯಗಳನ್ನು ಕಲಿತುಕೊಂಡನು. ಅವುಗಳಲ್ಲಿ ಪ್ರಾಣ ವಾಯುವಿನ ವ್ಯಾಪಾರದಿಂದ ತಿಳಿದುಕೊಂಡ ವಿಷಯವೇನೆಂದರೆ, ಪ್ರಾಣ ಧಾರಣೆಗೆ ಆಹಾರಮಾತ್ರವೇ ಬೇಕಲ್ಲದೆ ಇಂದ್ರಿಯತೃಪ್ತಿಯಿಂದ ಅದಕ್ಕೇನೂ ಕೆಲಸವಿಲ್ಲ. ಅದರಂತೆ ಯೋಗಿಯಾದವನೂಕೂಡ, ಆ ಪ್ರಾಣಧಾರಣೆಗೆ ಬೇಕಾದ ಆಹಾರವನ್ನು ಮಾತ್ರ ತೆಗೆದುಕೊಂಡರೆ ಸಾಕೇಹೊರತು ಶಬ್ದಾದಿವಿಷಯಗಳಿಗಾಗಿ ದುಡಿಯಬಾರದು. << ಆ ದರೆ ಆ ಪ್ರಾಣವನ್ನು ತಾನೇ ಏಕರಕ್ಷಿಸಿಡಬೇಕು” ಎಂದರೆ, ಮನುಷ್ಯ ನಿಗೆ ಪ್ರಾಣವ್ಯಾಪಾರವು ಜರುಗದಿದ್ದರೆ, ಮನಸ್ಸು ಕಳವಳಿಸಿ, ಜ್ಞಾನವೂ ನಶಿಸುವುದು. ಆದುದರಿಂದ ಮನಸ್ಕೂ, ಜ್ಞಾನವೂ ನಶಿಸದಹಾಗೆ ಪ್ರಾಣ ಧಾರಣೆಯನ್ನು ಮಾಡಿಕೊಳ್ಳಬೇಕು. ಅದಕ್ಕೆ ತಕ್ಕಷ್ಟು, ಆಹಾರದಲ್ಲಿ ಮಾತ್ರ ಜೀವಿಸಿದ್ದರೆ ಸಾಕೇಹೊರತು, ಇಂದ್ರಿಯತೃಪ್ತಿಯಿಂದ ಪ್ರಯೋಜನವಿಲ್ಲ ವೆಂಬುದನ್ನು ಮೇಲೆ ಹೇಳಿದ ಪ್ರಾಣವಾಯುವಿನ ವ್ಯಾಪಾರದಿಂದ ನಾನು ತಿಳಿದೆನು. ಹೊರಗಿನ ವಾಯುಮಂಡಲದಿಂದ ತಿಳಿದವಿಷಯವೇನೆಂದರೆ, ವಾಯುವು, ಚಂದನ, ಅಗ್ನಿ, ಮುಂತಾದ ಶೀತೊಷ್ಠಾದಿವಸ್ತುಗಳಮೇಲೆ ಬೀಸಿಬಂದರೂ, ಸುಗಂಧದುರ್ಗಂಧಗಳನ್ನು ಪ್ರವೇಶಿಸಿಬಂದರೂ, ಆ ಗುಣ ಗಳನ್ನು ತನ್ನಲ್ಲಿ ಸ್ಥಿರವಾಗಿ ಅಂಟಿಸಿಕೊಳ್ಳದಿರುವಂತೆ, ಯೋಗಿಯಾದವನೂ ಕೂಡ, ಪ್ರಿಯಾಪ್ರಿಯಗಳೆನಿಸಿಕೊಂಡ ವಿಷಯಗಳನ್ನು ತನ್ನ ಇಂದ್ರಿಯ ಗಳಿಂದ ಅನುಭವಿಸುತ್ತಿದ್ದರೂ, ಅದರಿಂದ ತೋರಿಬರುವ ಸುಖದುಃಖಗ ಳನ್ನು ಮನಸ್ಸಿಗೆ ತಂದುಕೊಳ್ಳದೆ, ದೇವಮನುಷ್ಯಾದಿಪಾರ್ಥಿವಶರೀರಗಳಲ್ಲಿ ತಾನು ಪ್ರವೇಶಿಸಿದ್ದರೂ, ಅದರಿಂದ ತೋರಿಬರುವ ದೇವತ್ವ, ಮನು ವ್ಯತ್ವ, ಸ್ಕೂಲತ್ಯ ಕೃಶತ್ವ ಮೊದಲಾದ ದೇಹಧರಗಳನ್ನು ಮನಸ್ಸಿಗೆ ತಂದುಕೊಳ್ಳದೆ, ತನ್ನನ್ನು ದೇಹವಿಲಕ್ಷಣವಾದ ಆತ್ಮವೆಂದೇ ತಿಳಿಯಬೇ ಕೆಂಬುದನ್ನು ವಾಯುವಿನಿಂದ ನಾನು ತಿಳಿದನು. ಆಕಾಶವು ಎಲ್ಲಾ ವಸ್ತುಗಳ ಒಳಗೂ, ಹೊರಗೂ ವ್ಯಾಪಿಸಿ, ಆ ವಸ್ತುಗಳ ಸಂಬಂಧವಿಲ್ಲದಿರುವಂತೆ, ಸತ್ವವಸ್ತುಗಳೂ ಬ್ರಹ್ಮಾತ್ಮಕವೆಂಬ ವೇದಾಂತನಿರ್ಣಯಕ್ಕನುಸಾರವಾಗಿ, ಪರಮಾತ್ಮನು ಸಮಸ್ತಚರಾಚರಗಳ ಒಳಗೂ ಹೊರಗೂ ನಿರಂತರವಾಗಿ