ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯ, ೭.] ಏಕದತಕ್ಕಂಧವು. ೨೪೬೧ ತಮ್ಮ ಸುಖಕ್ಕೆ ಎಣೆಯೇ ಇಲ್ಲವೆಂದು ಭಾವಿಸುತ್ತಿದ್ದುವು. ಹೀಗೆ ಆ ಕಪೋತ ದಂಪತಿಗಳೆರಡೂ, ಭಗವನ್ನಾಯೆಯಿಂದ ತನ್ನ ಮಕ್ಕಳೆಂಬ ಮೋಹಪಾಶ ದಲ್ಲಿ ಕಟ್ಟುಬಿದ್ದು, ಆ ಮರಿಗಳನ್ನು ಬಹಳ ಕಷ್ಟದಿಂದ ಪೋಷಿಸುತ್ತಿದ್ದುವು. ಹೀಗೆ ಕುಟುಂಬಭರಣವೆಂಬ ಕಷ್ಟಕ್ಕೆ ಸಿಕ್ಕಿಬಿದ್ದ ಆ ಹೆಣ್ಣು ಗಂಡುಹಕ್ಕಿಗ ಳೆರಡೂ, ಒಮ್ಮೆ ಮರಿಗಳಿಗೆ ಆಹಾರವನ್ನು ಸಂಪಾದಿಸಿ ತರುವುದಕ್ಕಾಗಿ ಗೂಡಿನಿಂದ ಹೊರಟು, ಸುತ್ತುಮುತ್ತಿನ ಅಡವಿಗಳಲ್ಲಿ ಬಹಳಹೊತ್ತಿನವರೆಗೆ ಅಲೆದಾಡುತ್ತಿದ್ದುವು. ಈ ಸಮಯದಲ್ಲಿ ಇತ್ತಲಾಗಿ ಬೇಟೆಗಾಗಿ ಬಂದ ಒಬ್ಬಾನೊಬ್ಬ ಬೇಡನು, ಆಹಕ್ಕಿಯ ಮರಿಗಳು ತಮ್ಮ ಗೂಡಿನ ಮುಂದೆ ಸಂ ತೋಷದಿಂದ ಹಾರಾಡುತ್ತಿರುವುದನ್ನು ಕಂಡು, ಬಲೆಯನ್ನು ಬೀಸಿ, ಆ ಮರಿಗ ಳನ್ನು ಹಿಡಿದುಬಿಟ್ಟನು. ಅತ್ತಲಾಗಿ ಆಹಾರವನ್ನು ತರುವುದಕ್ಕಾಗಿ ಹೋ ಗಿದ್ದ ಪಕ್ಷದಂಪತಿಗಳೆರಡೂ, ತಮ್ಮ ಮರಿಗಳಲ್ಲಿರುವ ಮೋಹದಿಂದ, ಅವು ಗಳ ಪೋಷಣೆಗಾಗಿ ಎಲ್ಲೆಲ್ಲಿಯೋ ಕಷ್ಟಪಟ್ಟು ಆಹಾರವನ್ನು ಸಂಗ್ರಹಿಸಿ ಕೂಂಡು, ಆತುರದಿಂದ ತಮ್ಮ ಗೂಡಿನ ಬಳಿಗೆ ಬಂದು ಸೇರಿದುವು. ಆಗ ಬಲೆಯಲ್ಲಿ ಸಿಕ್ಕಿಬಿದ್ದ ಮರಿಗಳು ತಂದೆತಾಯಿಗಳನ್ನು ಕಂಡೊಡನೆ, ಅರಚಿ ಕೊಳ್ಳುವುದಕ್ಕೆ ತೊಡಗಿದುವು. ಆ ಮರಿಗಳ ದುರವಸೆಯನ್ನೂ, ಅವುಗಳ ಆಕ್ರಂದನವನ್ನೂ ನೋಡಿ, ಈ ಪಕ್ಷಿ ದಂಪತಿಗಳೂ ದೈನ್ಯದಿಂದ ಕೂಗಿ ಡುತ್ತ,ಆ ಬಲೆಯ ಸಮೀಪಕ್ಕೆ ಬಂದುವು. ಆಗ ತಾಯಿಹಕ್ಕಿಯು, ತನ್ನ ಮರಿ ಗಳಲ್ಲಿ ತನಗೆ ಭಗವನ್ಮಾಯೆಯಿಂದ ಕಲ್ಪಿತವಾದ ಮೋಹಪಾಶದಲ್ಲಿ ಕಟ್ಟು ಬಿದ್ದು, ಬಲೆಯಲ್ಲಿ ಸಿಕ್ಕಿಬಿದ್ದ ಆ ಮರಿಗಳ ದುರವಸ್ಥೆಯನ್ನು ನೋಡಿ ಸಹಿಸ ಲಾರದೆ, ಆ ಬಲೆಯಸುತ್ತಲೂ ಸುಳಿದಾಡುತ್ತ, ಕೊನೆಗೆ ಸ್ಮತಿತಪ್ಪಿ, ತಾನೂ ಆ ಬಲೆಯಲ್ಲಿ ಸಿಕ್ಕಿಬಿದ್ದಿತು. ಆಗ ಕಪೋತವು, ತನ್ನ ದೇಹಕ್ಕಿಂತ ಲೂ ತನಗೆ ಅತ್ಯಂತಮೋಹಪಾತ್ರಗಳಾದ ಮರಿಗಳೂ, ತನ್ನ ಅರ್ಧಾoಗಿ ಯಾದ ಪತಿಯೂ ಬಲೆಗೆ ಸಿಕ್ಕಿಬಿದ್ದುದನ್ನು ಕಂಡು, ಮಹಾವ್ಯಸನದಿಂ ಹೀಗೆಂದು ವಿಲಪಿಸುವುದಕ್ಕೆ ತೊಡಗಿತು. ಅಯ್ಯೋ ! ನನ್ನ ದುಃಖವನ್ನು ಯಾರೂ ಕೇಳುವರಿಲ್ಲವೆ ? ಮಂದಭಾಗ್ಯನೂ, ಬರಿಹೀನನೂ ಆದ ನಾನು, ಇದುವರೆಗೆ ಎಷ್ಟು ವಿಷಯಸುಖಗಳನ್ನನುಭವಿಸಿದರೂ ತೃಪ್ತಿ 156 B