ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೮೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


New ಅಧ್ಯಾ. .] ಏಕಾದಶಸ್ಕಂಧವು. ವಂತೆ, ಮುನಿಯೂಕೂಡ ಲೋಭಬುದ್ಧಿಯಿಂದ ಒಂದೇ ಸ್ಥಳವನ್ನು ಹಿಡಿದು ನಿಂತರೆ, ಅದರಲ್ಲಿ ಮೋಹಪಾಶಬದ್ಧನಾಗಿ ಕೆಡುವನು. ಮತ್ತು ಅದೇ ಜೇನುಹುಳುಗಳು ಸಣ್ಣದು ದೊಡ್ಡದೆಂದು ನೋಡದೆ, ಎಲ್ಲಾ ಪುಷ್ಪಗ ಳಿಂದಲೂ ಮಕರಂದವನ್ನು ಗ್ರಹಿಸುವಂತೆ, ಬುದ್ಧಿಶಾಲಿಯಾದ ಮನು ಹೈನು, ಅಲ್ಪಸಾರವುಳ್ಳ ಮತ್ತು ವಿಶೇಷನಾರವತ್ತಾದ ಎಲ್ಲಾ ಶಾಸ್ತ್ರಗಳಿಂ ದಲೂ ಸಾರವನ್ನು ಗ್ರಹಿಸಬೇಕು. ಮತ್ತು ಜೇನುನೊಣಗಳು ಕಾಲಾಂತರದಲ್ಲಿ ಭಜಿಸಬೇಕೆಂಬ ಆಸೆಯಿಂದ ಸಂಗ್ರಹಿಸಿಟ್ಟ ಜೇನನ್ನು ಇತರರು ಅಪಹುಸಿಕೊಂಡು ಹೋಗುವರಲ್ಲವೆ? ಆದುದರಿಂದ ಯೋಗಿಯಾ ದವನು, ಹಗಲೂವಾಗಲಿ, ರಾತ್ರಿಭೋಜನಕ್ಕಾಗಲಿ, ಸಾಕಾದಷ್ಟು ಅನ್ನವನ್ನು ಆಗಾಗ ಭಿಕ್ಷೆ ಮಾಡಿ ತಂದು ಭುಜಿಸಿ ತೃಪ್ತನಾಗಬೇಕೆಹೋ ರತು, ನಾಳಿಗೆಂದೂ, ಅಥವಾ ನಾಡಿಗೆಂದೂ ಸಂಗ್ರಹಿಸಿಡಬಾರದು. ಜೇನುಹುಳುವು ತನ್ನ ಮುಂದಿನ ಆಹಾರಕ್ಕಾಗಿ ಸಂಗ್ರಹಿಸಿಟ್ಟ ಜೇನಿ ನೊಡನೆ ತಾನೂ ನಾಶಹೊಂದುವಂತೆ, ಲೋಭಬುದ್ಧಿಯಿಂದ ಆಹಾರ ವನ್ನು ಸಂಗ್ರಹಿಸಿಡುವವನು, ಅದರೊಡನೆ ತಾನೂ ಕಡುವನು. ಆದುದ . ರಿಂದ ಮೇಲೆ ಹೇಳಿದಂತೆ ಆಗಾಗಿನ ಆಹಾರವನ್ನು ಭಿಕ್ಷೆ ಮಾಡಿ ತರತಕ್ಕೆ ವನಿಗೆ ಅವನ ಕೈಯೇ ಭೋಜನಪಾತ್ರದಂತೆಯೂ, ಹೊಟ್ಟೆಯ ಆಹಾರ ಪದಾರವನ್ನು ಸಂಗ್ರಹಿಸಿಡತಕ್ಕ ಕಣಜದಂತೆಯೂ ಇರಬೇಕು. ಇವೆಲ್ಲ ವನ್ನೂ ನಾನು ಜೇನುಹುಳುಗಳ ಚರೈಯಿಂದ ತಿಳಿದುಕೊಂಡನು. - ಯೋಗಿಯ ಮರದಿಂದ ಮಾಡಿದ ಸಿ ವ್ಯಕ್ತಿಯಾಗಿದ್ದರೂ, ಅದ ನ್ನು ತನ್ನ ಕಾಲಿಂದಾದರೂ ಮುಟ್ಟಬಾರದೆಂಬುದನ್ನು ಆನೆಗಳ ದೃಷ್ಟಾಂತ ದಿಂದ ಗ್ರಹಿಸಿದೆನು. ಹೇಗೆಂದರೆ, ಕಾಡಾನೆಗಳು ಹುಲ್ಲುಕಡ್ಡಿಗಳಿಂದ ಮುಚ್ಚ ಲ್ಪಟ್ಟ ಹಳ್ಳದಮೇಲೆ, ಮರದಿಂದ ಮಾಡಿ ನಿಲ್ಲಿಸಿರುವ ಹೆಣ್ಣಾನೆಯ ಆಕಾರ ವನ್ನು ನೋಡಿ,ಅದರಮೇಲೆ ಬಿಳುವುದಕ್ಕೆ ಹೋದಾಗ,ಹಳ್ಳದಲ್ಲಿ ಬಿದ್ದು ಸಿಕ್ಕಿ ಕೊಳ್ಳುವುವಲ್ಲವೆ? ಅದರಂತೆ ಮುನಿಯಾದವನು, ಹೆಣ್ಣು ಬೊಂಬೆಯನ್ನು ಸ್ಪರ್ಶಿಸಿದರೂ ಮೋಹಪಾಶಕ್ಕೆ ಸಿಕ್ಕಿ ಹಳ್ಳದಲ್ಲಿ ಬಿಳುವನು ಮತ್ತು ಒಂದು ಹೆಣ್ಣಾನೆಗೆ ಆಸೆಪಟ್ಟ ಕಾಡಾನೆಯು, ತನಗಿಂತಲೂ ಬಲಾಡ್ಯಗಳಾದ