ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೮೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೪೯ ಅಧ್ಯ. ೮.] ಏಕಾದತಕ್ಕಂಧವು. ನು, ಸೀಲಂಪಟನಾಗಿಯೂ, ಹಣದಾಸೆಯುಳ್ಳವನಾಗಿಯೂ ಇರುವ ಅಲ್ಪಮನುಷ್ಯನಿಂದ ಹಣವನ್ನೂ , ಸುಖವನ್ನೂ ಕೋರುತ್ತಿದ್ದ ನನ್ನ ಕುತ್ತಿತ ಜೀವನವನ್ನು ಸುಡಬೇಕಲ್ಲವೇ? ದೇಹವೆಂಬುದು, ಅಸ್ತಿಗಳೆಂಬ ಕಂಬಗಳನ್ನು ನಿಲ್ಲಿಸಿ, ರಕ್ತಮಾಂಸಗಳಿಂದ ಮೆತ್ತಿ ಮಾಡಿದ ಒಂದು ಮನೆ ! ಉಗುರು, ಕೂದಲು, ಇವೆಲ್ಲವೂ ಅದರ ಕಟ್ಟುಗಳು.ಇದಕ್ಕೆ ನವದ್ವಾರಗಳು! ಈ ಮನೆ ಯು ಮಲಮೂತ್ರಗಳಿಂದ ತುಂಬಿ, ಆ ನವದ್ವಾರಗಳಿಂದಲೂ ಕಲ ಗಳನ್ನು ಕಾರುತ್ತಿರುವುದು. ಇಂತಹ ಕಶ್ಯಪೂರ್ಣವಾದ ದೇಹವನ್ನು ನನ್ನ ಂತೆ ಬೇರೆ ಯಾರು ತಾನೇ ಅಭಿಮಾನಿಸುವರು ? ಈ ವಿದೇಹನಗರವ ನೈಲ್ಲಾ ಹುಡುಕಿದರೂ ನನ್ನಂತಹ ವಿವೇಕಹೀನಳು ಬೇರೊಬ್ಬಳು ಸಿಕ್ಕಲಾ ರಳು. ಆಿತರಿಗೆ ತನ್ನ ಸ್ನೇ ಕೂಡುವಷ್ಟು ಪರಮದಯಾಳುವಾದ ಆ ಭಗ ವಂತನನ್ನು ಬಿಟ್ಟು, ಮತ್ತೊಬ್ಬನನ್ನು ಕಾಂತನನ್ನಾಗಿ ಬಯಸಿದ ನಾನು ಎಷ್ಟು ಬುದ್ಧಿಹೀನಳು ! ಸಮಸ್ಯಪ್ರಾಣಿಗಳಿಗೂ ಆತನೇ ಆತ್ಮಭೂತನಾಗಿ ರುವಾಗ, ಅವನಿಗಿಂತಲೂ ಬೇರೆ ಪ್ರಿಯವಾವುದುಂಟ ? ಆದುದರಿಂದ ಈಗಲಾದರೂ ನಾನು, ನನ್ನ ಆತ್ಮವನ್ನು ಆತನಿಗಾಗಿಯೇ ಸಮರ್ಪಿಸಿ, ಅದರಿಂದ ಆತನನ್ನು ವಶೀಕರಿಸಿಕೊಂಡು, ಶ್ರೀದೇವಿಯಹಾಗೆ ನಾನೂ ಅವನೊಡನೆ ಸದಾ ರಮಿಸುತ್ತಿರುವೆನು. ಕಾಮಿತವಿಷಯಗಳಿಗೂ, ಆ ಕಾ ಮಿತಗಳನ್ನು ಕೊಡತಕ್ಕ ದೇವತೆಗಳಿಗೂ, ಮನುಷ್ಯರಿಗೂ ಆದ್ಯಂತಗಳುಂ ಟು ಇವೆಲ್ಲಕ್ಕೂ ಕಾಲದಿಂದ ನಾಶವುಂಟು ! ಇವರು ತಮ್ಮ ಭಾರೈಯರಿ ಗಾಗಲಿ, ಇತರರಿಗಾಗಲಿ ಯಾವವಿಧವಾದ ಪ್ರಿಯವನ್ನುಂಟುಮಾಡಬಲ್ಲರು? ಆ ಭಗವಂತನೊಬ್ಬನೇ ಆದ್ಯಂತಶೂನ್ಯನಾಗಿ,ಇತರರಿಗೂ ಕೋರಿದ ಕೋರಿ ಕೆಗಳನ್ನು ಕೈಗೂಡಿಸಬಲ್ಲವನು. ಆದುದರಿಂದ ಅವನುಹೊರತು ಬೇರೊಬ್ಬ ರೂ ಸೇವ್ಯರಲ್ಲ' ಅವನನ್ನೇ ಸೇವಿಸಿ ಅವನ ಅನುಗ್ರಹವನ್ನು ಪಡೆಯುವೆನು. ಅಥವಾ ಅವನ ಅನುಗ್ರಹವಿಲ್ಲದಿದ್ದರೆ ನನಗೆ ಈಬುದ್ದಿಯುತಾನೇ ಹೇಗೆ ಹು ಮೈುತಿತ್ತು? ಇದುವರೆಗೆ ದುರಾಶೆಹಿಡಿದಿದ್ದ ನನಗೆ, ಪೂಜನ್ಮದಲ್ಲಿ ಮಾಡಿದ ಯಾವುದೋ ಅಲ್ಪ ಸ್ವಲ್ಪ ಸುಕೃತವಿಶೇಷದಿಂದಲೇ, ಮುಂದೆ ಸುಖಕರ ವಾದ ಈ ನಿರೋದವು ಹುಟ್ಟಿರಬೇಕು. ನಾನು ಇದುವರೆಗಿದ್ದಂತೆಯೇ