ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೮೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೪೭೪ ಶ್ರೀಮದ್ಭಾಗವತವು |ಆಧು, ಆ. ಹೀಗೆಯೇ ಯೋಗಿಯಾದವನೂ ಕೂಡ, ತನಗೆ ಭಾಗ್ಯ ಸಮೃದ್ಧಿಗಳು ವಿಶೇ ಷವಾಗಿ ಒದಗಿ ಬಂಧಾಗ ಸಂತೋಷದಿಂದುಬ್ಬದೆ,ಅವಿಲ್ಲದಿದ್ದಾಗ ದುಃಖದಿಂ ದ ಕುಗ್ಗದೆ, ಭಗವದ್ಯಾನದಲ್ಲಿಯೇ ನಟ್ಟಿಮನಸ್ಸುಳ್ಳನಾಗಿರಬೇಕು. ಪತಂಗಗಳು*ಆಗ್ನಿ ಜ್ವಾಲೆಯನ್ನು ನೋಡಿ,ತನಗೆ ಭೋಗ್ಯವಸ್ತುವೆಂಬ ಆಸೆಯಿಂದ ಅದರಲ್ಲಿ ಬಿದ್ದು ಸಾಯುವಂತೆ, ಪುರುಷನು ಭಗವನ್ಮಾಯಾರೂ ಪವಾಗಿ ತನ್ನ ಮನಸ್ಸನ್ನು ಮರುಳುಗೊಳಿಸತಕ್ಕ ಸೀರೂಪವನ್ನು ನೋಡಿ ಕಲಗಿದ ಇಂದ್ರಿಯಗಳುಳ್ಳವನಾಗಿ, ಅದಕ್ಕಾಸೆಪಟ್ಟಾಗ, ಅಂಧತಮನಸ್ಸಿ ನಲ್ಲಿ ಮುಳುಗುವನೆಂಬುದನ್ನು ಆ ಪತಂಗದೃಷ್ಟಾಂತದಿಂದ ಗ್ರಹಿಸಿದೆನು. ಭಗವನ್ಮಾಯಾಕಲ್ಪಿತಗಳಾದ ಶ್ರೀ ವ್ಯಕ್ತಿಗಳಲ್ಲಿಯೂ, ವಸ್ತ್ರಾಭರಣಾದಿ ಗಳಲ್ಲಿಯೂ ತನಗೆ ಭೋಗ್ಯವಸ್ತುಗಳೆಂಬ ಆಸೆಯನ್ನಿಟ್ಟು, ವಿವೇಕಹೀನ ನಾಗಿ ಪ್ರವರ್ತಿಸಿದವರು, ಅಗ್ನಿ ಜ್ವಾಲೆಗಾಗಿ ಆಸೆಪಟ್ಟ ಪತಂಗಗಳಂತೆ ಅವುಗಳಿಂದಲೇ ನಾಶವನ್ನೂ ಹೊಂದುವನು. ಜೇನುಹುಳುಗಳು ಪಕ್ಷಗಳನ್ನು ಕದಲಿಸದಂತೆಯೇ ಅಲ್ಲಲ್ಲಿರುವ ಮಕರಂದವನ್ನು ಸ್ವಲ್ಪ ಸ್ವಲ್ಪವಾಗಿ ಸಂಗ್ರಹಿಸುತ್ತ, ಒಂದೇ ಪುಷ್ಪವನ್ನು ನಂಬಿ ಸಿಲ್ಲದೆ ಸುತ್ತುತ್ತಿರುವಂತೆ, ಮುಸಿಯೂ ಕೂಡ, + ತನ್ನ ಪ್ರಾ Mಧಾರಣೆಗೆ ಬೇಕಾದಷ್ಟು ಆಹಾರವನ್ನು ಮಾತ್ರ ಬೇರೊಬ್ಬರಿಗೆ ಬಾಧೆ ಕೊಡದಂತೆ, ಅಲ್ಲಲ್ಲಿ ಸಿಕ್ಕಿದಷ್ಟನ್ನು ಸ್ವಲ್ಪ ಸ್ವಲ್ಪವಾಗಿ ಸಂಗ್ರ ಹಿಸುತ್ತ, ಅದರಿಂದಲೇ ಕಾಲಹರಣವನ್ನು ಮಾಡಬೇಕು. ಭ್ರಮರವು ಒಂದೇಪಷ್ಟದ ಸಾರವನ್ನೆಲ್ಲಾ ಹೀರಬೇಕೆಂದು ಅಲ್ಲಿಯೇ ನೆಲೆಯಾಗಿ ನಿಂ ತುಬಿಟ್ಟರೆ, ಆ ಪುಷ್ಪವು ಮುಕುಳಿತವಾದಾಗ, ತಾನೂ ಅದರಲ್ಲಿ ಸಿಕ್ಕಿಬಿಳು

  • ಪತಂಗ ಮಾತಂಗ, ತುರಂಗ ಭಂಗ ಮೀನಾ ಹತಾಃ ಸಂಚಂಭಿರೇವ ಪಂಚ ಎಂಬಂತೆ, ಪತಂಗಾದಿಗಳೆದೂ ಕ್ರಮವಾಗಿ, ರಸ, ಸ್ಪರ್ಶ, ಶಬ್ಬ, ಗಂಧ, ರಸಗಳಿಗೆ ಮರುಳಾಗಿ, ಅವುಗಳಿಂದಲೇ ನಾಶಹೊಂದುವುದರಿಂದ, ಯೋಗಿಯೂ ಇe ತಹ ಶಬ್ದಾದಿವಿಷಯಗಳಲ್ಲಿ ಚಾಪಲ್ಯದಿಂದ ಪ್ರವರ್ತಿಸಬಾರದೆಂಬ ನೀತಿಯು ಆ ಐದುಜಂತುಗಳ ದೃಷ್ಟಾಂತದಿಂದಲೂ ಇಲ್ಲಿ ಕ್ರಮವಾಗಿ ವ್ಯಕ್ತವಾಗುವುದು.

↑ ಇದನ್ನೇ ಮಾಧುಕರ ವೃತ್ತಿಯೆಂದು ಹೇಳುವರು.