ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೮೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೪೮o ಶ್ರೀಮದ್ಭಾಗವತವು [ಅಧ್ಯಾ. ೯. ಮಂದಬಾಗಿನಿಯಾಗಿದ್ದ ಪಕ್ಷದಲ್ಲಿ, ನನಗೆ ನನ್ನ ಹಿಂದಿನ ಸ್ಥಿತಿಯನ್ನು ಕುರಿತು ಪಶ್ಚಾತ್ತಾಪವೂ ಹುಟ್ಟುತ್ತಿರಲಿಲ್ಲ. ಇಂತಹ ನಿರೋದದಿಂದಲ್ಲವೇ ಮನುಷ್ಯ ನು, ತನ್ನ ದೇಹದಲ್ಲಿಯೂ, ದೇಹಾನುಬಂಧಿಗಳಲ್ಲಿಯೂ ಅಹಂಕಾರಮಮ ಕಾರಗಳನ್ನು ನೀಗಿ ಪ್ರಸನ್ನ ಮನಸ್ಕನಾಗುವನು. ಗ್ರಾಮ್ಯ ಜನಗಳೊಡನೆ ಓಲಾಡುತಿದ್ದ ನಾನು, ಆ ಭಗವದನುಗ್ರಹದಿಂದ ಲಭಿಸಿದ ಈ ನಿಲ್ವೇದವ ನ್ನೇ ತಿರಸಾವಹಿಸಿ, ದುರಾಶೆಯನ್ನು ಬಿಟ್ಟು, ಆತನನ್ನೇ ಆಶ್ರಯಿಸುವೆ ನು. ಇನ್ನು ಮೇಲೆ ನಾನು ದೈವಿಕವಾಗಿ ಲಭಿಸಿದುದರಲ್ಲಿ ತೃಪ್ತಳಾಗಿ, ಆದ ರಿಂದಲೇ ಜೀವಧಾರಣೆಯನ್ನು ಮಾಡುತ್ತ, ಆ ಭಗವಂತನೊಡನೆಮಾತ್ರ ವೇ ರಮಿಸುವೆನು. ಸಂಸಾರಕೂಪದಲ್ಲಿ ಬಿದ್ದು ವಿಷಯಲೋಭದಿಂದ ಬುದ್ಧಿ ಗೆಟ್ಟ ನಾನು, ಕಾಲಸರ್ಪದಿಂದ ಹಿಡಿಯಲ್ಪಡುವಾಗ, ನನ್ನನ್ನು ರಕ್ಷಿಸುವು ದಕ್ಕೆ ಆ ಪರಮಪುರುಷನೊಬ್ಬನುಹೊರತು ಬೇರೆ ಯಾವನು ಸಮರ್ಥ ನುಂಟು ? ಸಮಸ್ತ ವಿಷಯಗಳಲ್ಲಿಯೂ ಸಿರೋದವನ್ನು ಹೊಂದಿ, ಸಮಸ್ತ ಜಗ ತೂ ಕಾಲವೆಂಬ ಸರ್ಪದಿಂದ ಕಬಳಿಸಲ್ಪಡುವುದೆಂಬುದನ್ನು ತಿಳಿದು, ಎಚ ರಿಕೆಯಿಂದಿರುವ ಜೀವಾತ್ಮನಿಗೆ, ಆ ಪರಮಾತ್ಮನೇ ರಕ್ಷಕನಾಗುವನು.” ಎಂಬವೇಮೊದಲಾಗಿ, ಮನಸ್ಸಿನಲ್ಲಿ ನಿಶ್ಚಯಿಸಿಕೊಂಡು, ಆ ಪಿಂಗಳೆಯೆಂಬ ವೇಶ್ಯಯ, ದುರಾಶೆಯನ್ನು ಬಿಟ್ಟು, ನಿಂತಳಾಗಿ ಹೋಗಿ, ಹಾಸಿಗೆಯಲ್ಲಿ ನೆಮ್ಮದಿಯಿಂದ ಮಲಗಿಬಿಟ್ಟಳು. ಆದುದರಿಂದ ಓ ಯಾದವೇಂಭಾ! ಆಶ ಯೆಂಬುದೇ ಮಹಾದುಃಖವು, ನಿರಾಶೆಯೇ ಪರಮಸುಖವು ಎಂಬೀವಿಚಾರ ವನ್ನು ನಾನು ಆ ವೇಶೈಯ ನಡತೆಯಿಂದ ಗ್ರಹಿಸಿದೆನು. ಇದು ಎಂಟನೆಯ ಅಧ್ಯಾಯವು. w+ ಅವಧೂತಯದುಸಂವಾದವು, ಅನುಬಂಧನ, w ಓ ಯಾದವೇಂದ್ರಾ: ಯಾವುದಾದರೂ ವಸ್ತುವನ್ನು ತನ್ನದೆಂಬ ಆಸೆಯಿಂದ ಸಂಗ್ರಹಿಸಿಡುವುದು ದುಃಖಕಾರಣವು. ಈ ಸ೦ ಶವನ್ನು ತಿಳಿದು ಆ ಪರಿಗ್ರಹವನ್ನು ಬಿಟ್ಟು ಬಿಡುವವನು ಸುಖವನ್ನು ಹೊಂದುವನು. ಈ ವಿಚಾರವನ್ನು ನಾನು ಒಂದಾನೊಂದು ಕುರರಪಕ್ಷಿಯ