ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೮೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೪೮೨ ಶ್ರೀಮದ್ಭಾಗವತವು [ಅಧ್ಯಾ. ೯. ಆ ಹೆಣ್ಣಿನ ಬಂಧುಗಳೆಲ್ಲರೂ ಬೇರೆಲ್ಲಿಗೋ ಹೋಗಿದ್ದುದರಿಂದ, ಮನೆಗೆ, ಬಂದವರಿಗೆ ಆ ಕನೈಯೇ ಆತಿಥ್ಯವನ್ನು ಮಾಡಬೇಕಾಯಿತು. ಇದಕ್ಕಾಗಿ ಆ ಕನೈಯು, ಬಂದವರಿಗೆ ಭೋಜನವನ್ನು ಸಿದ್ಧಪಡಿಸಬೇಕೆಂದು, ತಾನೇ ಮನೆಯೊಳಗೆ ರಹಸ್ಯವಾಗಿ ಬತ್ತವನ್ನು ಕುಟ್ಟುವುದಕ್ಕೆ ತೊಡಗಿದಳು. ಹೀಗೆ ಕುಟ್ಟುವಾಗ ಅವಳ ಕೈಗೆ ತೊಡಿಸಿದ್ಧ ಕವಡೆಯ ಬಳೆಗಳು, ಒಂದ ಕೊಂದಕ್ಕೆ ತಗುಲಿ ಗಲನೆ ಶಬ್ದವಾಯಿತು. ಅಕುಮಾರಿಯು ಬಹಳ ಚತುರೆಯಾದುದರಿಂದ, ತನ್ನಲ್ಲಿ ತಾನು. (( ಅಯ್ಯೋ ! ಇದೇನಿದು! ನಾನು ರಹಸ್ಯವಾಗಿ ಮನೆಯೊಳಗಿದ್ದು, ಯಾರಿಗೂ ತಿಳಿಯದಂತೆ ಕೆಲಸಮಾಡು ತಿದ್ದರೂ, ಈ ಕೈಬಳೆಗಳ ಶಬ್ದದಿಂದ ನನ್ನ ಸ್ಥಿತಿಯು ಹೊರಬೀಳುವುದಲ್ಲಾ! ಈ ಶಬ್ದವನ್ನು ಕೇಳಿದವರು, ಹೆಣ್ಣಿಗೆ ಬೇರೆ ದಿಕ್ಕಿಲ್ಲದುದಕ್ಕಾಗಿ ತಾನೇ ಬತ್ಯವನ್ನು ಕುಟ್ಟುವಳು. ಈ ಬಡ ಹೆಣ್ಣನ್ನು ಮದುವೆಯಾಗಬಾರ” ದೆಂದು ನನ್ನನ್ನು ತಿರಸ್ಕರಿಸುವರಲ್ಲವೆ ? ಎಂದು ನಾಚಿಕೆ ಪಟ್ಟು, ತಾನು ಮಾಡುವ ಕಾಠ್ಯವು ಹೊರಬೀಳಬಾರದೆಂದು, ತನ್ನ ಕೈಬಳೆಗಳಲ್ಲಿ ಕೆಲವನ್ನು ಒಡೆದು ಹಾಕಿ, ಕನ್ಯಾಲಕ್ಷಣಕ್ಕಾಗಿ ಒಂದೊಂದು ಕೈ ಯ ಎರಡೆರಡು ಬಳೆಗಳನ್ನು ಮಾತ್ರ ಉಳಿಸಿಕೊಂಡು, ಮೊದಲಿನಂತೆ ಬy ವನ್ನು ಕುಟ್ಟುವುದಕ್ಕಾರಂಭಿಸಿದಳು. ಆಗಲೂ ಆ ಎರಡೆರಡು ಬಳೆಗಳು ಒಂದಕ್ಕೊಂದಕ್ಕೆ ತಗುಲುವುದರಿಂದ ಶಬ್ದವು ಕೇಳಿಸುತಿತ್ತು. ಅದನ್ನು ನೋಡಿ ಆ ಎರಡೆರಡು ಬಳೆಗಳಲ್ಲಿಯೂ ಒಂದೊಂದನ್ನು ಒಡೆದು ಹಾಕಿ ಒಂದೊಂದು ಕೈಯಲ್ಲಿ ಒಂದೊಂದೇ ಬಳೆಯನ್ನುಳಿಸಿಕೊಂಡಳು. ಆಗ ಸ್ವಲ್ಪವೂ ಶಬ್ದವಿಲ್ಲದೆ ಕೆಲಸವು ನಡೆದುಹೋಗುತಿತ್ತು. ಓ ಯಾದವೇಂ ದ್ರಾ'ಇಂತಹ ಲೋಕತತ್ವವನ್ನು ತಿಳಿಯುವುದಕ್ಕಾಗಿ ಭೂಸಂಚಾರಮಾಡು ತಿದ್ದ ನಾನು, ಆ ಕುಮಾರಿಯಿಂದ ಗ್ರಹಿಸಿದ ಮುಖ್ಯ ವಿಷಯವೇನೆಂದರೆ, ಅನೇಕರು ಒಂದುಕಡೆಯಲ್ಲಿ ಸೇರಿದಾಗ ಕಲಹವುಂಟಾಗುವುದು. ಇಬ್ಬರು ಮಾತ್ರ ಒಂದುಕಡೆಯಲ್ಲಿ ಸೇರಿದಾಗಲೂ, ಮಾತಾಡದೆ ಬಾಯಿಮುಚ್ಚಿ ಕೊಂಡು ಸುಮ್ಮನಿರಲಾರದೆ, ಏನಾದರೂ ಸುದ್ದಿಯನ್ನೆತ್ತಬೇಕಾಗಿ ಬ ರುವುದು. ಆದುದರಿಂದ ಆ ಕುಮಾರಿಯ ಕರಗದಂತೆ ಮನುಷ್ಯನು 5