ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೭೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೪eo ೨೪eo ಶ್ರೀಮದ್ಭಾಗವತರು [ಅಧ್ಯಾ, ೬ ಒಂದಾನೊಂದು ಕಪೋತಶಕ್ತಿಯು, ಒಂದು ಕಾಡಿನಲ್ಲಿ ಗೂಡುಕಟ್ಟೆ ಕೊಂಡು, ತನ್ನ ಭಾರೈಯೊಡನೆ ಅನೇಕದಿನಗಳಿಂದ ವಾಸಮಾಡುತಿತ್ತು. ಅವುಗಳಿಗೆ ಅನ್ನೋನ್ಯವಾಗಿದ್ದ ದಾಂಪತ್ಯಪ್ರೇಮವು ಅಷ್ಟಿಷ್ಟಲ್ಲ. ಅವರ ಈ ಅನ್ನೋನ್ಯವಾಗಿ ದಂಪತಿಸುಖವನ್ನನುಭವಿಸುತ್ತ, ದೃಷ್ಟಿಯಿಂದ ದೃಷ್ಟಿಯನ್ನೂ , ದೇಹದಿಂದ ದೇಹವನ್ನೂ, ಬುದ್ಧಿಯಿಂದ ಬುದ್ಧಿಯನ್ನೂ ಕಟ್ಟಿಹಾಕಿದಂತೆ,ಒಂದಕ್ಕೊಂದು ಪ್ರೇಮಪಾಶದಲ್ಲಿ ಬಂಧಿಸಲ್ಪಟ್ಟಿದ್ದುವು. ಹೀಗಿರುವಾಗ, ಕಾಲಕ್ರಮದಿಂದ ಹೆಣ್ಣು ಪಾರಿವಾಳಕ್ಕೆ ಗರ್ಭವು ತಲೆದೋ ರಿತು. ಹೀಗೆ ಗರ್ಭಿಣಿಯಾದ ಆ ಕಪೋತಿಯು, ಯಾವಯಾವ ವಸ್ತುವನ್ನ ಪೇಕ್ಷಿಸಿದರೂ, ಗಂಡುಹಕ್ಕಿಯು, ಅದರಲ್ಲಿ ತನಗಿರುವ ಪ್ರೇಮಾತಿಶಯದಿಂ ದ್ರ,ಅದನ್ನು ಬಹಳ ಕಷ್ಟದಿಂದಾದರೂ ತಂದುಕೊಡುತ್ತಿದ್ದಿತು. ಆವೆರಡೂ, ಮಲಗುವಾಗಲೂ, ಕುಳ್ಳಿರುವಾಗಲೂ, ಸಂಚರಿಸುವಾಗಲೂ ನಿಂತಿರುವಾ ಗಲೂ, ಮಾತಾಡುವಾಗಲೂ, ಆಟವಾಡುವಾಗಲೂ, ಊಟಮಾಡುವಾಗ ಲೂ, ಒಂದನ್ನೊಂದು ಕ್ಷಣಮಾತ್ರವೂ ಅಗಲದೆ, ಒಂದಾಗಿ ಸೇರಿಯೇ ಆ ಸುತ್ತಿನ ವನಗಳಲ್ಲಿ ಯಥೇಚ್ಛವಾಗಿ ತಿರುಗುತ್ತಿದ್ದವು, ಕ್ರಮವಾಗಿ ಆ ಕಪೋ ತಿಗೆ ಪ್ರಸವಕಾಲವು ಸಮೀಪಿಸಿತು. ತನ್ನ ಪತಿಯೊಡನೆ ತಾನಿದ್ದಗೂಡಿ ನಲ್ಲಿಯೇ ಕೆಲವು ಮೊಟ್ಟೆಗಳನ್ನಿಟ್ಟಿತು. ಆ ಮೊಟ್ಟೆಗಳೂ ಕಾಲಕ್ರಮದಲ್ಲಿ ಪಕ್ಷವಾಗುತ್ತ ಬರಲು, ಅವುಗಳಿಗೆ ಒಂದೊಂದಾಗಿ ಅವಯವಗಳೂ ಸಣ್ಣ ಗರಿಗಳೂ ತಲೆದೋರತ್ತ ಬಂದುವು. ಭಗವಂತನ ಅಚಿಂತ್ಯಶಕ್ತಿಯಿಂದ ಅವು ಮೊಟ್ಟೆಯೊಡೆದು ಮರಿಗಳಾದುವು. ಆ ಕಪೋತ ದಂಪತಿಗಳೆರಡೂ ತಮ್ಮ ಮಂಗಳಲ್ಲಿ ಅತ್ಯಂತ ಮೋಹವನ್ನು ತೋರಿಸುತ್ತ, ಅವ್ಯಕ್ತಮಧುರ ವಾದ ಅವುಗಳ ಕೂಗನ್ನು ಕೇಳಿ, ಅನಂದಿಸುತ್ತ, ಅತಿಪ್ರೇಮದಿಂದ ಕು ಟುಕುಕೊಟ್ಟು, ಆ ಮರಿಗಳನ್ನು ಪೋಷಿಸುತ್ತ ಬಂದುವು. ಸುಖಸ್ಪರ್ಶವುಳ್ಳ ಆಮರಿಗಳ ಗರಿಗಳು ತಮ್ಮ ಮೈಗೆ ಸೋಕುವಂತೆ ಅವುಗಳಮೇಲೆ ಬಿದ್ದು ಓಲಾಡುತ್ತ ಅದರಿಂದ ಸ್ಪರ್ಶಸುಖವನ್ನೂ, ಆ ಮರಿಗಳ ಕಿಡಕಿನಧ್ವನಿ ಯನ್ನು ಕೇಳಿ ಕರ್ಣಾನಂದವನ್ನೂ, ಅವುಗಳ ಮನೋಹರವಾದ ಬಾಲಲೀ ಲೆಗಳನ್ನೂ ,ಹಾರಾಟಗಳನ್ನೂ ನೋಡಿ ನೇತ್ರಾನಂದವನ್ನೂ ಅನುಭವಿಸುತ್ತ