ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೮೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೪೮೧ ಅಧ್ಯಾ. ? ಏಕಾದಶxಂಧವ. ದೃಷ್ಟಾಂತದಿಂದ ಗ್ರಹಿಸಿದೆನು. ಹೇಗೆಂದರೆ, ಒಂದಾನೊಂದು ಕುರರ ಪಕ್ಷಿಯು, ಕೊಕ್ಕಿನಲ್ಲಿ ಒಂದುಮಾಂಸದ ತುಂಡನ್ನು ಕಟ್ಟಿಕೊಂಡು,ಇತರ ಪಕ್ಷಿಗಳಿಂದ ಅದನ್ನು ಹೇಗೆ ಕಾಪಾಡಿಡುವುದೆಂಬ ಚಿಂತೆಯಿಂದ ಯಾವಾಗಲೂ ಭಯಪಡುತಿತ್ತು. ಇಷ್ಟರಲ್ಲಿ ಅದಕ್ಕಿಂತಲೂ ಹೆಚ್ಚು ಬಲ ವುಳ್ಳ ಒಂದಾನೊಂದು ಗಿಡುಗವು ಬಲಾತ್ಕಾರದಿಂದ ಅದರಮೇಲೆ ಬಿದ್ದು ಆ ಮಾಂಸದ ತುಂಡನ್ನು ಅಪಹರಿಸಿಕೊಂಡುಹೋದಮೇಲೆ, ಆ ಕುರರವು ನಿರ್ಭಯವಾಗಿ ಸುಖದಿಂದಿರುವಂತಾಯಿತು. ಆದುದರಿಂದ ಯಾವುದಾ ದರೂ ವಸ್ತುವಿನಲ್ಲಿ ನಮ್ಮ ದೆಂಬ ಅಭಿಮಾನವಿರುವವರೆಗೆ, ನಮಗೆ ಭಯವು ತಪ್ಪದು. ಅದನ್ನು ಬಿಟ್ಟ ಮೇಲೆ ಯಾರಿಗೂ ಭಯಪಡಬೇಕಾದುದಿಲ್ಲ. ರಾಜೇಂದ್ರಾ! ಸಣ್ಣ ಮಗುವಿನಂತೆ ನಾನು ಮಾ ನಾವಮಾನಗಳನ್ನು ಗಮನಿಸತಕ್ಕವನು. ಮನೆಮಂkಮಕ್ಕಳನ್ನು ಕಟ್ಟಿಕೊಂಡಿರುವ ಚಿಂತೆಯೂ ನನಗಿಲ್ಲ. ಆ ಪರಮಾತ್ಮನೊಬ್ಬನಲ್ಲಿಯೇ ನನಗೆ ಪ್ರೀತಿ ! ಯಾವಾಗಲೂ ಆ ಪರಮಾತ್ಮನೊಡನೆಯೇ ಕ್ರೀಡಿಸುತ್ತ, ನಾನು ನಿಶ್ಚಿಂತನಾಗಿ ಬಾಲ ನಂತೆ ಲೋಕವನ್ನು ಸಂಚರಿಸುತ್ತಿರುವೆನು. ಹೀಗೆ ಲೋಕದಲ್ಲಿ ಮಾ ನಾವಮಾನಗಳ ಏಚಾರವಿಲ್ಲದೆ ನಿಶ್ಚಿಂತರಾಗಿ, ಸದಾ ಪರಮಾನಂದದಲ್ಲಿ ಮುಳುಗಿ ಓಲಾಡತಕ್ಕವರು ಇಬ್ಬರೇ: ಯಾರೆಂದರೆ, ಏನೂ ತಿಳಿಯದ ಸಣ್ಣ ಮಗುವೊಂದು ! ಆತ್ಮಧ್ಯಾನದಿಂದ ಸಾಕ್ಷಾತ್ಪರಮಾತ್ಮನನ್ನು ಸಾಕ್ಷಾತ್ಕರಿಸ ತಕ್ಕ ಯೋಗಿಯೊಬ್ಬನು. ಸಣ್ಣ ಮಗುವು ಮಾ ನಾವಮಾನವನ್ನು ತಿಳಿಯ ಲಾರದು. ಅದಕ್ಕೆ ಸಂಸಾರಚಿಂತೆಯಿಲ್ಲ : ತನ್ನ ದೇಹಪೋಷಣೆಯಲ್ಲಿಯೂ ಅದಕ್ಕೆ ದೃಷ್ಟಿಯಿಲ್ಲ. ಹಾಗೆಯೇ ಆತ್ಮಧ್ಯಾನಪರನಾದ ಯೋಗಿಯೂ ಇಂದೊಂದರಲ್ಲಿಯೂ ದೃಷ್ಟಿಯಿಡದೆ, ನಿಶ್ಚಿಂತನಾಗಿ ನಿತ್ಯಾನಂದದಲ್ಲಿ ರುವ ನೆಂಬುದನ್ನು ನಾನು ಸಣ್ಣ ಮಗುವಿನ ಚಕ್ಕೆಯಿಂದ ಗ್ರಹಿಸಿದೆನು. ಇನ್ನು ಒಬ್ಬಾನೊಬ್ಬ ಕನೈಯಿಂದ ಕಲಿತುಕೊಂಡ ವಿಚಾರವನ್ನು ತಿಳಿಸುವನು ಕೇಳು. ಒಂದು ಗ್ರಾಮದಲ್ಲಿ ಒಬ್ಬ ಕನೈಯಿದ್ದಳು. ಅವ ಳಿಗೆ ವಿವಾಹಕಾಲವು ಬಂದಾಗ, ಅವಳನ್ನು ವರಿಸಬೇಕೆಂದು, ಅಲ್ಲಲ್ಲಿಂದ ಕನ್ಯಾರ್ಥಿಗಳು ಅವಳನ್ನು ನೋಡಿ ಹೋಗುವುದಕ್ಕಾಗಿ ಬರುತಿದ್ದರು.ಒಮ್ಮೆ