ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪೮೩ ಅಧ್ಯಾ. ೯.] ಏಕಾದಶxಂಧವು. ಕಾಕಿಯಾಗಿದ್ದಾಗ, ಕಲಹಕ್ಕಾಗಲಿ, ಅನುಪಯುಕ್ತವಾದ ಮಾತುಗಳಿಗಾ ಗಲಿ ಅವಕಾಶವಿಲ್ಲದುದರಿಂದ, ಯೋಗನಿಷ್ಠನು, ಏಕಾಕಿಯಾಗಿದ್ದಾಗಲೇ ಅವನ ಯೋಗಸಿದ್ಧಿಗೆ ಪ್ರತಿಬಂಧಕಗಳೇನೂ ಇಲ್ಲವೆಂಬುದನ್ನು ಗ್ರಹಿಸಿದೆನು. ಆದರಿಂಟಾಚೆಗೆ ಬಾಣಗಾರನಿಂದ ನಾನು ಗ್ರಹಿಸಿದ ವಿಷಯವೇ ನೆಂಬುದನ್ನು ತಿಳಿಸುವೆನು ಕೇಳು! ಮನುಷ್ಯನು ವೈರಾಗ್ಯವನ್ನು ಹಿಡಿದು, ಅದರ ಅಭ್ಯಾಸಬಲದಿಂದ ಮನಸ್ಸನ್ನು ಸ್ಥಿರಪಡಿಸಿಕೊಂಡು, ಸನಜಯ ವನ್ನೂ , ಶಾಸಜಯವನ್ನೂ ಸಾಧಿಸಿ, ಆ ಮನಸ್ಸನ್ನು ಶುಭಾಶ್ರಯವಾದ ಭಗವಂತನ ದಿವ್ಯರೂಪವೊಂದರಲ್ಲಿಯೇ ನೆಲೆಗೊಳಿಸಬೇಕು. ಹೀಗೆ ಮನ ಸ್ಪನ್ನು ಭಗವಂತನಲ್ಲಿ ನೆಲೆಗೊಳಿಸುವುದರಿಂದ, ಕಠ್ಯವಾಸನೆಗಳು ಕ್ರಮ ಕ್ರಮವಾಗಿ ಕುಂದುಬರುವುವು. ಆಗ ಆ ಮನಸ್ಸಿನಲ್ಲಿ ರಜೋಗುಣ ತ ಮೋಗುಣಗಳೆರಡೂ ಅಡಗಿ, ಸತ್ವಗುಣವುಮಾತ್ರ ತಲೆಯೆತ್ತುವುದು. ಸತ್ವಪ್ರಧಾನವಾದ ಆ ಮನಸ್ಸು, ವಿಷಯಾಂತರಸಂಬಂಧವಿಲ್ಲದೆ ಆ ಶುಭಾಶ್ರಯದಲ್ಲಿಯೇ ಲಯಿಸುವುದು. ಹೀಗೆ ಪರಮಾತ್ಮನಲ್ಲಿ ಲಯಿಸಿದ ಮನಸ್ಸಿಗೆ, ಒಳಗಾಗಲಿ, ಹೊರಗಾಗಲಿ ಯಾವುದೂ ತಿಳಿಯಲಾರದು. ಬಾ ಣಗಾರನು, ಬಾಣದ ಅಲಗಿಗೆ ಹದವನ್ನು ಕೊಡುವಾಗ, ಪಕ್ಕದಲ್ಲಿ ಹೋ ಗುತ್ತಿರುವ ಚಕ್ರವರ್ತಿಯನ್ನಾದರೂ ತಲೆಯೆತ್ತಿ ನೋಡದೆ, ಆ ತನ್ನ ಕೆಲಸ ದಲ್ಲಿಯೇ ಏಕಾಗ್ರಚಿತ್ತನಾಗಿರುವಂತೆ, ಆ ಭಗವಂತನಲ್ಲಿ ನಮ್ಮ ಮನಸ್ಸು ಇವನು, ಬೇರೆ ಯಾವುದನ್ನೂ ಗಮನಿಸಲಾರನೆಂಬುದನ್ನು ಆ ಬಾಣಗಾರನ ದೃಷ್ಟಾಂತದಿಂದ ತಿಳಿದುಕೊಂಡರು. ಅದರಿಂದಾಚೆಗೆ ನಾನು ಹಾವುಗಳಚರೆಯನ್ನು ನೋಡಿ, ಗ್ರಹಿಸಿದು ದೇನೆಂದರೆ, ಯೋಗಿಯಾದವನು, ಸರ್ಪದಂತೆ ಜನಗಳ ಗುಂಪಿನಲ್ಲಿ ಸೇರದೆ, ಏಕಾಕಿಯಾಗಿ ಸಂಚರಿಸುತ್ತ, ನೆಲೆಯಾದ ಒಂದು ವಾಸಸ್ಥಾನ ವಿಲ್ಲದೆ,ಯಾರ ಕಣ್ಣಿಗೂ ಬಿಳದೆ, ಗವಿಗಳಲ್ಲಿದ್ದುಕೊಂಡು, ಮಿತಭಾಷಿಯಾಗಿ ಎಚ್ಚರಿಕೆಯಿಂದಿರಬೇಕೆಂಬುದನ್ನು ಗ್ರಹಿಸಿದೆನು. ಮತ್ತು ಮನುಷ್ಯನಿಗೆ ತನ್ನ ದೇಹವೇ ಸ್ಥಿರವಲ್ಲದಿರುವಾಗ, ಆ ಶರೀರಪೋಷಣೆಗಾಗಿ ಗೃಹಾದಿಗ ಇನ್ನು ಕಲ್ಪಿಸಿಕೊಳ್ಳುವುದು ಕೇವಲಶ್ರಮಕಾರಣವೆಂದೂ, ಸರ್ಪವು, ಬೇರೆ